ಪ್ರಧಾನಿ ಪಂಚಾಯತ ವ್ಯಾಪ್ತಿಯಲ್ಲಿನ ಕೆಲ ಹೋಂಸ್ಟೆಗಳು ಹೈಕೋರ್ಟ್ ನಿಯಮ ಉಲ್ಲಂಘಿಸಿವೆ
Some homestays in the Pradhan Mantri Panchayat area have violated the High Court rules
ಕಾರವಾರ 13 : ಜೊಯಿಡಾ ತಾಲೂಕಿನ ಪ್ರಧಾನಿ ಪಂಚಾಯತ ವ್ಯಾಪ್ತಿಯಲ್ಲಿನ ಕೆಲ ಹೋಂಸ್ಟೆಗಳು ಹೈಕೋರ್ಟ್ ನಿಯಮ ಉಲ್ಲಂಘನೆ ಮಾಡಿವೆ ಎಂದು ಬಾಮಣಗಿ ನಾಗರಿಕ, ಸಮಾಜ ಸೇವಾ ಕಾರ್ಯಕರ್ತ ಕೃಷ್ಣ ಟಿ.ಭಟ್ ಆರೋಪಿಸಿದರು. ಕಾರವಾರದ ಸೋಮವಾರ ಪತ್ರಿಕಾ ಭವನದಲ್ಲಿ ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ಅವರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು, ಜೊಯಿಡಾ ತಾಲೂಕಿನ ಪ್ರಧಾನಿ ಪಂಚಾಯತನ ಕೆಲ ಸದಸ್ಯರು ಹೋಂ ಸ್ಟೇ ನಡೆಸುತ್ತಿದ್ದು, ಡಿಜೆ ಅಬ್ಬರ, ಪರಿಸರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಈ ಸಂಬಂಧ ಹೈಕೋರ್ಟ್ ನೀಡಿದ ಸೂಚನೆಗಳನ್ನು ಅಧಿಕಾರಿಗಳು, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪಾಲಿಸುತ್ತಿಲ್ಲ .
ಅನೇಕ ಸಲ ಅರ್ಜಿ ಕೊಟ್ಟಾಗಿದೆ. ಪ್ರವಾಸೋದ್ಯಮಿಗಳು, ಅಧಿಕಾರಿಗಳು, ಪೊಲೀಸರು ಶಾಮೀಲಾಗಿ ಹೈಕೋರ್ಟ್ ಸೂಚನೆಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂದು ಕೃಷ್ಣ ಭಟ್ ಹೇಳಿದರು. ಪ್ರಧಾನಿ ಗ್ರಾಪಂ ವ್ಯಾಪ್ತಿಯಲ್ಲಿ 35 ಹೋಂಸ್ಟೇ ಇವೆ ಎಂದು ಪಂಚಾಯತ್ ಹೇಳುತ್ತಿದೆ. ಆದರೆ 40 ರಿಂದ 45 ಹೋಂ ಸ್ಟೇ ಇಲ್ಲಿವೆ. ನಿಯಮ ಬಾಹಿರವಾಗಿ ಕೆಲ ಹೋಂಸ್ಟೇ ನಡೆಯುತ್ತಿವೆ. ಈಜು ಕೊಳಕ್ಕೆ ಅನುಮತಿ ಇಲ್ಲದೆ ಇದ್ದರೂ ಈಜು ಕೊಳ ಕಟ್ಟಿ ರಾತ್ರಿ 2 ಗಂಟೆತನಕ ಕೇಕೇ ಮೋಜು ನಡೆಯುತ್ತಿದೆ .
ಅಕ್ರಮ ಮದ್ಯ ಸೇವನೆ ನಡೆಯುತ್ತದೆ. ಡಿಜೆ ಹಚ್ಚಿ ಸುತ್ತ ಮುತ್ತಲ ಜನರಿಗೆ ನಿದ್ದೆ ಹಾರಿ ಹೋಗಿದೆ. ಇದನ್ನು ನಿಲ್ಲಿಸಲು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂದರು. ಹೊಂಸ್ಟೇ ಗಳನ್ನು ಹೊರಗಿನ ಜನ ಲೀಜ್ ನಲ್ಲಿ ಭೂಮಿ ಪಡೆದು ಹೋಂಸ್ಟೇ ನಡೆಸಲಾಗುತ್ತಿದೆ. ಪಂಚಾಯತನ ನಾಲ್ಕೈದು ಜನ ಸದಸ್ಯರು ಸಹ ಹೊಂಸ್ಟೇ ಗಳಿವೆ. ನಿಯಮ ಬಾಹಿರವಾಗಿ ಪರಿಸರ ಹಾನಿ ಮಾಡುತ್ತಿದ್ದಾರೆ. ಶಬ್ದ ಮಾಲಿನ್ಯ ಇದೆ. ಕಾಡು ಪ್ರಾಣಿಗಳು, ಜನ ಸಾಮಾನ್ಯರು ಇದರಿಂದ ತೊಂದರೆ ಪಡುತ್ತಿದ್ದಾರೆ. ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಮೌನವಾಗಿದೆ ಎಂದು ಕೃಷ್ಣ ಭಟ್ ಆರೋಪಿಸಿದರು.
ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ಮಾತನಾಡಿ ಗೋಕರ್ಣ, ಮುರುಡೇಶ್ವರ, ದಾಂಡೇಲಿ ಭಾಗದಲ್ಲಿ ಕೆಲ ಪ್ರಕರಣಗಳಲ್ಲಿ ಹೈಕೋರ್ಟ ಆದೇಶಗಳನ್ನು ಉಲ್ಲಂಘಿಸಲಾಗುತ್ತಿದೆ. ಜನಪ್ರತಿನಿಧಿಗಳುಬ ಹೇಳಿದರೆಂದು , ಅಧಿಕಾರಿಗಳು ತಪ್ಪು ಮಾಡಬಾರದು. ಕೊನೆಯದಾಗಿ ಅಧಿಕಾರಿಗಳು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೆಲ ರೆಸಾರ್ಟ ಮತ್ತು ಹೋಂ ಸ್ಟೇಗಳು ನಿಯಮ ಉಲ್ಲಂಘಿಸಿವೆ.
ಮುರುಡೇಶ್ವರ ದಲ್ಲಿ ಓಶನ್ ವಿವ್ಯು ವಿಧವೆ ನಿರ್ಮಲ ಅವರ ಮನೆಗೆ ಹೋಗುವ ದಾರಿ ಬಂದ್ ಮಾಡಿದ್ದಾರೆ. ಗೋಕರ್ಣ ವ್ಯಾಪ್ತಿಯಲ್ಲಿ ಕೆಲ ರೆಸಾರ್ಟ್ ಮಾಲೀಕರು ಆರು ತಿಂಗಳಲ್ಲಿ ಅಕ್ರಮ ರೂಂ ತೆಗೆಯುವುದಾಗಿ ಹೈಕೋರ್ಟ್ಗ ಬರೆದು ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಲ್ಯಾಂಡ್ ಮಾಫಿಯಾ , ಡ್ರಗ್ ಮಾಫಿಯಾ , ಮರಳು ಮಾಫಿಯಾ ಇದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಅಂದರು. ಆಡಳಿತ ಪಕ್ಷ ತಪ್ಪು ಕೆಲಸ ಮಾಡಿಸುತ್ತಿದ್ದರೆ ,
ಪ್ರಶ್ನಿಸಬೇಕಾದ ವಿರೋಧ ಪಕ್ಷದವರು ಮಾತಾಡುತ್ತಿಲ್ಲ. ಅವರು ಸಹ ಅಧಿಕಾರ ನಡೆಸುವವರ ಜೊತೆ ಶಾಮೀಲಾಗಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸತ್ತಿದೆ ಎಂದು ಹೈಕೋರ್ಟ್ ವಕೀಲ ದತ್ತು ನಾಯ್ಕ ಅಪಾದಿಸಿದರು. ಮುರುಡೇಶ್ವರ, ಗೋಕರ್ಣ ,ದಾಂಡೇಲಿಯಲ್ಲಿ ಹೆಚ್ಚು ನಿಯಮ ಉಲ್ಲಂಘನೆಯಾಗಿವೆ . ಪ್ರವಾಸೋದ್ಯಮ ತಾಣಗಳಲ್ಲಿ ಬಡವರು ಬದುಕುವಂತಿಲ್ಲ ದಂತಾಗಿದೆ ಎಂದರು. ಹೈಕೋರ್ಟ್ ಆದೇಶಗಳನ್ನು ಜಿಲ್ಲಾಡಳಿತ, ಪ್ರವಾಸೋದ್ಯಮಿಗಳು ಉಲ್ಲಂಘನೆ ಮಾಡಿದರೆ ,
ಮುಂದಿನ ನಡೆ ಕಷ್ಟಕರ. ಇದರ ಪರಿಣಾಮವನ್ನು ಉಲ್ಲಂಘನೆ ಮಾಡಿದವರು ಅನುಭವುಸುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಭಟ್, ಬಾಮಣಗಿ, ಶಿವರಾಮ ದೇಸಾಯಿ, ಪರುಶುರಾಮ ಮೊರಸ್ಕರ್ ,ಸಂದೀಪ ನಾಯ್ಕ ಮುರುಡೇಶ್ವರ , ರಾಜಕುಮಾರ ಎಚ್. ಗಾಂವ್ಕರ್ , ಸೂರಜ್ ಭಟ್ , ಮುಕುಂದ ಪುರಸ್ಕರ, ವಾಮನ ಮೊರಸ್ಕರ, ಸುಭಾಷ್ ಗಾಂವ್ಕರ್ , ಪ್ರಕಾಶ್ ನಾಯ್ಕ, ಉಮೇಶ್ ಮಿರಾಶಿ, ರವಿದಾಸ ಪಿ.ರಾಯ್ಕರ್ ಉಪಸ್ಥಿತರಿದ್ದರು .
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 