ಸಮತೋಲಿತ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಸತ್ವರಕ್ಷಣೆ: ಹೆಚ್.ಡಿ.ಕೋಳೆಕರ
Soil fertility is maintained through the use of balanced fertilizers: H.D. Kolekara
ಬೆಳಗಾವಿ, ಮೇ.11: ಕೃಷಿಯಲ್ಲಿ ಮಿತಿಮೀರಿದ ಯೂರಿಯಾ ಹಾಗೂ ರಾಸಾಯನಿಕ ಪೀಡೆನಾಶಕಗಳ ಬಳಕೆಯು ಪರಿಸರ ಹಾಗೂ ಮಾನವನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಭೂಮಿಯ ಫಲವತ್ತತೆಯೂ ಕೂಡ ಕ್ಷೀಣಿಸುತ್ತಿದೆ. ಆದ್ದರಿಂದ ಆರೋಗ್ಯಕರ ಮಣ್ಣು ಹಾಗೂ ಪರಿಸರವನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಲು ವ್ಯವಸ್ಥಿತ ಹಾಗೂ ವೈಜ್ಞಾನಿಕ ಕೃಷಿಯ ಅವಶ್ಯಕತೆ ಇದೆ ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಹೆಚ್.ಡಿ.ಕೋಳೆಕರ ಹೇಳಿದರು.
ಬೆಳಗಾವಿ ತಾಲೂಕಿನ ಧಾಮಣೆ (ಎಸ್.) ಗ್ರಾಮದಲ್ಲಿ ಶುಕ್ರವಾರ ಏರಿ್ಡಸಿದ ಭೂಮಿ ತಾಯಿ ರಕ್ಷಣಾ ಕಣ್ಗಾವಲು ಸಮಿತಿಯ ಸಭೆ, ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಾ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಸ್. ಪಟಗುಂದಿ ಅವರು ಪ್ರಾಸ್ತ್ತಾವಿಕವಾಗಿ ಮಾತನಾಡಿ ಕೃಷಿಯಲ್ಲಿ ಅತಿಯಾದ ಯೂರಿಯಾ ಬಳಕೆಯಿಂದ ಆಗುವ ಹಾನಿಯ ಬಗ್ಗೆ ಮಾತನಾಡುತ್ತಾ ಯೂರಿಯಾದ ರಸಗೊಬ್ಬರಕ್ಕೆ ಬದಲಾಗಿ ಬಳಸಬಹುದಾದ ಇತರೆ ಸಂಯುಕ್ತ ರಸಗೊಬ್ಬರಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕೆ.ಎಲ್.ಇ. ಕೆ.ವ್ಹಿ.ಕೆ. ಮತ್ತಿಕೊಪ್ಪ ವಿಜ್ಞಾನಿ ಎಸ್.ಎಮ್.ವಾರದ ಅವರು ಬೀಜೋಪಚಾರದ ಮಹತ್ವ, ವಿಧಾನ ಹಾಗೂ ಪ್ರಯೋಜನಗಳ ಕುರಿತು ಸವಿವರವಾಗಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಗ್ರಾಮದ ಪಿ.ಕೆ.ಪಿ.ಎಸ್. ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ಶ್ರೀಮಂತಗೌಡಾ ಪಾಟೀಲ, ಗ್ರಾಮ ಆಡಳಿತ ಅಧಿಕಾರಿ ಸಿದ್ದು ಮರಾಠೆ, ಗ್ರಾಮದ ಪ್ರಗತಿಪರ ರೈತರು, ರೈತ ಮಹಿಳೆಯರು, ಕೃಷಿ ಸಖಿಯರು, ಪರಿಕರ ಮಾರಾಟಗಾರರು ಹಾಜರಿದ್ದರು.
ಆತ್ಮಾ ತಾಲೂಕಾ ತಾಂತ್ರಿಕ ವ್ಯವಸ್ಥಾಪಕರಾದ ರಾಜಶೇಖರ ಭಟ್ ಸ್ವಾಗತಿಸಿದರು, ಕೃಷಿ ಸಖಿ ರಾಜಶ್ರೀ ವಂದಿಸಿದರು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಪಟಗುಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 