ಲೋಕದರ್ಶನ ವರದಿ
ಮೂಡಲಗಿ 01: ಜಗತ್ತು ವಿಶಾಲವಾಗಿರುವುದರಿಂದ ಒಂದೇ ಸಲ ಪ್ರಗತಿ ಹೊಂದಲು ಸಾಧ್ಯವಿಲ್ಲ ಆದರೆ ಈ ಕಾರ್ಯವು ಸಂಘ ಸಂಸ್ಥೆಗಳಿಂದ ಸಾಧ್ಯವಿದೆ ಸಂಘ ಸಂಸ್ಥೆಗಳು ಸಮಾಜದ ಆಧಾರ ಸ್ತಂಭಗಳು ಎಂದು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾಜರ್ುನ ಸಿಂಧೂರ ಹೇಳಿದರು.
ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪಾ ಢವಳೇಶ್ವರ ಅವರ ಪುತ್ರಿ ಕುಮಾರಿ. ಸಾದ್ವಿ ಹುಟ್ಟು ಹಬ್ಬದ ಪ್ರಯುಕ್ತ ಗಂಗನಗರದ ಅಂಗನವಾಡಿ ಆವರಣ ಮತ್ತು ಸಾರ್ವಜನಿಕ ಶೌಚಾಲಯದ ಮುಂಭಾಗದಲ್ಲಿ ಯುವ ಜೀವನ ಸೇವಾ ಸಂಸ್ಥೆಯಿಂದ ನಿಮರ್ಿತವಾದ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿ, ಯುವ ಜೀವನ ಸೇವಾ ಸಂಸ್ಥೆ ಪಟ್ಟಣದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇದೇ ರೀತಿ ಎಲ್ಲರೂ ನಿಸ್ವಾರ್ಥ ಸೇವೆ ಮಾಡಿದಲ್ಲಿ ಸಮಾಜ ಪ್ರಗತಿ ಪಥದಲ್ಲಿ ಸಾಗುತ್ತದೆ ಎಂದರು.
ಪುರಸಭೆಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ಯುವ ಜೀವನ ಸೇವಾ ಸಂಸ್ಥೆಯೂ ಹಲವು ವರ್ಷಗಳಿಂದ ಪಟ್ಟಣದಲ್ಲಿ ಸಮಾಜಸೇವ ಕಾರ್ಯ ಕೈಗೊಳ್ಳುತ್ತ ಬಂದಿದೆ. ನಗರದಲ್ಲಿ ಗಿಡಗಳನ್ನು ನೆಡುವುದು, ಸ್ವಚ್ಚತಾ ಕಾರ್ಯಕ್ರಮ, ಬಡ ವಿದ್ಯಾಥರ್ಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತ ಬರುತ್ತಿದೆ. ಸಂಸ್ಥೆಯೂ ಇನ್ನೂ ಹೆಚ್ಚಿನ ಸಮಾಜ ಸೇವಾ ಕಾರ್ಯದಲ್ಲಿ ತೊಡಗಲಿ ಸಂಸ್ಥೆಯ ಜೊತೆ ಪುರಸಭೆಯೂ ಕೈಜೊಡಿಸುತ್ತದೆ ಎಂದರು.
ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಮಾತನಾಡಿ, ದುಂದು ವೆಚ್ಚ ಮಾಡಿ ಹುಟ್ಟು ಹಬ್ಬಗಳನ್ನು ಆಚರಿಸುವ ಬದಲಾಗಿ ಈ ಸಂಸ್ಥೆಯ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಬೇಕು. ತಮ್ಮ ತಮ್ಮ ಹುಟ್ಟು ಹಬ್ಬಕ್ಕೆ ಎರಡು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದರೇ ಮುಂದಿನ ಪೀಳಿಗೆಗೆ ಬಹು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಕೆ.ಸಿ ಕನಶೆಟ್ಟಿ ಮಾತನಾಡಿ, ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿ ಅಂಗನವಾಡಿ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಸಂತಸದ ವಿಷಯವಾಗಿದೆ. ಪಟ್ಟಣದಲ್ಲಿ ಕೆಲವು ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ ಈ ಬಗ್ಗೆ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ, ಉಪಾಧ್ಯಕ್ಷ ರಮೇಶ ಉಪ್ಪಾರ, ಮಾಜಿ ಪುರಸಭೆ ಸದಸ್ಯ ರಮೇಶ ಸಣ್ಣಕ್ಕಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ, ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್, ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಸುನೀತ ಮರೆಪ್ಪಗೋಳ, ರಮೇಶ ಸಣ್ಣಕ್ಕಿ ಇವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಧಿಕಾರಿ ದೀಪಕ ಹದರ್ಿ, ಹಣಮಂತ ಸತರಡ್ಡಿ, ಮರೆಪ್ಪ ಮರೆಪ್ಪಗೋಳ, ಭಗವಂತ ಉಪ್ಪಾರ, ಶಂಕರ ತುಕ್ಕನ್ನವರ, ರಾಜು ಭಜಂತ್ರಿ, ಸಂಸ್ಥೆಯ ಸದಸ್ಯರಾದ ಸುಭಾಸ್ ಗೊಡ್ಯಾಗೋಳ, ಸುಧೀರ ನಾಯರ್, ಗುರುನಾಥ ಗಂಗನ್ನವರ, ಸುಭಾಸ್ ಮನ್ನಿಕೇರಿ, ಬಾಬು ಇತಾಪಿ, ಈಶ್ವರ ಢವಳೇಶ್ವರ, ಅಂಗನವಾಡಿ ಕಾರ್ಯಕತರ್ೆಯರಾದ ಮಾಲತಿ ಸಪ್ತಸಾಗರ, ಮಾಲಾ ಬಿಸನಕೊಪ್ಪ, ದೀಪಾ ದೇಸೂರಕರ, ಸುಜಾತ ಕೊಕಟನೂರ, ವಿಜಯಲಕ್ಷ್ಮಿ ಶೇರೆಗಾರ, ಸುಶೀಲ ಮದುಗುಣಕಿ ಮತ್ತಿತರರು ಉಪಸ್ಥಿತರಿದ್ದರು.