ಸಾಹಿತಿಗಳನ್ನು ಸಮಾಜ ತಾನಾಗಿ ಗುರುತಿಸಿ ಗೌರವಿಸಬೇಕು: ಎಲ್‌.ಎಸ್‌.ಶಾಸ್ತ್ರೀ

ಸಾಹಿತಿಗಳನ್ನು ಸಮಾಜ ತಾನಾಗಿ ಗುರುತಿಸಿ ಗೌರವಿಸಬೇಕು: ಎಲ್‌.ಎಸ್‌.ಶಾಸ್ತ್ರೀ Society should recognize and respect writers: L.S. Shastri

ಬೆಳಗಾವಿ 25: ಸಾಮಾಜಿಕ ಜವಾಬ್ದಾರಿಯಿಂದ ಲೇಖನಗಳನ್ನು ಬರೆದರೆ ಮಾತ್ರ ಸಮಾಜ ಹಿತಕ್ಕೆ ಪೂರಕವಾದ ಬರೆಹಗಳ ರಚನೆಯಾಗಲು ಸಾಧ್ಯ ಎಂದು ಹಿರಿಯ ಸಾಹಿತಿ, ಪತ್ರಕರ್ತ ಎಲ್‌.ಎಸ್‌.ಶಾಸ್ತ್ರೀ ಹೇಳಿದರು. ನಗರದ ತನ್ಮಯ ಚಿಂತನ ಚಾವಡಿ ಬಳಗದ ಆಶ್ರಯದಲ್ಲಿ ಅಟೋನಗರದ ಲಕ್ಷ್ಮೀ ಪ್ರಿಂಟರ್ಸ್‌ ಸಭಾಂಗಣದಲ್ಲಿ ಹಿರಿಯ ಸಾಹಿತಿ ಸ.ರಾ. ಸುಳಕೂಡೆಯವರು ಬರೆದ ಸಮಾಲೋಚನೆ ಚುಟುಕುಗಳ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.       

ಸಾಹಿತಿಗಳಾದವರು ಪ್ರಶಸ್ತಿ- ಪ್ರಶಂಸೆಗಳ ಬೆನ್ನು ಹತ್ತದೆ ತಮ್ಮ ಕರ್ತವ್ಯ ತಾವು ಮಾಡುತ್ತ ಹೋಗಬೇಕು. ಸಮಾಜ ತಾನಾಗಿ ಅದನ್ನು ಗುರುತಿಸಿ ಗೌರವಿಸಬೇಕು. ನಾಲ್ಕು ಸಾಲುಗಳ ಸಾವಿರದ ಹನ್ನೆರಡು ಚುಟುಕುಗಳ ಮೂಲಕ ಸುಳಕೂಡೆಯವರು ಸಮಾಜಕ್ಕೆ ಉದಾತ್ತ ಸಂದೇಶಗಳನ್ನು ನೀಡಿದ್ದು, ಅವುಗಳಲ್ಲಿ ಕಾಣುವ ಸಾಮಾಜಿಕ ಕಾಳಜಿ, ಸಾಮಾಜಿಕ ಚಿಂತನೆಗಳು ಪ್ರಶಂಸನೀಯವೆಂದರಲ್ಲದೆ ಹಲವು ಚುಟುಕುಗಳನ್ನು ಉದಾಹರಿಸಿದರು.                         

ಅಧ್ಯಕ್ಷತೆಯನ್ನು ವಹಿಸಿದ ಕಿತ್ತೂರು ಸಂಸ್ಥಾನದ ವಂಶಜರಾಜ ಸೋಮಶೇಖರ ದೇಸಾಯಿಯವರು ಮಾತನಾಡಿ,  ಸತ್ಸಂಗಗಳು ಮಾನವ ಜೀವನವನ್ನು ರೂಪಿಸುತ್ತವೆ. ನಾವೆಲ್ಲರೂ ಸತ್ಸಂಗದಲ್ಲಿ ಭಾಗವಹಿಸುತ್ತ ಈ ಭಾಗದಲ್ಲಿ ಸಂಘಟಿತರಾಗೋಣ. ಇಂತಹ ಸಮಾರಂಭಗಳಲ್ಲಿ ಮಕ್ಕಳು, ಯುವಕರು ಭಾಗವಹಿಸುವಂತೆ ಮಾಡಿ ಒಳ್ಳೆಯ ಸಂಸ್ಕಾರ ನೀಡಬೇಕೆಂದರು. ಸಾನಿಧ್ಯ ವಹಿಸಿದ ಸಾಹಿತಿ, ಪ್ರವಚನಕಾರ ಮೃತ್ಯುಂಜಯ ಹಿರೇಮಠ ಅವರು ಮಾತನಾಡಿ,  ಈ ಕೃತಿಯು ಜನಸಾಮಾನ್ಯರಿಗೆ ಉಪಯುಕ್ತವಾಗಿದ್ದು, ಸಾರ್ವಜನಿಕರು ಕೃತಿ ಖರೀದಿಸಲು ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಗೌ.ಕಾರ್ಯದರ್ಶಿ ಎಮ್‌.ವಾಯ್‌. ಮೆನಸಿಣಕಾಯಿ ಮತ್ತು ಉಪನ್ಯಾಸಕ ಬಿ.ಬಿ. ಮಠಪತಿಯವರು ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯನ್ನು ಬೆಳೆಸುವಲ್ಲಿ ಚುಟುಕು ಸಾಹಿತ್ಯ ಮಹತ್ತರ ಸಹಕಾರಕ್ಕೆ ಧನ್ಯವಾದ ಹೇಳಿ, ಚುಟುಕು ಸಾಹಿತ್ಯಕ್ಕೆ ತನ್ನದೇ ಯಾದ ಮಿಮಾಂಶೆ ಅಗತ್ಯವೆಂದರು. ಪಾತ್ರ ವಹಿಸಿದೆ. ಶರಣ ಸಾಹಿತ್ಯದಲ್ಲಿ ಆಸಕ್ತರಾಗಿರುವ ಎ.ಎಮ್‌. ಕೆಂಪಿಗೌಡರ ಅವರು ವಚನ ಸಾಹಿತ್ಯ ಚುಟುಕು ಸಾಹಿತ್ಯಕ್ಕೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಬೆಂಕಿ ಬಿರುಗಾಳಿ ಯೂಟೂಬ ಸಂಚಾಲಕ ಶಂಕರ ತಲ್ಲೂರ ಅವರು ಮಾತನಾಡಿ, ಸಚೇತನ ಕೃತಿಯೊಳಗಿನ ಚುಟುಕುಗಳು ಮಾರ್ಮಿಕವಾಗಿವೆ. ಇಂಥ ಚುಟುಕುಗಳು ಜನಮನಕ್ಕೆ ತಲುಪಿಸುವ ಕಾರ್ಯ ಅಗತ್ಯವೆಂದರು.