ಅಂಗವಿಕಲರ ಸೇವೆಯಲ್ಲಿ ಸಮಾಜ ತೊಡಗಿ ಅವರ ಸಬಲತೆಗೆ ಕೈಜೋಡಿಸಬೇಕು : ವಿಕ್ರಮ ಇನಾಮದಾರ
Society should engage in serving the disabled and join hands in empowering them: Vikram Inamdara
ಲೋಕದರ್ಶನ ವರದಿ
ಬೆಳಗಾವಿ 15 : ಸಮಾಜ ಸೇವೆಯೇ ಮುಖ್ಯವಾಗಿರುವ ಕಾಯಕದಲ್ಲಿ ತೊಡಗಿಕೊಂಡರೆ ಸಾಕಷ್ಟು ನೆಮ್ಮದಿಸಿಗಲು ಸಾಧ್ಯ. ಅದರಲ್ಲಿಯೂ ಮುಖ್ಯವಾಗಿ ಅಂಗವಿಕಲರು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಬದಕಲು ಕಷ್ಟಪಡುತ್ತಿರುವವರಿಗೆ ಸ್ಪಂಧಿಸಬೇಕಾಗಿದೆ. ಅವರ ಕುಟುಂಭಗಳು ಆರ್ಥಿಕವಾಗಿ ಹಿಂದುಳಿದಿದ್ದರೆ ಅವರ ಆರೈಕೆ ಬಹಳ ಕಷ್ಟಕರ. ಆದ್ದರಿಂದ ಅಂಗವಿಕಲರ ಸೇವೆಯಲ್ಲಿ ಸಮಾಜತೊಡಗಿ ಅವರ ಸಬಲತೆಗೆ ಕೈಜೋಡಿಸಬೇಕೆಂದು ಯುವ ಧುರೀಣರಾದ ವಿಕ್ರಮ ಇನಾಮದಾರ ಅವರಿಂದಿಲ್ಲಿ ಹೇಳಿದರು.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಶ್ರೀಡಿಬಿ ಇನಾಮದಾರ ಫೌಂಡೇಶನ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ) ಇವುಗಳ ಸಂಯುಕ್ತಾಶ್ರದಲ್ಲಿ ಅಂಗವಿಕಲರಿಗೆ ತ್ರಿಚಕ್ರವಾಹನ ಹಾಗೂ ಜೀವನಾಧಾರಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ತಂದೆ ಡಿಬಿ ಇನಾಮಾದಾರ ಅವರ ಮನಸ್ಸಿನಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ.
ಅವರ ಹೆಸರಿನಲ್ಲಿಯೇ ಪ್ರತಿಷ್ಠಾನ ಸ್ಥಾಪಿಸಿ ಸೇವೇ ಗೈಯುತ್ತಿದ್ದೇವೆ. ಈ ಭಾಗದಲ್ಲಿ ಅಂಗವಿಕಲತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಅವಶ್ಯವಿರುವ ಕಾಳಜಿ ವಹಿಸುವದರೊಂದಿಗೆ ಅವರ ಅಗತ್ಯಗಳನ್ನು ಪೂರೈಸಲು ಡಿಬಿ ಇನಾಮದಾರ ಫೌಂಡೇಶನ ಸದಾ ಒಂದು ಹೆಜ್ಜೆ ಮುಂದಿರುತ್ತದೆ. ಆದ್ದರಿಂದ ಯಾರೇ ಕೂಡ ಅಂಗವಿಕಲತೆಯಿಂದ ಬಳಲುತ್ತಿದ್ದರೆ ನಮ್ಮ ಗಮನಕ್ಕೆ ತೆಗೆದುಕೊಂಡು ಬರಬೇಕೆಂದು ಕೋರಿದರು.
ಪೌಂಡೇಶನ್ನ ಲಕ್ಷ್ಮಿ ಇನಾಮದಾರ ಅವರು ಮಾತನಾಡಿ, ಸಮಾಜ ಸೇವೆಯನ್ನೇ ಮುಖ್ಯವಾಗಿಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಮುಖ್ಯವಾಗಿ ಈ ಭಾಗದಲ್ಲಿ ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ಕುರಿತು ಜಾಗೃತಿ ಕಡಿಮೆ ಇದೆ. ಆದ್ದರಿಂದ ಸರಕಾರ ಹಾಗೂ ಸರಕಾರೇಥರ ಸಂಸ್ಥೆಗಳಲ್ಲಿ ಅಂಗವಿಕಲರಿಗೆಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತದೆ. ಅಲ್ಲದೇ ಮಹಿಳೆಯರ ಆರೋಗ್ಯ ಕಾಳಜಿಗೂ ಕೂಡಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಅವಶ್ಯವಿರುವರೋಗ ನಿರೂಧಕ ಹಾಗೂ ರೋಗ ತಡೆಗಟ್ಟುವ ವ್ಯಾಕ್ಸಿನೇಶನ ಹಾಕಿಸಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಹಾಂತೇಶ ಪಾಶ್ಚಾಪೂರ, ಮಡಿವಾಳಪ್ಪವನ್ನೂರ, ಬಿಟಿಖಂಡಪ್ಪನವರ, ಪುಂಡಲೀಕ ಹಾರುಗೊಪ್ಪ , ಈರಣ್ಣ ವನ್ನೂರ, ಪ್ರವೀಣ ಕೆಸರಕೊಪ್ಪ, ವಿಜಯ ಮೆಳವಂಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 