ಛಾಯಾಗ್ರಾಹಕ ಒತ್ತಡ ಮಧ್ಯ ಸಮಾಜ ಸೇವೆ ಶ್ಲಾಘನೀಯ: ಸ್ವಾಮೀಜಿ

ಛಾಯಾಗ್ರಾಹಕ ಒತ್ತಡ ಮಧ್ಯ ಸಮಾಜ ಸೇವೆ ಶ್ಲಾಘನೀಯ: ಸ್ವಾಮೀಜಿ Social service amidst photographer pressure is commendable: Swamiji

ಹೂವಿನಡಹಗಲಿ  21:  ಮಾಧ್ಯಮ ಹಾಗೂ ಛಾಯಾಗ್ರಾಹಕ ತಮ್ಮ ವೃತ್ತಿಯಲ್ಲಿ ಸಾಕಷ್ಟು ಒತ್ತಡಗಳ ಮದ್ಯ  ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.ಪಟ್ಟಣದ  ಶಿವಶಾಂತವೀರ ಸಮುದಾಯಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘ ಏರಿ​‍್ಡಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿ  ಪ್ರತಿಯೊಬ್ಬರೂ ತಮ್ಮ ಕಾಯಕದಲ್ಲಿ ಶಿಸ್ತನ್ನು ಅಳವಡಿಸಿಕೊಂಡರೆ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು. 

ಶ್ರೀರಾಮ ದೇಗುಲದ ಧರ್ಮದರ್ಶಿ ಡಾ.ರಾಕೇಶಯ್ಯ ರಾಮಸ್ವಾಮಿ, ಫಾ. ಡೆಂಜಿಲ್ ವೇಗಸ್, ಮಸ್ಟರ್ ವಿದ್ಯಾಸಂಸ್ಥೆಯ ಪ್ರಾಂಶು ಪಾಲ ನವಾಜ್ ಮುಈನಿ ಫೈಝಾನಿ ಹಾಗೂ ಇತರರು ಮಾತನಾಡಿದರು.ಉಪನ್ಯಾಸಕ ಎಂ.ಪಿ.ಎಂ.ಶಿವಪ್ರಕಾಶ್  ಉಪನ್ಯಾಸ ನೀಡಿದರು. ಛಾಯಾಗ್ರಾಹಕರ ಸಂಘದ ಸಂಸ್ಥಾಪಕ ಅಧ್ಯಕ್ಷ ವಿಶ್ವನಾಥ ಸಿರಸಂಗಿ, ಗೌರವಾಧ್ಯಕ್ಷ ಬಿ.ಸಿದ್ದೇಶ, ಅಧ್ಯಕ್ಷ ನವೀನ್ ಕುಮಾರ್ ಗಡಿಗಿ, ಮಲ್ಲನಗೌಡ ಪಾಟೀಲ್, ಬಿ.ಎಂ. ಕರಿಬಸವರಾಜ, ಬಿ.ಮಂಜುನಾಥ, ಕೆ.ಜಿ.ಕೊಟ್ರೇಶ, ಎಚ್ ಲಾಘವೇಂದ್ರ, ಸೋಮಶೇಖರಯ್ಯ, ಎ.ಎಂ.ಮಲ್ಲಿಕಾರ್ಜುನಗೌಡ, ಕಾರ್ಮಿಕ ನೀರೀಕ್ಷಕ ಮೌನೇಶ, ರಾಮಣ್ಣ ಇತರರಿದ್ದರು. 

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪೃಥ್ವಿರಾಜ ಕರ್ಣಂ, ನಕ್ಷತ್ರ, ಗಾಯತ್ರಿ ಅಕ್ಕಿ, ಬಿ.ಆದರ್ಶ ಬಸೆಟ್ಟಿ ಶರತ್ ಕುಮಾರ್ ಮಡಿವಾಳರ ಅವರನ್ನು ಗೌರವಿಸಲಾಯಿತು. ಮೇಘನ, ಚಂದ್ರು, ಎಚ್‌.ಎಂ. ಮಲ್ಲಿಕಾರ್ಜುನಗೌಡ, ಶ್ರೀಲತಾ, ಎ.ರಾಘವೇಂದ್ರ ನಿರ್ವಹಿಸಿದರು.