ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಮರಾಠಾ ಸಮಾಜದ ಮುಖಂಡರ ಸಭೆ
Social and Educational Survey: Meeting of Maratha community leaders
ಗದಗ 17 : ಕರ್ನಾಟಕ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗ ಇದೇ ಸೆ. 22 ರಿಂದ ಅ. 7 ರ ವರೆಗೆ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಕುರಿತು ಜಾತಿಗಣತಿಗಾಗಿ ಮನೆ-ಮನೆಗೆ ಬರುವ ಗಣತಿದಾರರಿಗೆ ಮರಾಠರು ಅನುಸೂಚಿ ಧರ್ಮದ ಕಾಲಂನಲ್ಲಿ “ಹಿಂದೂ” ಎಂದು ಜಾತಿ ಕಾಲಂನಲ್ಲಿ “ಮರಾಠಾ” ಎಂದು ಉಪಜಾತಿ ಕಾಲಂನಲ್ಲಿ “ಕುಣಬಿ ಎಂದು ಮಾತೃಭಾಷೆಯ ಕಾಲಂನಲ್ಲಿ “ಮರಾಠಿ” ಬರೆಸಬೇಕು ಎಂದು ಮರಾಠಾ ಸಮಾಜದ ರಾಷ್ಟ್ರೀಯ ಮುಖಂಡರಾದ ಪಿ.ಜಿ.ಆರ್.ಸಿಂದ್ಯಾ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜರುಗಿದ ಮರಾಠಾ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮರಾಠರಿದ್ದು ಸರಕಾರದ ಹಿಂದಿನ ಸಮೀಕ್ಷೆಯಲ್ಲಿ ಕೇವಲ 16 ಲಕ್ಷ ಮರಾಠಿಗರಿದ್ದಾರೆ ಎಂದು ಗುರುತಿಸಿರುತ್ತಾರೆ. ಇದರಿಂದ ಎಲ್ಲ ಮರಾಠಾ ಬಾಂಧವರು ಸರಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದೆವೆ. ಅದ್ದರಿಂದ ಎಲ್ಲರೂ ಜಾತಿ ಗಣತಿಯಲ್ಲಿ ತಪ್ಪದೆ ಮೇಲ್ಕಂಡ ಒಮ್ಮತದ ಅಭಿಪ್ರಾಯವನ್ನು ಬರೆಸಬೇಕು. ಈಗಾಗಲೇ ಕೆಕೆಎಂಪಿ ರಾಜ್ಯಾಧ್ಯಕ್ಷ ಸುರೇಶರಾವ್ ಸಾಠೆ ಅವರು ಈ ಕುರಿತು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿರುವದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮರಾಠಾ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಅರುಣಕುಮಾರ ಚವ್ಹಾಣ, ಕಾರ್ಯದರ್ಶಿ ಸುರೇಶ ಬೇಂದ್ರೆ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ರಾಜೀವ ರೋಖಡೆ, ಸಹಕಾರ್ಯದರ್ಶಿ ಎಂ.ಆರ್.ಅರಳಿಕಟ್ಟಿ, ಪ್ರಭು ಬೆಂದ್ರೆ, ವೀನೀತಕುಮಾರ ಜಗತಾಪ, ಮಹೇಶ ಶೆಟವಾಜಿ, ಶಿವಾಜಿ ಗ್ವಾರಿ, ಮಾರುತಿ ಹೆಬ್ಬಳ್ಳಿ, ಶಿವಾಜಿ ಪವನ, ಮಂಜುನಾಥ ಮಾನೆ, ಮಲ್ಲು ದೊಡ್ಡಮನಿ, ಪರಶುರಾಮ ಜಾಧವ, ವೀರಣ್ಣ ಪವಾರ, ಶಂಕರ ಡಂಬಳ, ಸುಭಾಷ ಕದಡಿ, ನಾಗರಾಜ ಮಗದಮ್, ನಾರಾಯಣರಾವ್ ಗಾಯಕವಾಡ, ಶಂಕರ ಓಬಾಜಿ, ದೇವೇಂದ್ರ ದೊಡ್ಡಮನಿ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ಶಂಕರ ನಿಕ್ಕಮ ಸೇರಿದಂತೆ ಮರಾಠಾ ವಿದ್ಯಾವರ್ಧಕ ಸಂಘ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್, ಮಾತೋಶ್ರೀ ರಾಜಮಾತಾ ಜಿಜಾವು ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 