ಮಾಸ್ಕೋ, ನ 12 : ಹಿಮ ವಾತಾವರಣದಿಂದ ಅಮೆರಿಕದ ಷಿಕಾಗೋ ಓಹರಾ ಮತ್ತು ಮಿಡ್ವೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ 1,000 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ಸಿಬಿಎಸ್ ಚಿಕಾಗೊ ಸೋಮವಾರ ವರದಿ ಮಾಡಿದೆ. ಒಹಾರಾ ವಿಮಾನ ನಿಲ್ದಾಣದಲ್ಲಿ ಸೋಮವಾರ 1,094 ಮತ್ತು ಮಿಡ್ವೇನಲ್ಲಿ 98 ವಿಮಾನಗಳನ್ನು ರದ್ದುಪಡಿಸಲಾಗಿದೆ. ಈ ಪ್ರದೇಶದಲ್ಲಿ ಮೂರರಿಂದ ಆರು ಇಂಚುಗಳಷ್ಟು ಹಿಮ ಸುರಿಯುವ ಸಾಧ್ಯತೆ ಇದ್ದು, ಉತ್ತರ ಮತ್ತು ಚಿಕಾಗೊ ಮೆಟ್ರೋಪಾಲಿಟನ್ ಪ್ರದೇಶದ ಮಧ್ಯಭಾಗದಲ್ಲಿ ಅತಿ ಹೆಚ್ಚು ಹಿಮಪಾತವಾಗುವ ಸಂಭವವಿದೆ ಹವಾಮಾನ ತಜ್ಞರು ತಿಳಿಸಿದ್ದಾರೆ. ಹಿಮದಿಂದಾಗಿ ಒಹಾರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ವಿಮಾನವೊಂದು ಇಳಿಯುತ್ತಿದ್ದ ವೇಳೆ ರನ್ವೇ ನಿಂದ ಹೊರಕ್ಕೆ ಚಲಿಸಿದೆ ಎಂದು ಅಮೆರಿಕನ್ ಏರ್ಲೈನ್ಸ್ ಅನ್ನು ಉಲ್ಲೇಖಿಸಿ ಎಬಿಸಿ ಮಾಧ್ಯಮ ವರದಿ ಮಾಡಿದೆ.