ಸ್ಮಾರ್ಟ್ ಬೋರ್ಡ್ ಬಂದ್: ಶಿಕ್ಷಕರಿಗೆ ಸಂಸದೆ ತರಾಟೆ
Smart board switched off: MP reprimands teachers
ಪಾಲಬಾವಿ 04 : ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸಂಸದರ ವಿಶೇಷ ಅನುದಾನದಲ್ಲಿ ಶಾಲೆಗೆ ನೀಡಿದ್ದ ‘ಸ್ಮಾರ್ಟ್ ಬೋರ್ಡ’ ಬಳಕೆಯಾಗದೆ ಬಂದ್ ಆಗಿರುವುದನ್ನು ಕಂಡು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ರಾಯಬಾಗ ತಾಲ್ಲೂಕಿನ ಪಾಲಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2024-25ನೇ ಸಾಲಿನಲ್ಲಿ ಸಂಸದರ ವಿಶೇಷ ಅನುದಾನದಡಿ 3 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಬೋರ್ಡ್ ಮಂಜೂರಾಗಿತ್ತು.
ಕಳೆದ ಜನವರಿಯಲ್ಲಿ ಶಾಲೆಯ ಒಂದು ಕೊಠಡಿಯಲ್ಲಿ ಅದನ್ನು ಅಳವಡಿಸಲಾಗಿತ್ತು. ಇತ್ತೀಚೆಗೆ ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು 5 ಕೋಟಿ ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಶಾಲೆಗೆ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲೆಂದು ನೀಡಲಾಗಿದ್ದ ಸ್ಮಾರ್ಟ್ ಬೋರ್ಡ್ ವೀಕ್ಷಿಸಲು ಕೊಠಡಿಗೆ ತೆರಳಿದಾಗ, ವಿದ್ಯುತ್ ಸಂಪರ್ಕವಿದ್ದರೂ ಬೋರ್ಡ್ ಬಂದ್ ಆಗಿರುವುದು ಕಂಡುಬಂದಿತು.
ಇದರಿಂದ ಅಸಮಾಧಾನಗೊಂಡ ಸಂಸದೆ, “ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸಲು ಪಾಠ ಬೋಧನೆಗೆ ಅನುಕೂಲವಾಗಲೆಂದು ಸ್ಮಾರ್ಟ್ ಬೋರ್ಡ್ ನೀಡಲಾಗಿದೆ. ಅದನ್ನು ಬಂದ್ ಮಾಡಿ ಇಟ್ಟಿರುವುದು ಸರಿಯೇ ಎಂದು ಶಿಕ್ಷಕರನ್ನು ಪ್ರಶ್ನಿಸಿದರು. ಮುಂದೆ ಈ ರೀತಿ ಆಗದಂತೆ ಸ್ಮಾರ್ಟ್ ಬೋರ್ಡ್ ಅನ್ನು ಸಮರ್ಕವಾಗಿ ಬಳಕೆ ಮಾಡಬೇಕು ಎಂದು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕಾಡಪ್ಪ ಗೋಡಿ, ಉಪಾಧ್ಯಕ್ಷೆ ಶಫಾಬಿ ಬಿರಾದಾರ, ಎಸ್ಡಿಎಂಸಿ ಸದಸ್ಯರಾದ ಮಹಾಂತೇಶ ಹಿರೇಮಠ,
ಮೆಹಬುಬ್ ಪಠಾಣ, ಧ್ಯಾನಪ್ಪ ಮಾದರ, ಮಡಿವಾಳಪ್ಪ ಗೋಡಿ, ಮಾಲಾಶ್ರೀ ಮಾಂಗ, ಯಲ್ಲವ್ವ ನಾವಿ, ಕುಲಸಮಾ ಮಿರ್ಜಿ, ಪ್ರಭಾರಿ ಮುಖ್ಯಗುರು ಎಸ್.ಬಿ. ತೌಂಶಿ, ಶಿಕ್ಷಕರಾದ ಶಿವಕುಮಾರ ಹಿಡಕಲ, ಗಿರೇಪ್ಪ ಬಳಿಗಾರ, ಸಾಗರ ಕುರಬೆಟ್ಟಿ, ಸಂದೇಶ ಹಿರೇಮಠ, ರಮೇಶ ಉಳ್ಳಾಗಡ್ಡಿ, ಮಹಾಂತೇಶ ತೇಗೂರ, ಫಾರೂಕ್ ಮಿರ್ಜಿ, ಮುಸ್ತಾಕ್ ಮುಲ್ಲಾ, ಮುತ್ತಪ್ಪ ಶಿವಪುರ ಸೇರಿದಂತೆ ಇತರರು ಇದ್ದರು. ಅಧ್ಯಕ್ಷ ಕಾಡಪ್ಪ ಗೋಡಿ, ಉಪಾಧ್ಯಕ್ಷೆ ಶಫಾಬಿ ಬಿರಾದಾರ, ಸದಸ್ಯರು ಹಾಗೂ ಶಿಕ್ಷಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 