ಶ್ರೀ ನಾಗದೇವರ ದೇವಸ್ಥಾನದ ಸ್ಲ್ಯಾಬ್ ಕಾಮಗಾರಿಗೆ ಚಾಲನೆ

ಶ್ರೀ ನಾಗದೇವರ ದೇವಸ್ಥಾನದ ಸ್ಲ್ಯಾಬ್ ಕಾಮಗಾರಿಗೆ ಚಾಲನೆ  Slab work for Sri Nagadevara Temple inaugurated

ಗದಗ 07:  ನಗರದ ಸವಿತಾ ಸಮಾಜ ಸುಧಾರಣಾ ಸಂಘದ ನಿವೇಶನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾಗದೇವರ ದೇವಸ್ಥಾನದ ಮೇಲ್ಛಾವಣಿ (ಸ್ಲ್ಯಾಬ್) ಹಾಕುವ ಧಾರ್ಮಿಕ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಹಾಗೂ ಸಡಗರದಿಂದ ನೆರವೇರಿತು.  ಈ ಪುಣ್ಯ ಕಾರ್ಯಕ್ಕೆ ಹಿರಿಯ ಶಾಸಕರಾದ ಸನ್ಮಾನ್ಯ ಎಚ್‌.ಕೆ. ಪಾಟೀಲ ಅವರು ತಮ್ಮ ವಿಶೇಷ ಅನುದಾನದಿಂದ ?10 ಲಕ್ಷ ಮಂಜೂರು ಮಾಡಿಸಿದ್ದು, ದೇವಸ್ಥಾನದ ನಿರ್ಮಾಣ ಕಾಮಗಾರಿ ಇದೀಗ ಸ್ಲ್ಯಾಬ್ ಹಂತ ತಲುಪಿದೆ.  

ರಾಜ್ಯ ರಾಜಕಾರಣದ ಧೀಮಂತ ನಾಯಕ ಹಾಗೂ ಹಿರಿಯ ಶಾಸಕ ಎಚ್‌.ಕೆ. ಪಾಟೀಲ ಅವರ ಸಾರ್ವಜನಿಕ ಸೇವೆ ಮತ್ತು ಕ್ರಾಂತಿಕಾರಿ ಆಲೋಚನೆಗಳು ನಾಡಿಗೆ ಮಾದರಿಯಾಗಿವೆ. ಕೇವಲ ಭರವಸೆಗಳಿಗೆ ಸೀಮಿತವಾಗದೆ, ಇತ್ತೀಚಿನ ದಿನಗಳಲ್ಲಿ ತಮ್ಮ ಸರ್ಕಾರಿ ಅನುದಾನಗಳನ್ನು ಸಮಾಜದ ಕಟ್ಟಕಡೆಯಲ್ಲಿರುವ ಹಿಂದುಳಿದ ವರ್ಗಗಳ ಏಳಿಗೆಗಾಗಿ ಕಳಕಳಿಯಿಂದ ಬಳಸುತ್ತಿದ್ದಾರೆ. ಶಾಸಕರ ದೂರದೃಷ್ಟಿಯ ನಿರ್ಧಾರಗಳು ಹಾಗೂ ಜನಪರ ಆಲೋಚನೆಗಳು ಜಿಲ್ಲೆಯಾದ್ಯಂತ ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡುತ್ತಿವೆ.  

ಶಾಸಕರ ಪುತ್ರ ಹಾಗೂ ಯುವ ಮುಖಂಡ ಕೃಷ್ಣಗೌಡ್ರು ಪಾಟೀಲ ಅವರು ತಮ್ಮ ತಂದೆಯ ಜನಪರ ಸೇವೆಯ ಗುಣಗಳನ್ನು ರಕ್ತಗತವಾಗಿ ಮೈಗೂಡಿಸಿಕೊಂಡು ಸಾರ್ವಜನಿಕ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಸವಿತಾ ಸಮಾಜದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹಾಗೂ ವಿಶೇಷ ಕಾಳಜಿ ಹೊಂದಿರುವ ಅವರು, ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಹಾಗೂ ಹಿರಿಯ ನಾಯಕರಾದ ಹನುಮಂತಪ್ಪ ರಾಮಪೂರ ಅವರ ನೇತೃತ್ವದಲ್ಲಿ ಸಲ್ಲಿಸಿದ ಮನವಿಗೆ ಕೂಡಲೇ ಸ್ಪಂದಿಸಿ, ವಿಶೇಷ ಆಸಕ್ತಿ ವಹಿಸಿ ಅನುದಾನ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ್ದಾರೆ. ಅವರ ಜನಪರ ಕಾಳಜಿ ಸಮಾಜದ ಬಂಧುಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.