ವಿವಿಧ ವಿಭಾಗಗಳಲ್ಲಿ ಜೆ.ಎಸ್‌.ಎಸ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

ವಿವಿಧ ವಿಭಾಗಗಳಲ್ಲಿ ಜೆ.ಎಸ್‌.ಎಸ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆ Achievements of JSS Central School students in various categories

ಲೋಕದರ್ಶನ ವರದಿ 

ಧಾರವಾಡ 07 : ಜೆ.ಎಸ್‌.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್, ವಿದ್ಯಾಗಿರಿ, ಧಾರವಾಡ ವಿದ್ಯಾರ್ಥಿ ಕು. ಅನೂಪ್ ಪೂಜಾರಿ ಚಿಲ್ಲಿ ಸ್ಪೋರ್ಟ್ಸ ಕ್ಲಬ್ ಅವರು ನಡೆಸಿದ ಇನ್ವೆನ್ಸಶನಲ್ ಕರ್ನಾಟಕ ಕರಾಟೆ ಚಾಂಪಿಯನ್‌ಶಿಪ್‌-2026 ಟೈಗರ್ ಮಾರ್ಶಲ್ ಆರ್ಟ್ಸ ಅಕ್ಯಾಡೆಮಿ ಅವರು ನಡೆಸಿದ ಟೈಗರ್ ವಾರಿಯರ್ ಕಪ್‌-2026 ರಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ರಾಷ್ಟ್ರ ಮಟ್ಟದಲ್ಲೂ ಭಾಗವಹಿಸಿದ್ದಾನೆ. ಚಿಲ್ಡ್ರನ್ಸ್‌ ಅಕ್ಯಾಡೆಮಿ ಧಾರವಾಡ ಇವರು ನಡೆಸಿದ ಮಕ್ಕಳ ತ್ರಿಭಾಷಾ ಕವಿಗೋಷ್ಠಿ ಯಲ್ಲಿ ಕು. ರೋಹನ್ ಮಿಶ್ರಾಂಕರ  ಪ್ರಥಮ ಸ್ಥಾನ,  ಕು. ಆದ್ಯಶ್ರೀ ದ್ವಿತೀಯ ಸ್ಥಾನವ ನ್ನು ಪಡೆದಿದ್ದಾರೆ.

ಕು. ಈಶಾನಿ ದರ್ಗದ ಬೆಳಗಾವಿಯ ಮರಾಠಾ ಯುವಕ ಸಂಘ ಅವರು ನಡೆಸಿದ ಅಂತರ ಶಾಲಾ ಹಾಗು ಕಾಲೇಜುಗಳ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ವನ್ನು ಪಡೆದಿದ್ದು, ವಿವಿಧ ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಅನಾವರಣಗೊಳಿಸಿ ಬಹುಮಾನಗಳನ್ನು ಗೆದ್ದು ಶಾಲೆಗೆ ಹೆಮ್ಮೆ ತಂದ ವಿಧ್ಯಾರ್ಥಿಗಳಿಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು, ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಮಹಾವೀರ ಉಪಾಧ್ಯೆ ಸರ್, ಶಾಲೆಯ ಪ್ರಾಚಾರ್ಯೆ ರಜಿನಿ ಪಾಟೀಲ ಹಾಗೂ ಶಿಕ್ಷಕ ವೃಂದ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.