ಬೆಂಗಳೂರು, ಜ.22 : ಮುಂಚೂಣಿಯಲ್ಲಿರುವ ಆನ್‌ಲೈನ್ ಶಿಕ್ಷಣ ವೇದಿಕೆ ಅಪ್‌ಗ್ರಾಡ್ ಮತ್ತು ಐಪಿ-ಆಧಾರಿತ ಇನ್ಕುಬೇಷನ್ ಲ್ಯಾಬ್ ಬ್ರಿಡ್ಜ್ ಲ್ಯಾಬ್ಜ್ ಇಂಜಿನಿಯರ್ಸ್‌ಗಳಿಗಾಗಿ ಕೌಶಲ ಅಭಿವೃದ್ಧಿ ತರಬೇತಿ ಕೋರ್ಸ್ ಅನ್ನು ಪ್ರಾರಂಭಿಸಿವೆ. ಕೇವಲ ಶೇಕಡ 10ರಷ್ಟು ಶುಲ್ಕ ಪಾವತಿಸಿ ಕೋರ್ಸ್ ಗೆ ಪ್ರವೇಶ ಪಡೆದುಕೊಳ್ಳಬಹುದು.
ಈ ಕೌಶಲ ಅಭಿವೃದ್ಧಿ ಕೊರ್ಸ್ ಮುಗಿದ ನಂತರ ಇಂಜಿನಿಯರ್ಸ್ ಗಳಿಗೆ ಉದ್ಯೋಗ ಸಿಗುವ ಅವಕಾಶಗಳು ಹೆಚ್ಚು. ವಾರ್ಷಿಕ 7 ಲಕ್ಷ ಪ್ಯಾಕೇಜ್ ಸಂಬಳ ಸಿಗುವ ಉದ್ಯೋಗ ಸೀಗುವ ಸಾಧ್ಯತೆ ಹೆಚ್ಚಿದೆ. 20 ವಾರಗಳ ಕೌಶಲ ತರಬೇತಿ ಕೋರ್ಸ್ ಇದಾಗಿದ್ದು ಪ್ರಾರಂಭದಲ್ಲಿ 100 ಇಂಜಿನಿಯರ್ಸ್ ಗಳಿಗೆ ಮಾತ್ರ ತರಬೇತಿ ನೀಡಲಾಗುವುದು.
ಕೋರ್ಸ್ ಶುಲ್ಕದ ಉಳಿದ ಶೇಕಡ 90ರಷ್ಟು ಶುಲ್ಕವನ್ನು ಉದ್ಯೋಗ ದೊರೆತ ನಂತರ ಪಾವತಿಸಲು ಅವಕಾಶವಿದೆ. ಈ ಕೌಶಲ ತರಬೇತಿಯ ಪರಿಣಾಮ ಮುಂಚೂಣಿಯಲ್ಲಿರುವ ಟೆಕ್ ಸಂಸ್ಥೆಗಳಿಗೆ ರೆಡಿಮೇಡ್ ಇಂಜಿಯರ್ಸ್ ಗಳು ದೊರೆಯುತ್ತಾರೆ.
“ಭಾರತೀಯ ಎಂಜಿನಿಯರಿಂಗ್ ಪದವೀಧರರಲ್ಲಿ ಅಪಾರ ಪ್ರತಿಭೆ ಇದ್ದು ತಮ್ಮ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಾರೆ. ಸರಿಯಾದ ಸೌಲಭ್ಯಗಳು ಮತ್ತು ಸಂಪನ್ಮೂಲಗಳ ಕೊರತೆಯ ಪರಿಣಾಮ ಸಂಪನ್ಮೂಲವನ್ನು ಬಳಸದೆ ಉಳಿದಿದೆ ಇದರಿಂದಾಗಿ ವ್ಯಾಪಕ ಕೌಶಲ್ಯ-ಅಂತರಕ್ಕೆ ಕಾರಣವಾಗಿದೆ.” ಎಂದು ಅಪ್‌ಗ್ರಾಡ್ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಾಯಾಂಕ್ ಕುಮಾರ್ ಹೇಳಿದರು.
“ಅಪ್‌ಗ್ರಾಡ್‌ನಂತಹ ಹೆಸರಾಂತ ಆನ್‌ಲೈನ್ ಕಲಿಕಾ ಕಂಪನಿಯೊಂದಿಗೆ ಪಾಲುದಾರರಾಗಲು ನಮಗೆ ಸಂತೋಷವಾಗಿದೆ. ಈ ಸಹಯೋಗದ ಪ್ರಯತ್ನವು ದೇಶದ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿನ ಎಂಜಿನಿಯರ್‌ಗಳು ಮತ್ತು ಕಂಪನಿಗಳಿಗೆ ಬಹಳ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ ಎನ್ನುವ ವಿಶ್ವಾಸ ನಮಗಿದೆ” ಎಂದು ಬ್ರಿಡ್ಜ್ ಲ್ಯಾಬ್ಜ್ ಸಂಸ್ಥೆಯ ಸಂಸ್ಥಾಪಕ ನಾರಾಯಣ್ ಮಹಾದೇವನ್ ತಿಳಿಸಿದ್ದಾರೆ.