ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಆರಂಭ
Sit-in protest launched demanding fulfillment of various demands
ಲೋಕದರ್ಶನ ವರದಿ
ತಾಳಿಕೋಟಿ 21: ಕಲಿಕೇರಿಯಿಂದ ಬಿಂಜಲಬಾವಿ ಗ್ರಾಮದ ಮಾರ್ಗವಾಗಿ ಕೆಸರಟ್ಟಿಯವರೆಗೆ ರಸ್ತೆ ಡಾಂಬರೀಕರಣ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಷ್ಟ್ರೀಯ ರೈತ ಸಂಘ ತಾಲೂಕ ಘಟಕದ ಪದಾಧಿಕಾರಿಗಳು ಬಿಂಜಲಭಾವಿ ಗ್ರಾಮದ ಹತ್ತಿರ ಧರಣಿ ಸತ್ಯಾಗ್ರಹ ಆರಂಭಿಸಿ ತಾಳಿಕೋಟಿ ಸಿರಸ್ತೆದಾರ ಅನೀಲಕುಮಾರ ಚೌವ್ಹಾಣ ಇವರ ಮೂಲಕ ಶಾಸಕರು, ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೋಮವಾರ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಕಲಿಕೇರಿಯಿಂದ ಬಿಂಜಲಬಾವಿ ಮಾರ್ಗವಾಗಿ ಕೆಸರಟ್ಟಿ ಅವರಿಗೆ ಸುಮಾರು 10 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಇದನ್ನು ಆದಷ್ಟು ಬೇಗ ಡಾಂಬರೀಕರಣ ಗೊಳಿಸಬೇಕು ಅದು ಸಾಧ್ಯವಿಲ್ಲದಿದ್ದರೆ ಕನಿಷ್ಠಪಕ್ಷ ತಗ್ಗು ಗುಂಡಿಗಳನ್ನು ಮುಚ್ಚಬೇಕು.
ಬಿಂಜಲಬಾವಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನ ಸರಿಯಾಗಿ ಸಿಗುತ್ತಿಲ್ಲ ಅದನ್ನು 15 ದಿನಗಳ ಒಳಗಾಗಿ ಸಿಗುವಂತೆ ಮಾಡಬೇಕು. 2026-27 ನೇ ಸಾಲಿನ ಬೆಳೆ ಪರಿಹಾರ ಸರಳವಾಗಿ ಸಿಗುವಂತಾಗಲು ರೈತರ ಜಮೀನುಗಳಲ್ಲಿ ಇಲಾಖೆಯಿಂದಲೇ ಜಿಪಿಎಸ್ ಮಾಡಿಸಬೇಕು. ಮುಂಗಾರು ಮಳೆ ಸುರಿಯದೇ ಇರುವುದರಿಂದ ರೈತರು ಕಂಗೆಟ್ಟಿದ್ದು ತಾಳಿಕೋಟಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ರ?ತ ಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿಗಳಾದ ರೇಣುಕಾ ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಣಮಂತ ಈ.ವಡ್ಡರ, ಜಿಲ್ಲಾ ಉಪಾಧ್ಯಕ್ಷ ಮ?ಬೂಬಬಾಷಾ ಮನಗೂಳಿ, ತಾಳಿಕೋಟಿ ತಾಲೂಕಾಉಪಾಧ್ಯಕ್ಷ ಶರಣು ಕವದಿ, ಮತ್ತು ತಾಳಿಕೋಟಿ ಯುವಮೋರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ, ಗ್ರಾಮ ಘಟಕಾಧ್ಯಕ್ಷ ವಿಜಯಕುಮಾರ್ಯ ಉಕ್ಕಲಿ, ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ, ದೇವರ ಹಿಪ್ಪರಗಿ ತಾಲೂಕ ಅಧ್ಯಕ್ಷ ಶಿವಪ್ಪ ಡೋಣೂರ, ಸಂಗು ಹುಣಸಗಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 