ಸಿರುಗುಪ್ಪ: ಹಾಳು ಮುರುವಣೆ ಗ್ರಾಮದ ಸಿ.ಹೆಚ್.ಮಹಾಕಾಳಿ ರಾಜುಗೆ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ
Siruguppa: C.H. Mahakali Raju of Halu Muruvane village wins best fish farmer award
ಬಳ್ಳಾರಿ 24: ಸಿರುಗುಪ್ಪ ತಾಲ್ಲೂಕಿನ ಹಾಳು ಮುರುವಣೆ ಗ್ರಾಮದ ಸಿ.ಹೆಚ್.ಮಹಾಕಾಳಿ ರಾಜು ಅವರಿಗೆ 2025-26 ನೇ ಸಾಲಿನ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನ.21 ರಿಂದ 23 ರ ವರೆಗೆ ನಡೆದ ಮತ್ಸ್ಯ ಮೇಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಿ.ಹೆಚ್.ಮಹಾಕಾಳಿ ರಾಜು ಅವರು 2012-13ನೇ ಸಾಲಿನಿಂದ ಇಲ್ಲಿಯವರೆಗೆ ಸುಮಾರು 50 ಎಕರೆ ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೊಳಗಳನ್ನು ನಿರ್ಮಿಸಿಕೊಂಡು ಪ್ರತಿ ಎಕರೆ ವಿಸ್ತೀರ್ಣದ ಮೀನುಕೊಳದಲ್ಲಿ 4.5 ರಿಂದ 5.0 ಟನ್ ನಂತೆ ಒಟ್ಟು 225 ಟನ್ ಮೀನನ್ನು ಉತ್ಪಾದನೆ ಮಾಡುತ್ತಿದ್ದು, ಪ್ರತಿ ವರ್ಷ ಕನಿಷ್ಠ 1.0 ಕೋಟಿಯಷ್ಟು ನಿವ್ವಳ ಲಾಭ ಪಡೆಯುತ್ತಾ ಜಿಲ್ಲೆಯ ಯಶಸ್ವಿ ಮೀನು ಕೃಷಿಕ ಎಂದೆನಿಸಿಕೊಂಡಿದ್ದಾರೆ.
ಇವರು ಪ್ರಾರಂಭದಿಂದಲೂ ವೈಜ್ಞಾನಿಕ ರೀತಿಯಲ್ಲಿ ಮೀನು ಕೃಷಿಯನ್ನು ಮಾಡುತ್ತಿದ್ದು, ಮೀನುಗಾರಿಕೆ ಇಲಾಖೆ ಮತ್ತು ಮೀನು ಕೃಷಿ ತಜ್ಞರ ಮಾರ್ಗದರ್ಶನದಿಂದ ಪ್ರತಿವರ್ಷವೂ ಉತ್ತಮ ಮೀನು ಬೆಳೆಯನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿದ ಮೀನುಗಾರಿಕೆ ಇಲಾಖೆಯು ನ.22 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳಎಸ್.ವೈದ್ಯ ಅವರು ಪ್ರಶಸ್ತಿ ವಿತರಿಸಿದ್ದಾರೆ.
ಸಿರುಗುಪ್ಪ ತಾಲ್ಲೂಕಿನ ಹಾಳು ಮುರುವಣೆ ಗ್ರಾಮದ ಸಿ.ಹೆಚ್. ಮಹಾಕಾಳಿ ರಾಜು ಅವರು ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ ಭಾಜನರಾಗಿದ್ದು, ಅತೀವ ಸಂತೋಷವಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು ಅಭಿನಂದನೆ ತಿಳಿಸಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 