ಮುಖ್ಯಮಂತ್ರಿ, ಪ್ರತಿನಿಧಿಗಳಿಂದ ಗಾಯಕ ಸೋನು ನಿಗಮ್ ಗೆ ಅಪಮಾನ
Singer Sonu Nigam insulted by Chief Minister, representatives
ಜೈಪುರ 11: ಸಾಂಸ್ಕೃತಿಕ ಸಂಜೆ ಪ್ರದರ್ಶನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ಮುಖ್ಯಮಂತ್ರಿ ಭಜನಲಾಲ್ ಶರ್ಮ ಮತ್ತು ಇತರ ಪ್ರತಿನಿಧಿಗಳು ನಿರ್ಗಮಿಸುವ ಮೂಲಕ ತಮಗೆ ಅಪಮಾನ ಮಾಡದಿದ್ದರೆ ಎಂದು ಖ್ಯಾತ ಗಾಯಕ ಸೋನು ನಿಗಮ್ ಅವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಶೃಂಗಸಭೆಯನ್ನು ಉದ್ಘಾಟಿಸಿದ್ದರು.
ಜೈಪುರದಲ್ಲಿ ನಡೆದ ಮೂರು ದಿನಗಳ ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್‌ಮೆಂಟ ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗಾಗಿ ಹೋಟೆಲ್ ರಾಂಬಾಗ್ ಪ್ಯಾಲೇಸ್‌ನಲ್ಲಿ ಸೋಮವಾರ ಸಾಂಸ್ಕೃತಿಕ ಸಂಜೆಯ ಭಾಗವಾಗಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಭಜನಲಾಲ್ ಶರ್ಮ ಮತ್ತು ಇತರ ಪ್ರತಿನಿಧಿಗಳು ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ನಿರ್ಗಮಿಸಿರುವುದು ಸೋನು ನಿಗಮ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಸೋನು ನಿಗಮ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ, ‘ಇಂತಹ ನಡವಳಿಕೆಯು ಸಂಗೀತ ಮತ್ತು ಕಲೆಗಳ ದೇವತೆ ಸರಸ್ವತಿಗೆ ಮಾಡಿದ ಅಪಮಾನ” ಎಂದು ತೀವ್ರ ಅಸಮಾಧಾನವನ್ನು ಹೊರ ಹಾಕಿದ್ದಾರೆ.
”ಗಾಯಕ ಸೋನು ನಿಗಮ್ ಅವರು ಭಾರತದ ರಾಜಕಾರಣಿಗಳಿಗೆ ಸಾರ್ವಜನಿಕ ಮನವಿ ಮಾಡಿದ್ದಾರೆ, ಅವರು ಇಡೀ ಕಾರ್ಯಕ್ರಮಕ್ಕೆ ಉಳಿಯಲು ಸಾಧ್ಯವಾಗದಿದ್ದರೆ ಪ್ರದರ್ಶನಗಳಿಗೆ ಹಾಜರಾಗದೆ ಇರುವುದೇ ಒಳ್ಳೇದೆಂದು ಒತ್ತಾಯಿಸಿದ್ದಾರೆ.
ಸಿಎಂ ಸಾಹೇಬರು ಮತ್ತು ಇತರರು ಕಾರ್ಯಕ್ರಮದ ಮಧ್ಯದಲ್ಲಿ ಎದ್ದು ಹೋಗುವುದನ್ನು ನಾನು ನೋಡಿದೆ. ಅವರು ಹೋದ ತಕ್ಷಣ, ಎಲ್ಲಾ ಪ್ರತಿನಿಧಿಗಳು ಸಹ ಹೊರಟರು. ನಿಮ್ಮ ಕಲಾವಿದರನ್ನು ನೀವೇ ಮೆಚ್ಚಿಕೊಳ್ಳದಿದ್ದರೆ ಹೊರಗಿನವರು ಏನು ಮಾಡುತ್ತಾರೆ ಎಂಬುದು ರಾಜಕಾರಣಿಗಳಲ್ಲಿ ನನ್ನ ವಿನಂತಿ. ಅವರು ಏನು ಯೋಚಿಸುತ್ತಾರೆ? ಗಾಯಕ ಸೋನು ನಿಗಮ್ ಬರೆದುಕೊಂಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 