ವಿಜಯಕುಮಾರ ಪತ್ತಾರ
ಸಿಂದಗಿ 29: ತಾಲೂಕಾ ಕೃಷಿ ಉತ್ಪನ್ನ ಮಾಡುಕಟ್ಟೆಗೆ 23 ವರ್ಷ ತುಂಬಿದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಅಭಿವೃದ್ಧಿಯಾಗಿಲ್ಲ. ಸುಸಜ್ಜಿತ ಕಂಪೌಂಡಿಲ್ಲ. ಬೆಳಿಗ್ಗೆ ಸಾರ್ವಜನಿಕ ಶೌಚಾಲಯ ಪ್ರದೇಶವಾದರೆ ಕತ್ತಲಾಗುತ್ತಿದ್ದಂತೆ ಮಧ್ಯವ್ಯಸನಿಗಳ ಕೇಂದ್ರವಾಗಿ ಮಾರ್ಪಡುತ್ತದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.
ಕೃಷಿ ಉತ್ಪನ್ ಮಾರುಟಕಟ್ಟೆಗೆ ಪರ ಊರಿನಿಂದ ಬಂದ ರೈತರಿಗೆ ತಂಗಲು ರೈತಭವನ ಮತ್ತು ಉಪಹಾರ ಗೃಹ ಪ್ರಾರಂಭದಿಂದಲೂ ಇದೇ ಆದರೆ ಅದು ರೈತರಿಗೆ ಉಪಯೋಗವಾಗಿಲ್ಲ. ರೈತಭವನ ಋತುಮಾನಕ್ಕೆ ತಕ್ಕಂತೆ ಬದಲಗುತ್ತದೆ. ತೊಗರಿ ಖರೀದಿ ಸಮಯ ಬಂದಾಗ ತೊಗರಿ ಸಂಗ್ರಹ ಗೋರ್ಡ್ವನ್ನಾಗಿ ಪರಿವರ್ತನೆಯಾಗುತ್ತದೆ. ಇನ್ನುಳಿದ ಸಂದರ್ಭದಲ್ಲಿ ಭವನಕ್ಕೆ ಕೀಲಿ ಹಾಕುತ್ತಾರೆ. ಏಕೆಂದರೆ ಅಲ್ಲಿ ವಾಸ ಮಾಡಲಿಕ್ಕೂ ಯೋಗ್ಯ ವಾತಾವರಣವಿಲ್ಲ. ಹೀಗಾದಲ್ಲಿ ರೈತರು ಹೇಗೆ ರೈತಭವನ ಉಪಯೋಗಿಸುತ್ತಾರೆ?
1998-99 ರಲ್ಲಿ ಆರಂಭವಾದ ದನಗಳ ಬಜಾರ ಪ್ರಾರಂಭದ ವರ್ಷದಲ್ಲಿಯೇ ಯಶಸ್ವಿಯಾಗಲಿಲ್ಲ. ಈಗ ದನಗಳ ಬಜಾರ ತಾಲೂಕಿನ ದೇವರಹಿಪ್ಪರಗಿ ಮತ್ತು ಆಲಮೇಲ ಪಟ್ಟಣದಲ್ಲಿ ಜರಗುತ್ತಿವೆ. ಈಗ ಇಲ್ಲಿ ಕುರಿಗಳ ಬಜಾರ ಮಾತ್ರ ನಡೆಯುತ್ತದೆ. ರವಿವಾರಕ್ಕೊಮ್ಮೆ ನಡೆಯುವ ಕುರಿ ಬಜಾರ ಅವ್ಯಸ್ಥಿತವಾಗಿ ನಡೆಯುತ್ತಿದೆ. ಕುರಿ ಮತ್ತು ಮೇಕೆ ಮಾರಾಟ ಮಾಡಲು ಅನಕೂಲಕರವಾಗಲಿ ಎಂದು 50 ಲಕ್ಷ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆ ನಿಮರ್ಾಣವಾಗಿದೆ. ಇನ್ನು ಅದು ಉದ್ಘಾಟನೆಯಾಗಿಲ್ಲ. ಉದ್ಘಾಟನೆ ಮುಂಚೆನೆ ಈ ಮಾರುಕಟ್ಟೆ ಹಾಳಾಗುತ್ತಿದೆ.
ರೈತರಿಗೆ ತೂಕದಲ್ಲಿ ಮೋಸ ಆಗಬಾರದು ಎಂದು ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ವೇ ಬ್ರೀಜ್ 2014-15ನೇ ಸಾಲಿನಲ್ಲಿ ಸ್ಥಾಪಿಸಲಾಗಿದೆ. ಆದರೆ ವೇ ಬ್ರೀಜ್ ಪ್ರಾರಂಭವಾಗಿಲ್ಲ. ವೇ ಬ್ರೀಜ್ ಪ್ರಾರಂಭಿಸಲು 4 ಸಲ ಟೆಂಡರ್ ಕರೆದರೂ ಯಾರು ಮುಂದಾಗುತ್ತಿಲ್ಲ ಎಂದು ಕೃಷಿ ಉತ್ಪನ್ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಹೇಳುತ್ತಾರೆ. ಈ ವೇ ಬ್ರೀಜ್ ನಡೆಸುವವರು 21 ಸಾವಿರ ಮಾಸಿಕ ಹಣ ಸಮೀತಿಗೆ ತುಂಬಬೇಕು. ತಿಂಗಳಿಗೆ 21 ಸಾವಿರ ಮಾಸಿಕ ಹಣ ತುಂಬುವಷ್ಟು ವ್ಯಾಪಾರವಾಗುವುದಿಲ್ಲ ಎಂದು ಯಾರು ವೇ ಬ್ರೀಜ್ ಟೆಂಡರ್ನಲ್ಲಿ ಭಾಗವಹಿಸುತ್ತಿಲ್ಲ.
ಕೃಷಿ ಉತ್ಪನ್ ಮಾರುಕಟ್ಟೆಯಲ್ಲಿ 62 ನಿವೇಶನಗಳಿಗೆ ಈಗಾಗಲೆ ಎಲ್ಲವನ್ನೂ ಹಂಚಿಕೆ ಮಾಡಲಾಗಿದೆ. ಆದರೆ ಈ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆಯಿದೆ. ಇಲ್ಲಿ ರಾಜಕೀಯ ಪಕ್ಷಗಳ ಕಚೇರಿಗಳಿಗೆ, ಜಿಮ್ (ವ್ಯಾಯಾಮ ಶಾಲೆ) ಇದೆ. ಈ ಕುರಿತು ಅಧಿಕಾರಿಗಳಿಗೆ ಕೇಳಿದಾಗೊಮ್ಮೆ ಇಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವ ಸಂಖ್ಯೆ ಕಡಿಮೆಯಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅವರಿಗೆ ನೋಟಿಸ್ ನೀಡಲಾಗುವುದು ಎಂದು ಉತ್ತರ ನೀಡುವುದು ಸಾಮಾನ್ಯವಾಗಿದೆ.