ಲೋಕದರ್ಶನ ವರದಿ
ಸಿಂದಗಿ 01: ಕಳೆದ ಸಮ್ಮಿಶ್ರ ಸರಕಾರದಲ್ಲಿ ಪಟ್ಟಣದ ಅಭಿವೃದ್ಧಿಗೆ ಸುಮಾರು ರೂ.165 ಕೋಟಿ ಅನುದಾನ ಮಂಜೂರು ಇದರಲ್ಲಿ ಕೆಲವು ಕಾಮಗಾರಿಗಳು ಪ್ರಾರಂಭಗೊಂಡಿವೆ ಇನ್ನೂ ಕೆಲವು ಪ್ರಾರಂಭಗೊಳ್ಳಲಿವೆ ಪಟ್ಟಣದ ಜನತೆಯ ಆಶೋತ್ತರಗಳಿಗೆ ಸಂಪೂರ್ಣ ಸ್ಪಂಧಿಸಿದ್ದೇವೆ ಕಾರಣಕ್ಕೆ 23 ವಾರ್ಡಿನ ಜನರು ಈ ಚುನಾವಣೆಯ ಸಂಪೂರ್ಣ ಬೆಂಬಲ ನೀಡುತ್ತಾರೆ ಎಂಬ ಆತ್ಮ ವಿಶ್ವಾಸವಿದೆ ಎಂದು ಶಾಸಕ ಎಂ.ಸಿ.ಮನಗೂಳಿ ಸ್ಪಷ್ಟಪಡಿಸಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಾಯರ್ಾಲಯದಲ್ಲಿ ಪಟ್ಟಣದ ಪುರಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಪಟ್ಟಣದಲ್ಲಿ ರೂ.90 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆಯ ಹಣ ಮಂಜುರಾಗಿದ್ದು ಸವರ್ೆ ಕಾರ್ಯ ಮುಗಿದು ಟೆಂಡರ ಆಗಿದೆ ಇನ್ನೂ ಪ್ರಾರಂಭವಾಗಬೇಕಿದೆ.
ರೂ.10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧಾ ಕಟ್ಟಡ ಪ್ರಾರಂಭವಾಗಬೇಕಿತ್ತು ಆದರೆ ಕೆಲವರು ವಿರೋಧ ವ್ಯಕ್ತಪಡಿಸಿ ತಡೆಯಾಜ್ಞೆ ಒಡ್ಡಿದ್ದಾರೆ ಇನ್ನೂಳಿದ ನನ್ನ ಮೂರು ವರ್ಷದ ಅವಧಿಯಲ್ಲಿ ಆ ಕೆಲಸ ಮಾಡಿಯೇ ತಿರುತ್ತೇನೆ. ಪಟ್ಟಣದ ಹಿಂದೆಯೂ ನನ್ನ ಅವಧಿಯಲ್ಲಿ ಕೆರೆ ನಿರ್ಮಾಣ ಮಾಡಿದ್ದೇವೆ ಅಲ್ಲದೆ ಮತ್ತೆ ನಾನು ಆಯ್ಕೆಯಾದ ನಂತರವೇ ಸುಮಾರು ರೂ. 27.10 ಕೋಟಿ ವೆಚ್ಚದಲ್ಲಿ ಬಳಗಾನುರ ಕೆರೆಯಿಂದ ಸಿಂದಗಿ ಪಟ್ಟಣಕ್ಕೆ ಪೈಪಲೈನ್ ಮೂಲಕ ನೀರು ತರಲಾಗುತ್ತಿದ್ದು ಎಪ್ರೀಲ, ಮೇ ತಿಂಗಳಲ್ಲಿ ಲೋಕಾರ್ಪಣೆಗೊಳಿಸುತ್ತೇವೆ.
ಪಟ್ಟಣದ ಅಭಿವೃದ್ಧಿಯಲ್ಲಿ ಮಾದರಿ ನಗರಸಭೆಯನ್ನಾಗಿ ಮಾಡುವ ಗುರಿಹೊಂದಿದ್ದೇನೆ. ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿ ಅತ್ಯುತ್ತಮ ಗುಣಮಟ್ಟದ ರಸ್ತೆ, ಚರಂಡಿ, ವಿದ್ಯುತ್ದೀಪ ಅಳವಡಿಸುವುದು, 24ಘಿ7 ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಆರ್.ಟಿಓ ಆಫೀಸ್, ಕೆಇಬಿ, ಡಿವೈಎಸ್ಪಿ, ಎಸಿ,
ಈ ಎಲ್ಲ ಹೊಸ ಯೋಜನೆಯ ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತೇವೆ ಅದರಿಂದ ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಅಭ್ಯಥರ್ಿಗಳು ಗೆಲ್ಲುತ್ತಾರೆ. ಅಲ್ಲದೆ ಅಧಿಕಾರ ಹಿಡಿಯುವ ಭರವಸೆ ನಮ್ಮದ್ದಾಗುತ್ತದೆ ಆ ಕಾರಣಕ್ಕೆ ಮತಬಾಂಧವರು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅದ್ಯಕ್ಷ ನಿಂಗಣ್ಣ ಬಿರಾದಾರ, ನಗರ ಘಟಕಾಧ್ಯಕ್ಷ ಮಂಜುನಾಥ ಬಿಜಾಪುರ, ಹಿರಿಯ ದುರೀಣ ಶಿವಪ್ಪಗೌಡ ಬಿರಾದಾರ, ಅಶೋಕ ಮನಗೂಳಿ, ಸೋಮನಗೌಡ ಬಿರಾದಾರ, ಶಿರೂಗೌಡ ದೇವರಮನಿ, ಶರಣಪ್ಪ ಕುರಡೆ, ಪರಸುರಾಮ ಕಾಂಬಳೆ, ಕುಮಾರ ದೇಸಾಯಿ, ಮಲ್ಲು ಬಾದನ್, ಸಲೀಂ ಜುಮನಾಳ, ಸಿದ್ದಣ್ಣ ಚೌಧರಿ ಸೇರಿದಂತೆ ಹಲವರಿದ್ದರು.