ಸಿಂದಗಿ: ಸಾಹಿತಿಗಳ ಸಂಘ ಹೆಜ್ಜೇನು ಸವಿದಂತೆ: ಡಾ.ಬಿ.ಆರ್.ನಾಡಗೌಡ

ಲೋಕದರ್ಶನ ವರದಿ

ಸಿಂದಗಿ 29: ಯುವ ಸಾಹಿತಿಗಳು ಸಾಹಿತ್ಯ ಅಧ್ಯಯನ ಮಾಡುವ ಜೊತೆಗೆ ಹಿರಿಯ ಸಾಹಿತಿಗಳ ಸಂಘವಿರಬೇಕು. ಹಿರಿಯ ಸಾಹಿತಿಗಳ ಸಂಘ ಹೆಜ್ಜೇನು ಸವಿದಂತೆ ಎಂದು  ಸ್ಥಳಿಯ ಅಂಬಿಕಾತನಯದತ್ತ ವೇದಿಕೆ ಅಧ್ಯಕ್ಷ ಡಾ.ಬಿ.ಆರ್.ನಾಡಗೌಡ ಹೇಳಿದರು.

ಶನಿವಾರ ಪಟ್ಟಣದ ಎಲೈಟ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕವು ರಾಮರಾವ್ ನಾಡಗೌಡ ಇವರ ಸ್ಮರಣಾರ್ಥ, ಗೌರಮ್ಮ ವಾಡೇದ ಇವರ ಸ್ಮರಣಾರ್ಥ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೆಲವೆ ಜನರಲ್ಲಿ ಡಾ.ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರರವರು ಎಂದು ಹೇಳಿದರು.

ಕಸಾಪ ತಾಲೂಕಾ ಅಧ್ಯಕ್ಷ ಎಸ್.ಬಿ. ಚೌಧರಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎಲೈಟ್ ಶಿಕ್ಷಣ ಸಂಸ್ಥೆಯ ಮಹಿಬೂಬ ಅಸಂತಾಪೂರ ಅವರು ವೇದಿಕೆ ಮೇಲೆ ಇದ್ದರು.

ಪ್ರಾಚಾರ್ಯ ಆಯ್.ಎ.ಜುಮನಾಳ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಸಾಪ ಉಪಾಧ್ಯಕ್ಷ ರಮೇಶ ಪೂಜಾರ, ಗೌರವ ಕಾರ್ಯದರ್ಶಿ  ಬಸವರಾಜ ಅಗಸರ, ಶರಣು ಕಿಣಗಿ, ಮಹಾಂತೇಶ ನೂಲನವರ ಸೇರಿದಂತೆ ಕಸಾಪ ಪದಾಧಿಕಾರಿಗಳು ಇದ್ದರು ರಾಗರಂಜನಿಯ ಡಾ.ಪ್ರಕಾಶ ಪ್ರಾರ್ಥನೆ ಹಾಡಿದರು. ಅಶೋಕ ಬಿರಾದಾರ ಸ್ವಾಗತಿಸಿದರು. ಶೃತಿ ಮಸಬಿನಾಳ, ವಿಜಯಲಕ್ಷ್ಮಿ ಜಂಗಿನಮಠ ನಿರೂಪಿಸಿದರು. ಸಾಹೆಬಣ್ಣ ದೇವರಮನಿ ವಂದಿಸಿದರು.