ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ ಸಾಹಿತ್ಯದಿಂದ ಸೌಹಾರ್ದ ಸಮಾಜ
Sinchana Kavya Award Awarded Literary Friendly Society
ಲೋಕದರ್ಶನ ವರದಿ
ಹೂವಿನ ಹಡಗಲಿ 29: ಸಾಹಿತಿಯು ಸಮಾಜದ ವಿದ್ಯಮಾನಗಳನ್ನು ಸೂಕ್ಷ್ಮ ವಾಗಿ ಗಮನಿಸಿ, ಕೃತಿಗಳ ಮೂಲಕ ಸಮಾಜದಲ್ಲಿದ್ದ ಸಮಸ್ಯೆಗಳನ್ನು ಎತ್ತಿ ತೋರಿಸಿಸುವ ಮೂಲಕ ಸಮಾಜ ಕಟ್ಟುವ ಕೆಲಸ ನಿರಂತರ ಆಗಬೇಕು ಎಂದು ಸಾಹಿತಿ ಇಸ್ಮಾಯಿಲ್ ಯಲಿಗಾರ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಭಾನುವಾರ ಸಿಂಚನ ಪ್ರಕಾಶನ ಮೇ ಸಾಹಿತ್ಯ ಮೇಳ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ,ಕವಿ ಎ ಎಸ್ ಮಕಾನದಾರ ರವರ ದರ್ವೇಶಿ ಪದ್ಯ ಕೃತಿ ಲೋಕಾರೆ್ಣ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕವಿ ವರ್ತಮಾನದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಗಂಭೀರ ಸಾಹಿತ್ಯ ಕೃಷಿಯತ್ತ ಗಮನ ಹರಿಸಬೇಕು ಎಂದರು.ಎ ಎಸ್ ಮಕಾನದಾರ ರವರ ದರ್ವೇಶಿ ಪದ್ಯಗಳು ಸಮಕಾಲೀನ ಚಿಂತನೆಗೆ ಹಚ್ಚುವಂತೆ ವ್ಯಕ್ತವಾಗಿವೆ ಎಂದು ಹಾವೇರಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಡಾ ಪುಷ್ಪಾ ಶಲವಡಿಮಠ ಹೇಳಿದರು.ಸಿಂಚನ ಕಾವ್ಯ ಪ್ರಶಸ್ತಿ ಪುರಸ್ಕೃತರ ಕೃತಿಗಳಾದ ಗೋರಿ ಮತ್ತು ಧರ್ಮ ಹಾಗೂ ಕನ್ನಡೆಮೆನಿಪ್ಪಾ ನಾಡು ಕುರಿತು ಕವಿ ರಾಮಪ್ಪ ಕೋಟಿಹಾಳ ಮಾಹಿತಿ ನೀಡಿದರು.ಪ್ರಶಸ್ತಿ ಪ್ರದಾನ: 2023 ಹಾಗೂ 2024 ರ ಸಿಂಚನ ಕಾವ್ಯ ಪ್ರಶಸ್ತಿಯನ್ನು ಬೀಳಗಿಯ ಸೋಮಲಿಂಗ ಬೇಡರ ಆಳೂರ ಹಾಗೂ ಹುರಕಡ್ಲಿ ಶಿವಕುಮಾರ ರವರಿಗೆ ? 5,000 ರೂ ನಗದು ಬಹುಮಾನ, ? 2000 ರೂ ಮೌಲ್ಯದ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಸಿಂಚನ ಕಾವ್ಯ ಪ್ರಶಸ್ತಿ ವಿಜೇತ ಸಾಹಿತಿಗಳಾದ ಹುರಕಡ್ಲಿ ಶಿವಕುಮಾರ, ಸೋಮಲಿಂಗ ಬೇಡರ ಆಳೂರ ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಬರೆಯಲು ಸ್ಫೂರ್ತಿ ಆಗಿದೆ ಎಂದು ಹೇಳಿದರು.ಶಾಖಾ ಗ್ರಂಥಾಲಯಾಧಿಕಾರಿ ಬಿ ನಾರಾಯಣ್ ದಾಸ್ ಪ್ರಕಾಶಕಿ ಸವಿತಾ ಅಂಗಡಿ ಉಪಸ್ಥಿತರಿದ್ದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ತೋ ಮ ಶಂಕ್ರಯ್ಯ ಮಾತನಾಡಿದರು.ಸಿಂಚನ ಪ್ರಕಾಶನದ ಸಾಹಿತ್ಯ,ಓದು ಜನಮೇಜಯ ಪುಸ್ತಕ ಅಭಿಯಾನ ಬಗ್ಗೆ ಸುರೇಶ ಅಂಗಡಿ ವಿವರ ಒದಗಿಸಿದರು.ಚಂದನಾ ಕಲಾ ಬಳಗದ ಎ ಎಂ ಪಿ ಪ್ರಶಾಂತ್, ಜಡೇಶ್ ಕನ್ನಡ ಭಾವಗೀತೆಗಳನ್ನು ಹಾಡಿದರು.ಪತ್ರಕರ್ತ ಎಂ ದಯಾನಂದ ನಾಗರಾಜ ಮಲ್ಕಿಒಡೆಯರ್ ನಯನಾ ಅಂಗಡಿ ನಿರ್ವಹಿಸಿದರು.
ಇದೇ ವೇಳೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು.ಸಾಧಕರಿಗೆ ಸನ್ಮಾನ: ಬೀರಬ್ಬಿ ಬಸವರಾಜ (ರಂಗಭೂಮಿ)ಪ್ರಕಾಶ್ ಮಲ್ಕಿಒಡೆಯರ್ (ಸಾಹಿತ್ಯ)ಕಲಾವತಿ ಹವಾಲ್ದಾರ್ (ಸಂಗೀತ)ಅಕ್ಕಸಾಲಿ ಚಂದ್ರ್ಪ (ಸಂಗೀತ)ನಾಗಮಂಜುಳ ಜೈನ್ (ಸಾಹಿತ್ಯ)ಸಿ ಸೋಮೇಶಪ್ಪ (ಛಾಯಾಗ್ರಹಣ)ಮಂಜುನಾಥ ಹ್ಯಾರಡ (ಹಾಸ್ಯ)ಎಚ್ ಬಿ ಶಾಂತಾ (ಅಂಗನವಾಡಿ)ಟಿ ಶಂಶಾದ್ ಬೇಗಂ (ಬಿಸಿಯೂಟ)ಶ್ರೀಲತಾ (ವಿಜ್ಞಾನ)ಹಾಗೂ ತುಂಗಭದ್ರಾ ಪ್ರೌಢಶಾಲೆಯ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 