ಬೆಳಗಾವಿ : ಇಲ್ಲಿನ ಲಿಂಗಾಯತ ಮಹಿಳಾ ಸಮಾಜದಿಂದ ವತಿಯಿಂದ 25ನೇ ಬೆಳ್ಳಿ-ಬೆಳಗು ಹಾಗೂ ರಜತ ಮಹೋತ್ಸವ ಕಾರ್ಯಕ್ರಮವು ಇಲ್ಲಿನ ಜೆಎನ್ಎಮ್ಸಿ ಜಿರಗಿ ಸಭಾಂಗಣದಲ್ಲಿ ಮಂಗಳವಾರ 21ರಂದು ಜರುಗಲಿದೆ ಎಂದು ಗೌರವಾಧ್ಯಕ್ಷರಾದ ಶೈಲಜಾ ಭಿಂಗೆ ಇದಿಂಲ್ಲಿ ಹೇಳಿದರು.
ನಗರದ ಲಿಂಗಾಯತ ಮಹಿಳಾ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1995ರಲ್ಲಿ ಸ್ಥಾಪನೆಯಾಗಿ 600 ಸಮಾಜ ಸದ್ಯದರನ್ನು ಗಡಿದಾಟಿದೆ. ಲಿಂಗಾಯತ ಮಹಿಳಾ ಸಮಾಜವು ಲಿಂಗಾಯತ ಸಮಾಜ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಪ್ರತಿ ತಿಂಗಳು ಅನೇಕ ಕಾರ್ಯಕ್ರಮದೊಂದಿಗೆ ರಜತ ಮಹೋತ್ಸವ ನಿಮಿತ್ತ ಲಿಂಗಾಯತ ಮಹಿಳಾ ಸಮಾಜದಿಂದ 25ನೇ ಬೆಳ್ಳಿ ಹಬ್ಬದ ಸಂಭ್ರಮವಾಗಿ ಮೂರು ತಿಂಗಳಲ್ಲಿ ವಿವಿಧ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.
ಸರಕಾರದ ಯಾವುದೇ ಸಹಕಾರ ಇಲ್ಲದೆ ಇಲ್ಲಿಯವರೆಗೆ ರುಕ್ಮಿಣಿ ನಗರ ಸರಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿ ಪ್ರತಿವರ್ಷವೂ ಶಾಲಾ ಪ್ರವಾಸ ಹಮ್ಮಿಕೊಳ್ಳಲಾಗಿದೆ. ನಾಗಾಭರಣ ಅವರೊಂದಿಗೆ ಸಂವಾದ, ಅಂಧಮಕ್ಕಳ ಸಾಹಿತ್ಯ ಕಾರ್ಯಕ್ರಮ, ಗಿರೀಶ ಕಾಸರವಳ್ಳಿಯವರ ರಾಷ್ಟ್ರ ಪ್ರಶಸ್ತಿ ಚಿತ್ರೋತ್ಸವ, ಗಾನಯಾನ ಕಾರ್ಯಕ್ರಮ, ವೃದ್ಧಾಶ್ರಮ ದೇಣಿಗೆ ಹಾಗೂ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಮಹಿಳಾ ಸಮಾಜವು ಲಿಂಗಾಯತ ಸಮಾಜ ಸೇವೆಯಲ್ಲಿ ತನ್ನ ಛಾಪು ಮೂಡಿಸುತ್ತಿದೆ ಎಂದು ವಿವರಿಸಿದರು.
ಈ ಬೆಳ್ಳಿ-ಬೆಳಗು ಸಮಾರಂಭ : ರಜತ ಮಹೋತ್ಸವ ಉದ್ಘಾಟನೆಗೆ ಪೊಲೀಸ ಮಹಾ ನಿರೀಕ್ಷಕರಾದ ಡಿ. ರೂಪಾ, ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸುವರು. ಮಂಗಲ ಸುರೇಶ ಅಂಗಡಿ, ಅಕ್ಕಮಹಾದೇವಿ ಅರವಿಂದ ಮಳ್ಳಿಗೇರಿ ಹಾಗೂ ಶರಣರು, ಗಣ್ಯರು ಆಗಮಿಸಲಿದ್ದಾರೆ ಎಂದು
ನುಡಿದರು.
ಈ ಸಂದರ್ಭದಲ್ಲಿ ಶೈಲಜಾ ಪಾಟೀಲ, ರತ್ನಪ್ರಭಾ ಬೆಲ್ಲದ, ಆಶಾ ಪಾಟೀಲ, ಜಯಾಶೀಲಾ ಬ್ಯಾಕೋಡ, ಜ್ಯೋತಿ ಬದಾಮಿ, ರಜತ ಸ್ಮರಣ ಸಂಚಿಕೆ ಸಂಪಾದಕರು ಡಾ. ಗುರುದೇವಿ ಹುಲೆಪ್ಪನವರ, ಸುನಂದಾ ಎಮ್ಮಿ, ಶೈಲಜಾ ಪಾಟೀಲ, ಜಯಾಶಿಲಾ, ಬೀನಾ ಕತ್ತಿ ಇವರು ಉಪಸ್ಥಿತರಿದ್ದರು.