ಬೆಂಗಳೂರು, ಡಿ 25 ಜನಪ್ರಿಯ
ಹಿರಿಯ ನಟ ಅವಿನಾಶ್, ಮಯೂರಿ, ಬಾಲಾಜಿ ಶರ್ಮಾ ಮುಖ್ಯ ಭೂಮಿಕೆಯಲ್ಲಿರುವ ‘ಮೌನಂ’ ಚಿತ್ರದ ಮೋಷನ್ ಪೋಸ್ಟರ್
ಬಿಡುಗಡೆಯಾಗಿದೆ ಕನ್ಸ್ಟ್ರಕ್ಷನ್ ಬಿಸೆನೆಸ್ ಹೊಂದಿರುವ ಶ್ರೀಹರಿ ನಿರ್ಮಾಣದ
ಚಿತ್ರವನ್ನು ರಾಜಪಂಡಿತ್ ನಿರ್ದೇಶಿಸುತ್ತಿದ್ದಾರೆ ನಿಶಬ್ಧಕ್ಕೂ ಶಬ್ದವಿದೆ ಎಂಬ ಅಡಿಬರಹ ಹೊಂದಿರುವ ಈ ಚಿತ್ರಕ್ಕೆ ಆರವ್ ರಿಷಿಕ್ ಸಂಗೀತ ನೀಡುತ್ತಿದ್ದಾರೆ ಹಿರಿಯ ನಟ ಅವಿನಾಶ್ ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ
ಅತ್ಯಂತ ವಿಶಿಷ್ಟವಾದ ಸುಮಾರು 6 ಶೇಡ್‍ಗಳಿರುವ ಪಾತ್ರದಲಿ ಅಭಿನಯಿಸಿದ್ದಾರೆ “ಈವರಗೂ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ,
‘ಮೌನಂ’ ಚಿತ್ರದ ಪಾತ್ರ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ” ಎಂದು ಅವಿನಾಶ್ ಹೇಳಿರುವುದಾಗಿ
ಚಿತ್ರತಂಡ ತಿಳಿಸಿದೆ ನಟಿ ಮಯೂರಿ
ಹೋಮಿ ಮತ್ತು ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಮಿಂಚಿದ್ದಾರೆ. ನಾಯಕ ನಟ ಬಾಲಾಜಿ ಶರ್ಮಾ ಈ ಮೊದಲು ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ
ನಟಿಸಿದ ಅನುಭವವಿದೆ.ಈ ಚಿತ್ರದಲ್ಲಿ ಕಾಲೇಜಜಿ ಯುವಕನ ಪಾತ್ರದಲ್ಲಿರುವುದಾಗಿ ಕಾಣಿಸಿಕೊಂಡಿದ್ದಾರೆ. ಮನುಷ್ಯನಿಗೆ ಮನುಷ್ಯನೇ ಶತ್ರು ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ
ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಅನ್ನೋದು ಚಿತ್ರಕಥೆಯ ತಿರುಳು ಎಂದು ನಿರ್ದೇಶಕರು ಮಾಹಿತಿ
ನೀಡಿದ್ದಾರೆ ಸೆನ್ಸಾರ್
ಯು/ಎ ಅರ್ಹತಾ ಪತ್ರ ನೀಡಿದ್ದು, ಫೆಬ್ರವರಿ 4ರಂದು ಚಿತ್ರ ತೆರೆ ಕಾಣಲಿದೆ ಎಂದು ಹೇಳಿದ್ದಾರೆ. ಮಯೂರಿ, ಬಾಲಾಜಿ ಶರ್ಮಾ, ಪ್ರಕಾಶ್, ಕಾಮಿಡಿ ಕಿಲಾಡಿಗಳು
ನಯನಾ, ಅವಿನಾಶ್, ಕೆಂಪೇಗೌಡ, ಹನುಮಂತೇ ಗೌಡ ಮೊದಲಾದವರ ತಾರಾಗಣವಿದೆ