ಸಿದ್ದು ಬಿರಾದಾರ ಬರ್ಬರ ಹತ್ಯೆ ಪ್ರಕರಣ: ಸುಪಾರಿ ನೀಡಿ ತಮ್ಮನಿಂದ ಅಣ್ಣನ ಹತ್ಯೆ
Sidhu brother's barbaric murder case: Brother killed by brother for offering betel nut
ಲೋಕದರ್ಶನ ವರದಿ
ಜಮಖಂಡಿ 21: ತಾಲೂಕಿನ ಕುರುಗೋಡ ಗ್ರಾಮದಲ್ಲಿ ನಡೆದ ಸಿದ್ದು ಮಲ್ಲಪ್ಪ ಬಿರಾದಾರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಬಿದ್ದಿರುವ ಸತ್ಯಗಳು ಇದೀಗ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಕುಟುಂಬದ ಜಮೀನು ವಿವಾದವೇ ಕೊನೆಗೆ ರಕ್ತಪಾತಕ್ಕೆ ತಿರುಗಿ, ಸ್ವಂತ ಚಿಕ್ಕಮ್ಮನ ಮಗನೇ 1, ಲಕ್ಷ ರೂ,ಗಳ ಸುಪಾರಿ ನೀಡಿ ಅಣ್ಣನ ಹತ್ಯೆ ಮಾಡಿಸಿದ್ದಾನೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತ ಸಿದ್ದು ಬಿರಾದಾರ (34) ದಿನಾಂಕ 14/05/2026 ರಂದು ಮಧ್ಯಾಹ್ನ ತನ್ನ ಮೋಟಾರ್ ಸೈಕಲ್ನಲ್ಲಿ ತೋಟದ ಮನೆಗೆ ತೆರಳುತ್ತಿದ್ದ ವೇಳೆ, ಕುರುಗೋಡ ಗ್ರಾಮದ ಹದ್ದಿಯ ಕೆನಾಲ್ ಕಚ್ಚಾ ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿದ ಆರೋಪಿಗಳು, ಕಬ್ಬಿಣದ ರಾಡ್ನಿಂದ ತಲೆಗೆ ಬಲವಾಗಿ ಹೊಡೆದು ರಕ್ತದ ಮಡುವಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು.
ತಾಯಿ ದೂರು ದಾಖಲು,
ಘಟನೆ ಬಳಿಕ ಮೃತನ ತಾಯಿ ಸಂಗವ್ವ ಬಿರಾದಾರ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಠಾಣಾ ಗುನ್ನೆ ನಂ. 84/2026 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಪಿಎಸ್ಐ ಅಪ್ಪಣ್ಣ ಐಗಳಿ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಸಂಚಿನ ಭಯಾನಕ ಸತ್ಯ ಹೊರಬಿದ್ದಿದೆ.
ಇವನನ್ನು ಬದುಕಿಟ್ಟರೆ ನಮಗೆ ಬದುಕಲು ಬಿಡೋದಿಲ್ಲ,,, ಸಂಚಿನ ಹಿಂದೆ ರಕ್ತಸಂಬಂಧ !
ಪೊಲೀಸರ ಮಾಹಿತಿ ಪ್ರಕಾರ, ಮೃತ ಸಿದ್ದು ಬಿರಾದಾರ ಮದ್ಯಪಾನ ಮಾಡಿ ಮನೆಗೆ ಬಂದು ಜಮೀನು ವಿಚಾರದಲ್ಲಿ ತಮ್ಮ ಶ್ರೀಶೈಲ ಜೊತೆ ನಿರಂತರ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಎಲ್ಲ ಜಮೀನು ನನಗೆ ಸೇರಿದ್ದು, ನೀವು ಜಾಗ ಖಾಲಿ ಮಾಡಿ ಹೋಗಿ ಎಂದು ಆಗಾಗ ಬೆದರಿಕೆ ಹಾಕುತ್ತಿದ್ದ ಹಿನ್ನೆಲೆ. ಶ್ರೀಶೈಲ ತನ್ನ ಸಂಬಂಧಿ ರವಿ ಶಿವಪೂಜಿಯ ಜೊತೆ ಸೇರಿ ಕೊಲೆ ಪ್ಲಾನ್ ರೂಪಿಸಿದ್ದಾನೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 