ಕಾರ್ಖಾನೆಗೆ ಬೆಂಕಿ, ಮಾಲೀಕನಿಗೆ 50 ಸಾವಿರ ಚೆಕ್ ನೀಡಿ ಓದಾರ್ಯ ಮೆರೆದ ಸಿದ್ದು ಕೊಣ್ಣೂರ
Siddu Konnur, who was awarded a cheque of Rs 50,000 for the factory fire, was relieved of his duties
ಮಹಾಲಿಂಗಪುರ 31: ಮಂಗಳವಾರ ಪಟ್ಟಣದ ಚಿಕ್ಕ ಗೃಹ ಕೈಗಾರಿಕಾ ಘಟಕದ ಸುಗಂಧ ಅಗರಬತ್ತಿ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ಹೊತ್ತಿ ನಷ್ಟವಾಗಿರುವ ಸ್ಥಳಕ್ಕೆ ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಭೇಟಿ ನೀಡಿ, ಕಾರ್ಖಾನೆ ಮಾಲಿಕರಿಗೆ ನೈತಿಕ ಧೈರ್ಯ ತುಂಬಿ ತಮ್ಮ ಸ್ವಂತ ಖಾತೆಯ ನಗದು 50 ಸಾವಿರ ರೂಪಾಯಿಗಳ ಚೆಕ್ ನೀಡಿ ಓದಾರ್ಯ ಮೆರೆದರು.
ಈ ಘಟನೆಯಲ್ಲಿ ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳು ಸೇರಿ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಆಹುತಿಯಾಗಿ ಒಟ್ಟು 25 ಲಕ್ಷಗಳ ವರೆಗಿನ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ಕಾರ್ಖಾನೆ ಮಾಲೀಕನ ದಯನೀಯ ಸ್ಥಿತಿ ಅರಿತು, ಪುನಃ ಘಟಕ ಆರಂಭಿಸಿ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ಹೆಚ್ಚಿನ ಅನುದಾನದವನ್ನು ಒದಗಿಸುವ ಭರವಸೆಯನ್ನೂ ಸಹ ನೀಡಿದರು.
ಈ ಭೇಟಿ ಸಮಯದಲ್ಲಿ ಪುರಸಭೆ ಪ್ರಭಾರಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಬಲವಂತಗೌಡ ಪಾಟೀಲ್, ಚನಬಸು ಹುರಕಡ್ಲಿ, ನಜೀರ್ ಅತ್ತಾರ, ನಜೀರ್ ಝಾರೆ, ಅರ್ಜುನ್ ದೊಡಮನಿ, ಮಹಾಲಿಂಗಪ್ಪ ಮಾಳಿ, ನಾನಾ ಜೋಷಿ, ಸುಭಾಸ ಬಂಡಿ, ರಾಜೇಶ್ ಭಾವಿಕಟ್ಟಿ, ಬಂಡಿವಡ್ಡರ, ಸಿದ್ದು ಭೂಸಣ್ಣವರ, ಉಪ್ಪಾರ, ಖಾಜಿ, ಹಣ್ಮಂತ ಬಂಡಿವಡ್ಡರ, ಹೆಸ್ಕಾಂ ಅಧಿಕಾರಿ ರಾಜೇಶ್ ಭಾಗೋಜಿ, ತಲಾಠಿ ಸೌರಭ ಮೇತ್ರಿ ಮತ್ತು ಗ್ರಾಮ ಸಹಾಯಕ ಲಾಲಸಾಬ ಸನದಿ ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 