ಸಿದ್ಧ ಸಿರಿ ನೂತನ ಕಟ್ಟಡ ಪೂರ್ವಭಾವಿ ಸಭೆ
Siddha Siri new building preparatory meeting
ಆಲಮೇಲ 14: ಪಟ್ಟಣ ಸಿದ್ದಿಸಿರಿ ಸೌಹಾರ್ದ್ ಸಹಕಾರಿ ಸಂಘ ನಿ,ನೂತನ ಕಟ್ಟಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಿದ್ಧಸಿರಿ ಸಹಕಾರಿ ಬ್ಯಾಂಕಿನ ನಿರ್ದೇಶಕರು ಜಗದೀಶ್ ಕ್ಷತ್ರಿ ಕರ್ನಾಟಕದಲ್ಲಿ ಸೌಹಾರ್ದ ಸಹಕಾರಿ ಸಂಘದಲ್ಲಿ ಪ್ರಥಮ ಸ್ಥಾನ ಪಡೆದಿರುವ ಸಿದ್ದಸಿರಿ ನಮ್ಮ ಹೆಮ್ಮೆಯ ವಿಷಯವಾಗಿದೆ.
ಕನಿಷ್ಠ 20 ವರ್ಷಗಳಿಂದ ನಮ್ಮ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ) ನೇತೃತ್ವದಲ್ಲಿ 211 ಶಾಖೆಗಳು ಕರ್ನಾಟಕದಲ್ಲಿ ಪ್ರಾರಂಭಗೊಂಡಿವೆ ಆದ್ದರಿಂದ ಅತಿ ಹೆಚ್ಚು ಡಿಪೋಜಿಟ್ ಹೊಂದಿರುವ ಕರ್ನಾಟಕದ ಸಿದ್ಧ ಸಿರಿ ಬ್ಯಾಂಕ್ 4370 ಕೋಟಿ ರೂಪಾಯಿ ಇವತ್ತಿನವರೆಗೆ ನಮ್ಮ ಸಿದ್ಧ ಸಿರಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಹೆಮ್ಮೆ ವಿಷಯವಾಗಿದೆ. ಅತಿ ಶೀಘ್ರದಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿ ನಡೆಯುತ್ತಿರುವ ಸಿದ್ಧ ಸಿರಿ ಬ್ಯಾಂಕವಾಗಿದೆ ಆದ್ದರಿಂದ ಆಂಧ್ರ ಗೋವಾ ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಪರಮೀಶನದೊಂದಿಗೆ ಪ್ರಾರಂಭಗೊಳ್ಳುತ್ತಿವೆ. ಸಿದ್ದಸಿರಿ ಪ್ರತಿ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ 25ನೇ ಕಟ್ಟಡ ಆಲಮೇಲದಲ್ಲಿ ವಾಗಿರುತ್ತದೆ. ಉದ್ಯೋಗ ದೃಷ್ಟಿಯಲ್ಲಿ ಬಿಜಾಪುರ ಜಿಲ್ಲೆಯ ರಾಜಕಾರಣದಲ್ಲಿ ಬಸನಗೌಡ ಪಾಟೀಲ( ಯತ್ನಾಳ) ಮೊದಲಿಗರು ಶುಗರ್ ಫ್ಯಾಕ್ಟರಿ ಸೂಪರ್ ಮಾರ್ಕೆಟ್ ಗೋಶಾಲೆ, ಶಿಶು ನಿಕೇತನದಿಂದ ಹಿಡಿದು ಡಿಗ್ರಿವರೆಗೆ ಕಾಲೇಜುಗಳು ಸೃಷ್ಟಿ ಮಾಡಿದ್ದಾರೆ ಸುಮಾರು 10ಸಾವಿರ ಉದ್ಯೋಗ ದೊರಕಿಸಿದರಲ್ಲಿ ಮೊದಲಿಗರು. ಬಿಜಾಪುರದಲ್ಲಿ ಸಿದ್ದೇಶ್ವರ ಅಪ್ಪಾಜಿ ಹೆಸರಿನಲ್ಲಿ 108 ಬೇಡ ಹೊಂದಿರುವ ದವಾಖಾನೆ ಮಾಡಿದ್ದೇವೆ ಉಚಿತವಾಗಿ ಹೆಣ್ಣು ಮಕ್ಕಳಿಗೆ ಹೆರಿಗೆ ವ್ಯವಸ್ಥೆಯ ಮತ್ತು ಬಡವರಿಗೆ ಕಿಡ್ನಿ ಸ್ಪೆಷಲ್ ಲಿಸ್ಟ್ 50ಅ ಡಿಸ್ಕೌಂಟ್ ಈ ಸೇವೆ ಪ್ರಾರಂಭ ಮಾಡಿದ್ದೇವೆ.ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ ಅಧೀನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ವೆಂದು ಹೇಳಿದರು.
ದಿನಾಂಕ. 17-08-2025. ಬೆಳಗ್ಗೆ 11 ಗಂಟೆಗೆ ನೂತನ ಕಟ್ಟಡ ಉದ್ಘಾಟನೆ ಆಲಮೇಲ ಪೂಜರೊಂದಿಗೆ ಅನೇಕ ರಾಜಕೀಯ ಮುಖಂಡರು ಭಾಗವಹಿಸುವರು. ಆಲಮೇಲ ತಾಲೂಕು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಸಿದ್ಧ ಸಿರಿ ಬ್ಯಾಂಕ್ ಆಗಿರಬಹುದು, ಮಾರ್ಕೆಟ್ ಗಳವಾಗಿರಬಹುದು ಅನೇಕ ರೀತಿ ಕೆಲಸ ಕಾರ್ಯಗಳು ಆಗಬೇಕು ಅದರ ಜೊತೆಗೆ ನಮ್ಮ ತಾಲೂಕಿನ ಯುವಕರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಬೇಕು ಬಸನಗೌಡ ಪಾಟೀಲ್ (ಯತ್ನಾಳ) ಇವರಿಗೆ ಆಲಮೇಲ ಪರವಾಗಿ ಧನ್ಯವಾದಗಳು. ರಮೇಶ್ ಬಂಟನೂರು ನಾಗರಿಕ ವೇದಿಕೆ ಅಧ್ಯಕ್ಷರು ಆಲಮೇಲ ಇದೇ ವೇಳೆ ಉಮೇಶ್ ಹರನಾಳ ಜನರಲ್ ಮ್ಯಾನೇಜರ. ಬಸವರಾಜ ಬಾಗೇವಾಡಿ ಎಪಿಎಂಸಿ ಅಧ್ಯಕ್ಷರು ಆಲಮೇಲ. ಅಶೋಕ್ ಕೊಳರಿ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಆಲಮೇಲ. ಬಸವರಾಜ್ ತೇಲ್ಲೂರು. ಪ್ರಭು ವಾಲಿಕರ ಗುಂಡು ಮೇಲಿನಮನಿ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರು. ಶಾಂತೇಶ ಕ್ಷತ್ರಿ ಬಸವರಾಜ್ ಚಿಪರಿ ರಮೇಶ್ ನೇತಲಗಿ. ಅನೇಕ ಸಿದ್ದ ಸಿರಿ ಸಿಬ್ಬಂದಿಗಳುವರದಿ. ಉಮೇಶ ಕಟಬರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 