ಸಿದ್ದರಾಮಯ್ಯ ನನ್ನ ತಮ್ಮ ಇದ್ದ ಹಾಗೆ ; ಸಂಬಂಧ ಚೆನ್ನಾಗಿದೆ : ಆರ್. ವಿ . ದೇಶಪಾಂಡೆ
Siddaramaiah is like my younger brother; our relationship is good: R. V. Deshpande
ಕಾರವಾರ 20 : ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ತಮ್ಮ ಇದ್ದ ಹಾಗೆ, ನಮ್ಮ ಸಂಬಂಧ ಚೆನ್ನಾಗಿದೆ ಎಂದು ಹಿರಿಯ ಕಾಂಗ್ರೆಸ್ಸಿಗ ಹಾಗೂ ಶಾಸಕ ಆರಿ್ವ. ದೇಶಪಾಂಡೆ ಹೇಳಿದರು. ದಾಂಡೇಲಿಯಲ್ಲಿ ಡ್ರೈವಿಂಗ್ ಟೆಸ್ಟ ಸ್ವಯಂಚಾಲಿತ ಟ್ರಾಕ್ ಉದ್ಘಾಟನೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ , ನಾನು ಸಚಿವ ಸ್ಥಾನ ಕೇಳುವುದಿಲ್ಲ. ನಾನು ಎಂಟು ಜನ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದಿನಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ವಯಸ್ಸಿನಲ್ಲಿ ಆರು ತಿಂಗಳು ಹಿರಿಯ ನಾನು. ನನ್ನ ಅವರ ಸಂಬಂಧ ಚೆನ್ನಾಗಿದೆ. ನಾನು ಕ್ಯಾಬಿನೆಟ್ ನಲ್ಲಿರಬೇಕೋ, ಬೇಡವೋ ಎಂದು ಪಕ್ಷ ನಿರ್ಧರಿಸುತ್ತದೆ ಎಂದರು.
ಮುಖ್ಯಮಂತ್ರಿ ಗಳು ಸಹ ಇತಿಮಿತಿಗಳೊಗೆ ಕೆಲಸ ಮಾಡುತ್ತಾರೆ. ಪಕ್ಷದ ಎಲ್ಲಾ ಶಾಸಕರು, ಎಂಎಲ್‌ಸಿಗಳಿಗೆ ಮಂತ್ರಿ ಸ್ಥಾನ ಕೇಳುವ ಹಕ್ಕಿದೆ. ಅದರಲ್ಲಿ ತಪ್ಪೇನಿಲ್ಲ ಎಂದರು . ನಿಮ್ಮ ರಾಜಕೀಯ ವಿರೋಧಿಗಳು ನೀರಿಗಾಗಿ ಪಾದಯಾತ್ರೆ ಯಾಕೆ ? ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ದೇಶಪಾಂಡೆ ಕುಡಿಯುವ ನೀರಿನ ಯೋಜನೆಗಳು ಮುಕ್ತಾಯ ಹಂತದಲ್ಲಿವೆ. ಕಾಳಿ ನದಿಯಿಂದ 40 ಕೆರೆ ತುಂಬಿಸುವ ಯೋಜನೆ, ಬಾಂದಾರ ಯೋಜನೆ ಇನ್ನು ಒಂದು ಅಥವಾ ಎರಡು ತಿಂಗಳಲ್ಲಿ ಉದ್ಘಾಟನೆಯಾಗಲಿವೆ. ನನ್ನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂದು ಶಾಸಕನಾದ ನನಗೆ ಗೊತ್ತಿರುತ್ತದೆ.
ಯೋಜನೆಗಳು ಮುಕ್ತಾಯ ಹಂತದಲ್ಲಿ ಇರುವಾಗ ನೀರಾವರಿಗಾಗಿ ಪಾದಯಾತ್ರೆ ಮಾಡಿದರೆ ಜನರಿಗೆ ಸತ್ಯ ಗೊತ್ತಾಗುತ್ತದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸದ್ಯದಲ್ಲೇ ಯೋಜನೆ ಉದ್ಘಾಟನೆ ನಡೆಯಲಿದೆ ಎಂದರು. ಪ್ಯಾರಿ ಕಬ್ಬು ಕಾರ್ಖಾನೆ ದೇಶದಲ್ಲಿ ಉತ್ತಮ ಬೆಲೆಯನ್ನು ಕಬ್ಬಿಗೆ ನೀಡಿದೆ. ರೈತರ ಕಬ್ಬಿಗೆ ಮಾರಾಟ ಮಾಡಿದ ವರ್ಷದಲ್ಲಿ ಹಣ ಪಾವತಿ ಮಾಡುತ್ತಿದೆ. ಇದು ರೈತರಿಗೂ ಗೊತ್ತು. ರಾಜಕೀಯ ಮಾಡುವವರಗೆ ಕೆಲ ಅಪೇಕ್ಷೇ ಇರುತ್ತವೆ.
ಯಾರು ಹೋರಾಟ ಮಾಡುತ್ತಾರೋ ಅವರಿಂದಲೇ ಅದರ ಉದ್ದೇಶ ತಿಳಿಸುಕೊಳ್ಳಿ ಎಂದರು. ದಾಂಡೇಲಿ ತಾಲೂಕಾಗಿದೆ. ಅತೀ ಕಡಿಮೆ ಮಜಿರೆ ,ಜನಸಂಖ್ಯೆ ಇದ್ದರೂ ತಾಲೂಕು ಕೇಂದ್ರವಾಗಿದೆ. ಎಲ್ಲಾ ಕಚೇರಿಗೆ ಅವಕಾಶ ಆಗುವಂತೆ ಸಂಕೀರ್ಣ ಕಟ್ಟಲಾಗಿದೆ . ಎಲ್ಲಾ ಕೆಲಸ ಒಮ್ಮೆಲೆ ಆಗಬೇಕೆಂದರೆ ಹೇಗೆ? ಹಂತ ಹಂತವಾಗಿ ದಾಂಡೇಲಿ ತಾಲ್ಲೂಕಿನ ಕೆಲಸಗಳು ಆಗಲಿವೆ ಎಂದು ಶಾಸಕ ದೇಶಪಾಂಡೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 