ಬೆಂಗಳೂರು,ಫೆ 01: ಬಂಡಾಯ ಏಳಿಸುವ ಸಂಚಿನ ಪಾತ್ರದಾರರು ಸಿದ್ದರಾಮಯ್ಯ ಎಂದು ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿನ ಬಂಡಾಯ ತಣಿಸಲು ಆಗಲಿಲ್ಲ. ಅವರಲ್ಲೇ ಬಣ ರಾಜಕೀಯ ಜೋರಾಗಿದೆ. ಮೊದಲು ನಿಮ್ಮ ಪಕ್ಷವನ್ನ ನೋಡಿಕೊಳ್ಳಿ. ಖರ್ಗೆ, ಮುನಿಯಪ್ಪ ಸೇರಿ ಹಿರಿಯ ನಾಯಕರು ಬಂಡಾಯ ಎದ್ದಿದ್ದಾರೆ. ಅದನ್ನ ಮೊದಲು ಸಿದ್ದರಾಮಮ್ಯ ನೋಡಿಕೊಳ್ಳಲಿ. ನಮ್ಮಲ್ಲಿ ಬಂಡಾಯ ಏಳಿಸುವ ನಿಮ್ಮ ಕೆಲಸ ಹುಸಿಯಾಗುತ್ತದೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ವಿಸ್ತರಣೆನೂ ಆಗಬಹುದು, ಪುನಾರಚನೆನೂ ಆಗಬಹುದು:
ಸಂಪುಟ ವಿಸ್ತರಣೆ ಅಥವಾ ಪುನಾರಚನೆನೂ ಆಗಬಹುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಯಾರಿಗೆ ಯಾವ ಖಾತೆ ಕೊಡುತ್ತಾರೆ ಅನ್ನೋದು ಸಿಎಂಗೆ ಬಿಟ್ಟಿದ್ದು. ಖಾತೆಗಾಗಿ ನಾವು ಖ್ಯಾತೆ ತೆಗೆಯಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಟಿ.ರವಿ, ಕನಕಪುರದಲ್ಲಿ ಪ್ರಜಾಪ್ರಭುತ್ವ ಇದೆಯಾ?. ಅಲ್ಲಿ ನಡೀತಿರೋದು ಹಣದ ಅಧಿಕಾರದ ಸರ್ವಾಧಿಕಾರ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ?. ಸೋನಿಯಾ, ರಾಹುಲ್ ಗಾಂಧಿ ಎಷ್ಟು ವರ್ಷಗಳಿಂದ ಅಧಿಕಾರ ಇಟ್ಟುಕೊಂಡಿಲ್ಲ. ತುರ್ತು ಪರಿಸ್ಥತಿ ಜಾರಿ ಮಾಡಿ ಪ್ರಜಾಪ್ರಭುತ್ವ ಬಗ್ಗೆ ಮಾತನಾಡೋ ನೈತಿಕತೆ ಅವರಿಗೆ ಇಲ್ಲ. ಪಾರ್ಲಿಮೆಂಟ್ ನಲ್ಲಿ ಪ್ರಜಾಪ್ರಭುತ್ವದ ಮೇಲೆಯೇ ಮಸೂದೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಇಲ್ಲಿನ ಸಾಬ್ರನ್ನೆಲ್ಲಾ ಓಡಿಸ್ತಾರೆ ಅಂತ ಭಾಷಣ ಮಾಡ್ತೀರಿ. ಸಂವಿಧಾನ, ಸಮಾನತೆ ಬಗ್ಗೆ ಹೊಸ ಹೊಸದಾಗಿ ಮಾತನಾಡುತ್ತೀರಿ. ಸಿಎಎ ಬೆಂಬಲಿಸಿದರೆ ಸಮಾನತೆಗೆ ಅರ್ಥ ಬರುತ್ತದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದೇ ಇರುವವರು ಈ ಬಗ್ಗೆ ಮಾತಾಡೋದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.