ಸಿದ್ದರಾಮಯ್ಯ ಸರಕಾರ ಎಲ್ಲ ರಂಗಗಳಲ್ಲಿ ವಿಫಲ: ಶಂಕರ ಮಾಡಲಗಿ

ಸಿದ್ದರಾಮಯ್ಯ ಸರಕಾರ ಎಲ್ಲ ರಂಗಗಳಲ್ಲಿ ವಿಫಲ: ಶಂಕರ ಮಾಡಲಗಿ Siddaramaiah government has failed on all fronts: Shankar Madalagi

ಲೋಕದರ್ಶನ ವರದಿ 

ಯಮಕನಮರಡಿ 15: ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳವು ಅಸ್ತಿತ್ವಕ್ಕೆ ಬಂದು 25 ವರ್ಷಗಳು ಪೂರೈಸಿದ ರಾಜ್ಯದಲ್ಲಿ ಏಕೈಕ ಪಕ್ಷವಾಗಿದೆ ಎಂದು ಜಿಲ್ಲಾ ಜೆ.ಡಿ.ಎಸ್ ಅಧ್ಯಕ್ಷ ಮಾಡಲಗಿ ಹೇಳಿದರು.  

ಅವರು ದಿ. 14 ರಂದು ಯಮಕನಮರಡಿಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಬರುವ ಫೆ, 27ರಂದು ವಿಜಯಪುರದಲ್ಲಿ ಜಾತ್ಯಾತೀತ ಜನತಾದಳದ ಬ್ರಹತ್ತ ಸಮಾವೇಶ ಹಮ್ಮಿಕೊಳ್ಳಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಸುಮಾರು 25 ಸಾವಿರ ಕಾರ್ಯಕರ್ತರು ಪಾಲಗೋಳ್ಳುವ ನೀರಿಕ್ಷೆ ಇದೆ. ಈಗಾಗಲೇ ಹಾಸನ ಜಿಲ್ಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ 2 ಲಕ್ಷ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಿತ್ತೂರು ಕರ್ನಾಟಕ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ ಉತ್ತರ ಕಾರ್ನಾಟಕದ ಜಿಲ್ಲೆ ವಿಜಯಪುರ, ಬಾಗಲಕೋಟ ಸೇರಿ ಈ ಬ್ರಹತ್ತ ಸಮಾವೇಶ ನಡೆಯಲಿದೆ ಎಂದು ಹೇಳುತ್ತಾ ಮಾಜಿ ಪ್ರಧಾನಿ ದೇವೆಗೌಡರು ತಮ್ಮ ಪ್ರಧಾನಮಂತ್ರಿ ಅವಧಿಯಲ್ಲಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಆರಂಭಿಸಲು ಸುಮಾರು 25 ಕಾರ್ಖಾನೆಗಳಿಗೆ ಅನುಮತಿ ನಿಡಿದ್ದರು ಹಾಗೂ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿ ಆದಾಗ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದನ್ನು ಇಲ್ಲಿ ಸ್ಮರೀಸಬಹುದಾಗಿದೆ ಎಂದು ಹೇಳಿದರು.     

ಅಲ್ಲದೆ ಅನೇಕ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ಈಗ ಕೇಂದ್ರ ಸಚಿವರಾದ ಎಚ್‌.ಡಿ ಕುಮಾರಸ್ವಾಮಿಯವರು ದೇಶದಲ್ಲಿ 10 ಸಾವಿರ ವಿದ್ಯುತ್ತ್‌ ಚಾಲಿತ ಬಸ್ಸುಗಳನ್ನು ತರಸಿದ್ದಾರೆ. ಅದರಲ್ಲಿ ನಮ್ಮ ರಾಜ್ಯಕ್ಕೆ 4 ಸಾವಿರದಾ 500 ಬಸ್ಸುಗಳನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿದ್ದಾರೆ. ಆದರೆ ಈಗಿನ ಮುಖ್ಯ ಮಂತ್ರಗಳ ಕುರ್ಚಿಗಾಗಿ ಕಚ್ಚಾಡಿತಿರುವದನ್ನು ಗಮನಿಸಿದರೆ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಟಿತಗೊಂಡಿವೆ. ಅದರಂತೆ ನೀರಾವರಿ ಯೋಜನೆಗಳು ಸಹಿತ ಕುಂಟಿತಗೊಂಡಿವೆ. ಸರಕಾರಿ ನೌಕರರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಗುತ್ತಿಗೆದಾರರು ತಮ್ಮ ಬಿಲ್ಲುಗಳಿಗಾಗಿ ಒದ್ದಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯ ಸರಕಾರವು ವಿಪಲಗೊಂಡಿದೆ ಎಂದು ಮಾಡಲಗಿ ಹೇಳಿದರು.  

ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಉಪಾಧಕ್ಷರಾದ ಪ್ರಲಾದರಾವ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಮುಖಂಡ ಮಾರುತಿ ಅಷ್ಟಗಿ ಮಾತನಾಡಿ ಫೆ, 27 ರಂದು ವಿಜಯಪುರದಲ್ಲಿ ನಡೆಯಲಿರುವ ಜೆ.ಡಿ.ಎಸ್ ಕಾರ್ಯಕರ್ತರ ಸಮಾವೇಶ ಯಶಸ್ವಿಗೊಳಿಸುವದರ ಜೊತೆಗೆ 2028ರ ವಿಧಾನ ಸಭಾ ಜುನಾವಣೆಯಲ್ಲಿ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ನೇತ್ರತ್ವದ ಸರಕಾರವು ರಚನೆಯಾಗಲಿದ್ದು ಮುಂದಿನ ಮುಖ್ಯ ಮಂತ್ರಿ ಎಚ್‌.ಡಿ ಕುಮಾರಸ್ವಾಮಿಯವರು ಆಗುತ್ತಾರೆ ಎಂದು ಮಾರುತಿ ಅಷ್ಟಗಿ ಹೇಳಿದರು.  

ಸದರಿ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಜಿ.ಪಂ ಸದಸ್ಯ ಪಾರೇಶ ಮಲಾಜಿ, ರವಿ ಕುರಾಡೆ, ಜೈಪಾಲ ಜಿಂಡ್ರಾಳಿ, ಪರಶುರಾಮ ಪಾಟೀಲ, ವಿಲಾಸ ಮಾಂಡೇಕರ್, ರಾಹುಲ್ ಹತ್ತರಕಿ, ಭೀಮಾ ಗುಜನಾಳಿ, ಸತಿಶ ಗುಜನಾಳಿ, ಸಂತೋಷ ಮಲಾಜಿ, ಸೇರಿದಂತೆ ಅಪಾರ ಜೆ,ಡಿ,ಎಸ್ ಕಾರ್ಯಕರ್ತರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತವಿದ್ದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.