ಸಿದ್ದಲಿಂಗ ಶ್ರೀಗಳಿಗೆ ಸಹಕಾರಿ ಸಂಘದಿಂದ ಗೌರವ ಸಮರೆ​‍್ಣ

ಸಿದ್ದಲಿಂಗ ಶ್ರೀಗಳಿಗೆ ಸಹಕಾರಿ ಸಂಘದಿಂದ ಗೌರವ ಸಮರೆ​‍್ಣ  Siddalinga Sri is felicitated by the Cooperative Society

ತಾಳಿಕೋಟಿ 16 : ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಸಿದ್ದಲಿಂಗ ದೇವರಿಗೆ ಲಿಂಗದಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಗೌರವ ಸಮರೆ​‍್ಣ ಸಲ್ಲಿಸಲಾಯಿತು. ಗ್ರಾಮದಲ್ಲಿ ಆಗಸ್ಟ್‌ 13ರಿಂದ 15ರವರೆಗೆ ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ "ಅಜ್ಜನ ನಡೆ ಹಳ್ಳಿಯ ಕಡೆ" ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀಗಳನ್ನು ಸಹಕಾರಿ ಸಂಘದ ಕಾರ್ಯಾಲಯಕ್ಕೆ ಆಹ್ವಾನಿಸಿ ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದಲಿಂಗ ಶ್ರೀಗಳು, ಸಹಕಾರಿ ಸಂಘಗಳು ಪರಸ್ಪರ ಸಹಕಾರ ಹಾಗೂ ವಿಶ್ವಾಸದ ಮೇಲೆ ಕಾರ್ಯನಿರ್ವಹಿಸುತ್ತವೆ. ರೈತರ ಅಭಿವೃದ್ಧಿಗಾಗಿ ಸ್ಥಾಪನೆಯಾದ ಸಂಘಗಳು ಇಂದು ಹೆಮ್ಮರವಾಗಿ ಬೆಳೆದಿರುವುದು ಸಂತಸದ ಸಂಗತಿಯಾಗಿದೆ. ಆದರೆ ಜನರ ವಿಶ್ವಾಸಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.  ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಐ. ಬಸರಕೋಡ, ಸದಸ್ಯರಾದ ಎಚ್‌.ಎಸ್‌. ಮುದನೂರ, ಎಚ್‌.ಎಸ್‌. ಬಿರಾದಾರ, ಜಿ.ಎಸ್‌. ವಾಲಿಕಾರ, ಎನ್‌.ಬಿ. ಹೊಸಮನಿ, ಆರ್‌.ಎಂ. ಹೊಸಮನಿ, ಎಸ್‌.ಬಿ. ಪಾಟೀಲ, ಜಿ.ಎಸ್‌. ನಾಡಗೌಡ ಹಾಗೂ ಸಂಘದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಗಣ್ಯರು ಉಪಸ್ಥಿತರಿದ್ದರು.