ಎಸ್‌ಡಿಎಂಸಿ ಅಧ್ಯಕ್ಷರಾಗಿ ಸಿದ್ದಯ್ಯ ಆಯ್ಕೆ
Siddaiah elected as SDMC president
ಹೂವಿನಹಡಗಲಿ 02: ತಾಲೂಕಿನ ಅಡವಿ ಮಲ್ಲನಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಸಿದ್ದಯ್ಯ ಪಿ.ಎಂ ಇವರನ್ನು ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಶಾಲೆಯ ಮುಖ್ಯ ಗುರುಗಳಾದ ಹುಗಲೂರು ವೀರಣ್ಣ ಮಾತನಾಡಿ "ಶಾಲಾ ಸುಧಾರಣೆ ಸಮಿತಿ"ಯಿಂದ ಶಾಲಾ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಕರೆ ತಂದು ಹಾಜರಾತಿ ಹೆಚ್ಚಿಸಲು ಒತ್ತು ನೀಡುತ್ತವೆ ಎಂದರು. ದೈಹಿಕ ಶಿಕ್ಷಕ ಪಂಚಪ್ಪ ಮಾತನಾಡಿ ನಮ್ಮ ಶಾಲೆಯ ಮಕ್ಕಳು ಪಾಠದ ಜತೆಗೆ ಕ್ರೀಡೆ, ಪ್ರತಿಭಾ ಕಾರಂಜಿಯಲ್ಲಿ ಎಲ್ಲಾ ರಂಗದಲ್ಲಿಉತ್ತಮ ಸಾಧನೆ ಮಾಡಿದ್ದಾರೆ ಎಂದರು. ಶಿಕ್ಷಕ ವಿಬಿ ಜಗದೀಶ್ ಮಾತನಾಡಿದರು.ಉಪಾಧ್ಯಕ್ಷೆ ಕೆ. ಶಾರದ ಆಯ್ಕೆಯಾದರು.ಈ ವೇಳೆ ಶಾಲೆಯ ನೂತನ ಎಸ್‌ಡಿಎಂಸಿ ರಚನಾ ಮಂಡಳಿಯ ಸರ್ವ ಸದಸ್ಯರು, ಮಾಜಿ ಎಸ್‌ಡಿಎಂಸಿ ಅಧ್ಯಕ್ಷರುಗಳಾದ ಯು.ಪಿ ಮಂಜುನಾಥ್, ಎಂ. ಕೊಟ್ರೇಶ್, ಗಡ್ಡಿ ವೀರಣ್ಣ, ಗ್ರಾಮಸ್ತರಾದ ಬಿ.ರಾಜಪ್ಪ, ಕೆ. ಬಸವರಾಜ, ಹೆಚ್. ಈಶಪ್ಪ, ಎಂ.ದೇವಪ್ಪ, ಎಕೆ ಮರಿಯಪ್ಪ, ಎಕೆ ಅಶೋಕ್, ಹೆಚ್. ಕವಿತಾ, ಪಿಎಂ ಮಲ್ಲಯ್ಯ, ಅತಿಥಿ ಶಿಕ್ಷಕ ಆನಂದ ಇಟ್ಟಿಗಿ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರು, ಅಡುಗೆ ಸಿಬ್ಬಂದಿ ವರ್ಗ ಮತ್ತು ಮಕ್ಕಳಿದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 