ಯಶ್ವಂತ್ ಮೇತ್ರಿ ಗೆ ಸಿದ್ದಯ್ಯ ಪುರಾಣಿ ಸ್ಮಾರಕ ಪ್ರಶಸ್ತಿ ಪ್ರದಾನ

ಯಶ್ವಂತ್ ಮೇತ್ರಿ ಗೆ  ಸಿದ್ದಯ್ಯ ಪುರಾಣಿ ಸ್ಮಾರಕ ಪ್ರಶಸ್ತಿ ಪ್ರದಾನ   Siddaiah Purani Memorial Award presented to Yashwant Meitri

ಕೊಪ್ಪಳ 31:  ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಉತ್ಸವ ಹಾಗೂ  ತಿರುಳು ಗನ್ನಡ ಸಾಂಸ್ಕೃತಿಕ ಸಮ್ಮೇಳನ ದಲ್ಲಿ ಕೊಡ ಮಾಡಿದ 2025 ನೇ ಪ್ರಸಕ್ತ ಸಾಲಿನ ಪ್ರತಿಷ್ಠಿತ ಡಾ, ಸಿದ್ದಯ್ಯ ಪುರಾಣಿಕ್ ಸ್ಮಾರಕ ಪ್ರಶಸ್ತಿಯನ್ನು ಕೊಪ್ಪಳದ ನಿವಾಸಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ವ್ಯವಸ್ಥಾಪಕರಾದ ಯಶ್ವಂತ್ ಕುಮಾರ್ ತಂದೆ ಗಂಗಾಧರ ಮೇತ್ರಿ ರವರ ಉತ್ತಮ ಸೇವೆಗಾಗಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಿ ಅಭಿನಂದಿಸಲಾಯಿತು,  

ಸಿದ್ದಯ್ಯ ಪುರಾಣಿಕ್ ಸ್ಮಾರಕ ಪ್ರಶಸ್ತಿಯನ್ನು ಪುರಸ್ಕೃತ ಯಶ್ವಂತ್ ಕುಮಾರ್ ಮೇತ್ರಿ ರವರು   ಕೊಪ್ಪಳ ನಗರದ  ನಿವಾಸಿಯಾಗಿದ್ದು ಸರ್ಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕದಲ್ಲಿ ಕಳೆದ ಸುಮಾರು ಮೂರು ದಶಕ ಗಳಿಂದ ಸರ್ಕಾರಿ ನೌಕರರ ಸಂಘದ ಸೇವೆ ಸಂಘದ ಸೇವೆಯಲ್ಲಿ ತೊಡಗಿಸಿಕೊಂಡು ಪದಾಧಿಕಾರಿಗಳಿಗೆ ಅಧ್ಯಕ್ಷರಿಗೆ ಸಹಾಯಕರಾಗಿ ಉತ್ತಮ ಸೇವೆ ಸಲ್ಲಿಸಿ ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಇವರ ಉತ್ತಮ ಕರ್ತವ್ಯ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಸದರಿಯವರಿಗೆ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಕೊಡ ಮಾಡಿದ ಪ್ರತಿಷ್ಠಿತ ಡಾ, ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಮಾಡುವ ಸಂದರ್ಭದಲ್ಲಿ ಸಂಘಟಕರಾದ ಮಹೇಶ್ ಬಾಬು ಸುರುವೇ, ವೇದಿಕೆಯ ಜಿಲ್ಲಾಧ್ಯಕ್ಷ ಜಿ.ಎಸ್‌. ಗೋನಾಳ ,ತಿರುಳುಗನ್ನಡ ಪ್ರತಿಷ್ಠಾನದ ಜಿಲ್ಲಾ ಅಧ್ಯಕ್ಷ ಎಂ ಸಾಧಿಕ್ ಅಲಿ ,ವೇದಿಕೆಯ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಗೌರವಾಧ್ಯಕ್ಷ ಎಂ.ಬಿ. ಅಳವಂಡಿ, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಲದ ನಿಕಟ ಪೂರ್ವ ಅಧ್ಯಕ್ಷರಾದ ಕೋಮಲಾ ಕುದುರಿಮೋತಿ, ನೂತನ ಅಧ್ಯಕ್ಷರಾದ ಮಧು ಪಂಡಿತ್ ಹಡಗಲಿ ,ಉಪಾಧ್ಯಕ್ಷರಾದ ಸುಧಾ ಚೆಕ್ಕಿ ,ಚಲನಚಿತ್ರ ಸಾಹಿತಿ ಮಹೇಶ್ ಮನ್ನಾಪುರ ,ಸಂಗೀತ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ, ಸಾಹಿತಿ ಪತ್ರಕರ್ತ ಚನ್ನಬಸಪ್ಪ ಕೊಟ್ಟಿಗಿ ,ರಮೇಶ್ ಸುರ್ವೆ, ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು, ಯಶ್ವಂತ್ ಕುಮಾರ್ ರವರಿಗೆ  ಪ್ರಶಸ್ತಿ ಲಭಿಸಿರುವುದಕ್ಕೆ ಅವರ ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.