ಗಂಡು ಮಗುವಿಗೆ ಜನ್ಮ ನೀಡಿದ ಶ್ವೇತಾ ಚಂಗಪ್ಪ

ಬೆಂಗಳೂರು, ಸೆ 10    ಕಿರುತೆರೆ ನಟಿ ಹಾಗೂ 'ಮಜಾ ಟಾಕೀಸ್' ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ, ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾದ ಸಂತಸದಲ್ಲಿದ್ದಾರೆ 

ನಟಿ ಶ್ವೇತಾ ಚೆಂಗಪ್ಪ ಅವರು ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  

 ನಾವು ಈಗ ಮೂವರಾಗಿದ್ದೇವೆ. ನಮ್ಮ ತಾಯಿ, ತಂದೆ, ಕುಟುಂಬ, ಸ್ನೇಹಿತರು ಮತ್ತು ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಯಿಂದ ನಾನು ಹಾಗೂ ಕಿರಣ್ ನಮ್ಮ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗುವಾಗಿದೆ ಎಂದು ಶ್ವೇತಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಜೊತೆಗೆ ಆಸ್ಪತ್ರೆಯಲ್ಲಿ ಶ್ವೇತಾ ಮತ್ತು ಕಿರಣ್ ಇಬ್ಬರೂ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.