ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ರಾಣಿಬೆನ್ನೂರ 15: ಇಲ್ಲಿನ ಹುಣಸೀಕಟ್ಟಿ ರಸ್ತೆಯ ಮೌಂಟ್‌ವೀವ್ ಸ್ಕೂಲಿನ ಕ್ರೀಡಾಪಟುಗಳು ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ  ಆಯ್ಕೆಯಾಗಿದ್ದಾರೆ. 

ಬಾಲಕೀಯರ ವಿಭಾಗದಲ್ಲಿ ಅಂಶು ಶೀಲವಂತ್, ಅಕ್ಷರಾ ಅಂಕುಶಖಾನಿ, ಹರ್ಷಿತಾ ಜೋಗಿಹಳ್ಳಿ, ಶ್ರೇಯಾ ಕೆಂಚಮ್ಮನವರ ಹಾಗೂ ಬಾಲಕರ ವಿಭಾಗದಲ್ಲಿ ಓಂಕಾರ ಬ್ಯಾಡಗಿ, ಸನತ ಅಬ್ಬಿಗೇರಿ, ಕಾರ್ತಿಕ್ ನಾಗನೂರ ಮತ್ತು ವೆಂಕಟೇಶ್ ಎರೆಶೀಮಿ, ದ್ವಿತೀಯ ಸ್ಥಾನ ಪಡೆದಿದ್ದಾರೆ. ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ ಚಂದಿ, ಚಂದ್ರು ಗ್ಯಾನಗೌಡ್ರ, ಡಿ.ಬಿ. ಸುನೀತಾ, ಸುಮನ್ ಶೀಲವಂತ, ಆನಂದ ಶೀಲವಂತ, ಬಸವರಾಜ ಮಡಿವಾಳರ ಹಾಗೂ ತಂಡದ ಕೋಚ್ ಹಾಗೂ ಶಿಕ್ಷಕರು ಇದ್ದಾರೆ.