ಶಟಲ್ ಬ್ಯಾಡ್ಮಿಂಟನ್: ಗ್ಲೋಬಲ್ ಪ. ಪೂ. ಕಾಲೇಜ್ ರಾಜ್ಯಮಟ್ಟಕ್ಕೆ ಆಯ್ಕೆ
Shuttle Badminton: Global P. P. College selected for state level
ಶಟಲ್ ಬ್ಯಾಡ್ಮಿಂಟನ್: ಗ್ಲೋಬಲ್ ಪ. ಪೂ. ಕಾಲೇಜ್ ರಾಜ್ಯಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ
ಹೂವಿನಹಡಗಲಿ 08 : ಪಟ್ಟಣದ ಜಿಪಿಜಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ವಿಜಯನಗರ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ನಲ್ಲಿ ಹೊಳಗುಂದಿಯ ಗ್ಲೋಬಲ್ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಹಗರಿಬೊಮ್ಮನಹಳ್ಳಿ ತಂಡದ ವಿರುದ್ಧ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.ಕ್ರೀಡಾಕೂಟದಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರಿದ ಪ್ರೀತಂ ನಿಡೋಣಿ ,ಗುರು ಪ್ರಸಾದ್ ಆರ್ ವಿ, ಗಗನ್ ಎಂ ಕೆ, ಪೃಥ್ವಿ ರಾಜ್ ಕರ್ಣಂ .ಅವರ ತಂಡವು ಜಿಲ್ಲಾ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯಿತು.ಈ ತಂಡದ ಸಾಧನೆಯನ್ನು ಗ್ಲೋಬಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಿ. ಅಬ್ದುಲ್ ರಫಿ, ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀ ಡಿ. ಕರೀಂ ಸಾಬ್ ,ಪ್ರಾಚಾರ್ಯರಾದ ಅಶ್ವಿನ್ ಕುಮಾರ್, ಉಪನ್ಯಾಸಕರಾದ ಜೆ.ಕೃಷ್ಣರಾಜ್, ಹೆಚ್ ಬಸವರಾಜ, ಸೈಯದ್ ಸಮೀರ್, ಎಸ್ .ಬಿ. ಮಂಗಳಗೌರಿ, ಸೋಗಿ ಮಹಾದೇವಪ್ಪ, ಶ್ವೇತಾ ಬೆಣ್ಣಿ, ಅಭು ಸಲೆಹಾ, ಹರ್ಷದ ಅಲಿ, ಕಾಲೇಜಿನ ಸಿಬ್ಬಂದಿಗಳಾದ ಅಜ್ಮೀರ್ ಎಂ, ಪ್ರಕಾಶ್, ಸೇರಿದಂತೆ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಸದಸ್ಯರು ಪಾಲಕರು ಪೋಷಕರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿ ಅಭಿನಂದಿಸಿದ್ದಾರೆ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 