ಜೈನಕಾಲೇಜ್‌ನಲ್ಲಿ ಎಂಸಿಎ ವಿಭಾಗದಿಂದ ಶುಭಾರಂಭ್‌-2024

Shubharambh-2024 from MCA Department in Jain College

ಬೆಳಗಾವಿ 23: ನಗರದ ಜೈನ ಇಂಜಿನಿಯರ್ ಕಾಲೇಜಿನ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದಿಂದ ಸೋಮವಾರ ದಿ.23 ರಂದು ಶುಭಾರಂಭ-2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

2024-2025 ನೇ ಸಾಲಿನ ಎಂಸಿಎ ಮೊದಲನೇ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮತ್ತು ಕೆಲವು ಸಂಪ್ರದಾಯಿಕ ಸ್ಪರ್ಶವನ್ನು ಸೇರಿಸಲು ಹಮ್ಮಿಕೊಂಡ ಕಾರ್ಯಕ್ರಮ ಇದಾಗಿತ್ತು. 

ಪ್ರಾಂಶುಪಾಲರು ಹಾಗೂ ನಿರ್ದೇಶಕರು ಆದ ಡಾ.ಜೆ. ಶಿವಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಜೈನ ಕಾಲೇಜಿನಲ್ಲಿ ನಾವು ಕೇವಲ ಶೈಕ್ಷಣಿಕ ಪಠ್ಯಕ್ರಮವನ್ನು ಮಾತ್ರ ಬೋಧಿಸುವುದಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಸಿಗುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಅವರ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಪ್ರೋತ್ಸಾ ಹಿಸುತ್ತೇವೆ ಮತ್ತು ಈ ಸ್ಪರ್ಧಾಯುಗದಲ್ಲಿಅವರು ಯಾವುದೇ ಸ್ಪರ್ಧೆಗೆ ತಯಾರಿರುವಂತೆ ನೋಡಿಕೊಳ್ಳುತ್ತೇವೆ. ನಮ್ಮಲ್ಲಿ ಲಿಂಕ್ಢಿನ್ ಪ್ರಮಾಣೀಕರಣ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸ್ಪರ್ಧೆಗಳಿಗೆ ಅಣಿಯಾಗುತ್ತಿದ್ದಾರೆ ಎಂದು ತಿಳಿಸಿದರು. 

ಎಂಸಿಎ ವಿಭಾಗದ ಎಚ್‌ಓಡಿ ಡಾ. ಪ್ರವೀಣ ಬನ್ಸೋಡೆ ಎಲ್ಲರನ್ನು ಸ್ವಾಗತಿಸಿ ಕಾಲೇಜಿನಲ್ಲಿ ಲಭ್ಯವಿರುವ ಸಂಪನ್ಮೂಲಗಳು, ರಾಜ್ಯ-ರಾಷ್ಟ್ರ ಮಟ್ಟದ ವಿವಿಧ ಉಪಕ್ರಮಗಳು ಮತ್ತು ಕಾರ್ಯಕ್ರಮಗಳ ಒಳನೋಟಗಳನ್ನು ವಿವರಿಸಿದರು.ಇಲ್ಲಿನ ಶಿಕ್ಷಕರು ಶಿಕ್ಷಣ ತಜ್ಞರಾಗಿರುವುದಲ್ಲದೆ, ಪಠ್ಯಕ್ರಮದ ಸಂಶೋಧನೆ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಿವ್ಹಿಲ್ ವಿಭಾಗದ ಎಚ್‌ಓಡಿ ಡಾ.ಸಂಜೀವ ಸಂಗಮಿ, ಎಂಟೆಕ್ ಸಮನ್ವಯಾಧಿಕಾರಿ ಡಾ. ನಿತ್ಯಾನಂದ ಕುಡಚಿಮಠ, ಎಎಸ್‌ಟಿ ಸಮನ್ವಯಾಧಿಕಾರಿ ಪ್ರೊ. ವಿನಾಯಕ ಪತಕಿ ಮುಂತಾದವರು ಹಾಜರಿದ್ದರು. ಈ ಕಾರ್ಯಕ್ರಮವನ್ನು ಪ್ರೊ.ಸೋನಲ್ ಪತಂಗೆ ಹಾಗೂ ಪ್ರೊ.ಮಿಲಿಂದ್ ಪವಾರ ಸಂಯೋಜಿಸಿದ್ದರು.