ಮಹಾರಾಣಿ ಕ್ರಿಕೇಟ್ ಕಪ್ ಪಂದ್ಯಾವಳಿಗೆ ನಿರ್ಣಾಯಕರಾಗಿ ಶ್ರೀಕಾಂತ ಕಾಖಂಡಕಿ ಆಯ್ಕೆ

ಮಹಾರಾಣಿ ಕ್ರಿಕೇಟ್ ಕಪ್ ಪಂದ್ಯಾವಳಿಗೆ ನಿರ್ಣಾಯಕರಾಗಿ ಶ್ರೀಕಾಂತ ಕಾಖಂಡಕಿ ಆಯ್ಕೆ Shrikanth Kakhandaki selected as an umpire for the Maharani Cricket Cup tournament

 ದೇವರಹಿಪ್ಪರಗಿ 17: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೇಟ್ ಕ್ರೀಡಾಂಗಣದಲ್ಲಿ ಇದೇ ತಿಂಗಳು ಜು 23 ರಿಂದ ಅಗಸ್ಟ 2ನೇ ತಾರೀಖಿನವರೆಗೆ ನಡೆಯಲಿರುವ ಮಹಿಳೆಯರ ಮಹಾರಾಣಿ  ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿಗೆ ದೇವರಹಿಪ್ಪರಗಿ ಪಟ್ಟಣದ ಶ್ರೀಕಾಂತ ಕಾಖಂಡಕಿಯವರು ಆನ್ ಫೀಲ್ಡ್‌ ಅಂಪೈರ ಆಗಿ ಆಯ್ಕೆಯಾಗಿದ್ದಾರೆ.  ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆಯ ಉನ್ನತ ಪಂದ್ಯಾವಳಿಯಲ್ಲಿ ಅಂಪೈರ ಆಗಿ ಆಯ್ಕೆಯಾದವರಲ್ಲಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಪ್ರಥಮ ನಿರ್ಣಾಯಕರಾಗಿ ಆಯ್ಕೆಯಾಗಿರುವ ಶ್ರೀಕಾಂತ ಅವರು, ರಾಷ್ಟ್ರೀಯ ಟೆನ್ನಿಸಬಾಲ ಕ್ರಿಕೇಟ್ ಚಾಂಪಿಯನಶಿಪ ಪಂದ್ಯಾವಳಿಗಳಲ್ಲಿ, ಹಿಮಾಚಲ ಪ್ರದೇಶದ ಕುಲ್ಲು, ಉತ್ತರ ಪ್ರದೇಶದ ವಾರಣಾಸಿ, ಬಿಹಾರ, ಗುಜರಾತ, ಚೆನ್ನೈ, ಗೋವಾದಲ್ಲಿ ಈಗಾಗಲೇ ಅಂಪೈರ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಶ್ರೀಕಾಂತ ಅವರಿಗೆ ವಿಜಯಪುರದ ಖ್ಯಾತ ಕ್ರಿಕೇಟ್ ತಜ್ಞರಾದ ಡಾ.ಅಶೋಕಕುಮಾರ ಜಾಧವ ಇವರ ಮಾರ್ಗದರ್ಶನದಲ್ಲಿ ಈ ಮಹೋನ್ನತ ಸಾಧನೆಗೈದ ಇವರಿಗೆ ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆಯ ವಿಜಯಪುರದ ಸಂಯೋಜಕ ಎನ.ಎಮ.ಹುಟಗಿ, ದೇವರಹಿಪ್ಪರಗಿಯ ಮಾಜಿ ಆಟಗಾರರು ಕೆ.ಎಸ.ಸಿ.ಎ. ಸಂಯೋಜಿತ ಕ್ರಿಕೇಟ್ ಕ್ಲಬಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಹಲವಾರು ಕ್ರಿಕೇಟ್ ಆಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.