ಮಹಾಲಿಂಗಪುರ 02 : ಹಿಂದೂ ನಾಯಕ ಶ್ರೀರಾಮ ಸೇನೆ ರಾಷ್ಟ್ರೀಯ ನಾಯಕರಾದ ಪ್ರಮೋದ ಮುತಾಲಿಕಜೀಯವರ ಮೇಲೆ ಪೋಲೀಸ್ ಇಲಾಖೆ ಹೇರಿರುವ ಶಿವಮೊಗ್ಗ ಜಿಲ್ಲಾ ನಿಬಂರ್ಧ ಕ್ರಮವನ್ನು ಶ್ರೀರಾಮ ಸೇನೆ ಉಗ್ರವಾಗಿ ಖಂಡಿಸುತ್ತದೆ ಎಂದು ಪ್ರಾಂತ ಅಧ್ಯಕ್ಷರಾದ ಮಹಾಲಿಂಗಪ್ಪ ಗುಂಜಿಗಾಂವಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಪತ್ರಿಕೆಗೆ ಹೇಳಿಕೆ ನೀಡಿ ಮಾತನಾಡಿದ ಅವರು, ಮುತಾಲಿಕಜೀ ಅವರು ಅಪ್ಪಟ ದೇಶಭಕ್ತರಾಗಿ, ಕಳೆದ 50 ವರ್ಷಗಳಿಂದ ದೇಶ ಮತ್ತು ಸನಾತನ ಧರ್ಮಕ್ಕಾಗಿ ತಮ್ಮ ಮನೆ, ಮಠ ಮತ್ತು ಸಂಸಾರ ತ್ಯಜಿಸಿ ಸ್ವಾಭಿಮಾನದ ಹೋರಾಟ ಮಾಡುತ್ತ ಬಂದಿದ್ದಾರೆ.ಇಂದಿಗೂ 70 ರ ಇಳಿ ವಯಸ್ಸಿನಲ್ಲಿರುವ ಅವರ ಉಸಿರಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆ ರಾರಾಜಿಸುತ್ತಿದೆ. ಅಂತಹ ಮೇರು ವ್ಯಕ್ತಿಗೆ ಮುಗಿದು ಹೋದ ಪ್ರಕರಣಗಳನ್ನು ಮುಂದೆ ಮಾಡಿ ನಿಭಂರ್ಧ ಎಂದರೆ ಆಶಾಸ್ಪದವಲ್ಲವೆ ?. ಈ ವಿಷಯವನ್ನು ಪ್ರತಿಯೊಬ್ಬ ದೇಶ ಭಕ್ತ ಖಂಡಿಸಲೆಬೇಕು. ಸಕಾರಣವಿಲ್ಲದೆ ಆಡಳಿತದಿಂದ ಆಗುತ್ತಿರುವ ಇಂತಹ ಘಟನೆಗಳಿಂದ ಮತ್ತೊಮ್ಮೆ ಪರಕೀಯರ ಆಳ್ವಿಕೆ ರಾಜ್ಯದಲ್ಲಿ ಮುಂದುವರಿದಿದೆಯೇ ಎಂಬ ಸಂಶಯ ನಮ್ಮಲ್ಲಿ ವ್ಯಕ್ತವಾಗುತ್ತಿದೆ ಎಂದರು.ಕೋಮು ಸೂಕ್ಷ್ಮ ಪ್ರದೇಶವೆಂದು ನಿಭಂರ್ಧ ಹೇರುತ್ತಿರುವಿರಿ ಹಾಗಾದರೆ ಆ ಗಲಭೆಕೋರರನ್ನು ಬಂಧಿಸಿ ಹೆಡೆಮುರಿ ಕಟ್ಟುವ ಸಾಮರ್ಥ್ಯ ಸರ್ಕಾರಕ್ಕೆ ಇಲ್ವಾ?. ಎಂದು ಪ್ರಶ್ನಿಸಿ ಸರ್ಕಾರದಿಂದ ನಡೆಯುತ್ತಿರುವ ಈ ಲಜ್ಜೆಗೆಟ್ಟ ನಡೆಗೆ ನಮ್ಮ ಧಿಕ್ಕಾರವಿದೆ.
ತಕ್ಷಣವೇ ಸರ್ಕಾರ ನಮ್ಮ ರಾಷ್ಟ್ರೀಯ ನಾಯಕರಿಗೆ ಹೇರಿರುವ ನಿಬಂರ್ಧ ವಾಪಸ್ ಪಡೆದು ಸಂವಿಧಾನ ದತ್ತ ಹಕ್ಕನ್ನು ಎತ್ತಿಹಿಡಿಯಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ. ಇಲ್ಲವಾದಲ್ಲಿ ನಮ್ಮಿಂದ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದರು. 02 ಟಟಠಿ 0 2ಠಿಠಠ