ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆ: 79ನೇ ಸ್ವಾತಂತ್ರ್ಯ ದಿನಾಚರಣೆ
Shree SS Vidya Institution: 79th Independence Day Celebration
ತಾಳಿಕೋಟಿ, 17 ; ಪಟ್ಟಣದ ಶ್ರೀ ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಧ್ವಜಾರೋಹಣ ನೇರವೇರಿಸಿ ಮತನಾಡಿ ನಮ್ಮ ಹಿರಿಯರು ತ್ಯಾಗ ಬಲಿದಾನಗಳಿಂದ ಕೊಟ್ಟು ಹೋದ ಈ ಸ್ವಾತಂತ್ರವನ್ನು ರಕ್ಷಿಸಿಕೊಂಡು ದೇಶದ ಪ್ರಗತಿಗಾಗಿ ನಾವೆಲ್ಲರೂ ಕೆಲಸ ಮಾಡುವ ಅಗತ್ಯವಿದೆ ಎಂದ ಅವರು ದೇಶದ ಬಹುದೊಡ್ಡ ಶಕ್ತಿ ವಿದ್ಯಾರ್ಥಿ ಯುವ ಸಮುದಾಯವಾಗಿದೆ ಇದು ದೇಶದ ಭವಿಷ್ಯವಾಗಿದೆ ಯುವಕರು ಮೊಬೈಲ್ ಗೀಳಿನಿಂದ ಹೊರಬಂದು ಶ್ರೇಷ್ಠ ಗುರಿಯೊಂದಿಗೆ ಕೆಲಸ ಮಾಡುವ ಅಗತ್ಯ ಇದೆ ಎಂದರು. ಉಪನ್ಯಾಸಕರಾದ ಎಮ್.ಬಿ.ವಾಲೀಕಾರ ಅವರು ಮನೆ-ಮನೆಯಲ್ಲಿ ದೇಶಕಾಯುವ ಯೋದರಾಗಬೇಕು ಎಂದು ಹೇಳಿದರು.
ಎಸ್.ವಿ.ಜಾಮಗೊಂಡಿ ಯವರು ಸ್ವಾತಂತ್ರ್ಯ ಹಿನ್ನೆಲೆಯನ್ನು ವಿವರಿಸಿದರು. ಧ್ವಜಾರೋಹಣ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಳಿಕೋಟಿ ಕೆನರಾ ಬ್ಯಾಂಕಿನ ಕಿರಿಯ ವ್ಯವಸ್ಥಾಪಕರಾದ ಪ್ರಶಾಂತ ಕುಮಾರ ಹಾಗೂ ಗುರುರಾಜ. ಕಾಜಗಾರ. ಇವರು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಒಟ್ಟು ಆರು ಖಅ,ಖಖಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅನುಕೂಲವಾಗಲಿ ಅಂತಾ ಕೆನರಾ ವಿದ್ಯಾ ಜ್ಯೋತಿ ಯೋಜನೆಯಲ್ಲಿ ಪ್ರೌಢಶಾಲೆಯ 3 ವಿದ್ಯಾರ್ಥಿಗಳಿಗೆ ತಲಾ 5000 ಸಾವಿರ ಮತ್ತು ಪ್ರಾಥಮಿಕ ಶಾಲೆಯ 3 ವಿದ್ಯಾರ್ಥಿಗಳಿಗೆ ತಲಾ 2500 ಸಾವಿರ ತಾಳಿಕೋಟಿ ಕೆನರಾ ಬ್ಯಾಂಕಿನಿಂದ ಸಹಾಯ ಮಾಡಿದರು.
ಪ್ರಸಿದ್ಧ ವ್ಯಾಪಾರಸ್ಥರಾದ ದತ್ತಾ ಟೆಕ್ಸಟೈಲನ ಮಾಲೀಕರಾದ ಸಚಿನ.ಹಂಚಾಟೆ. ಬ್ರಹ್ಮ ಲಿಂಗೇಶ್ವರ ಪ್ರಾಥಮಿಕ ಶಾಲೆಯ 20 ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಲಾ 1500 ರೂಪಾಯಿಗಳನ್ನು ಕೊಡುವದಾಗಿ ಘೋಷಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ರವಿ.ಬ.ಪಾಟೀಲರು. ಪ್ರಾಚಾರ್ಯರುಗಳಾದ ಡಾ:ಎಚ್.ಬಿ. ನಡುವಿನಕೇರಿ, ಶಿವಕುಮಾರ. ನಾಯಕ. ವಿರೇಶ.ಕನಕ. ಜಿ.ಸಿ.ಪಾಟೀಲ. ಎಸ್.ಬಿ.ಮಂಗ್ಯಾಳ. ಸಿದ್ಧಾರ್ಥ. ಮುಖ್ಯೋಪಾಧ್ಯಾಯರಾದ ಅಶೋಕ. ಕಟ್ಟಿ. ಆಂಗ್ಲ ಮಾದ್ಯಮ ಗುರುಮಾತೆ ಮೀರಾ ದೇಶಪಾಂಡೆ. ಎಸ್ ಎಸ್.ವಿದ್ಯಾಸಂಸ್ಥೆಯ ಸಮಸ್ತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿರೂಪಣೆ ಶಿಕ್ಷಕ ಬಿ.ಆಯ್.ಹಿರೇಹೊಳಿ ನೇರವೇರಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 