ಶ್ರಾವಣ ಮಾಸದ ಕಾರ್ಯಕ್ರಮ
Shravan month programme
ಯರಗಟ್ಟಿ 27: ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಸೋಮಶೇಖರ ಮಠದ ಪೂಜ್ಯರಾದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರಾವಣ ಮಾಸದ ಅಂಗವಾಗಿ ಜು. 28 ರಿಂದ ಪ್ರತಿದಿನ ಬೆಳಿಗ್ಗೆ ವಿವಿಧ ಓಣಿಗಳಲ್ಲಿ ಧಾರ್ಮಿಕ ಪಥ ಸಂಚಲನ ಕಾರ್ಯಕ್ರಮ ನಾಮಸ್ಮರಣೆಯಿಂದ ಸಂಭ್ರಮದಿಂದ ಜರುಗಲಿದೆ.
ಗಾಂಧಿನಗರದ ಶ್ರೀ ಹನುಮಾನ ಮಂದಿರ, ನಿರ್ಮಲ ನಗರದಲ್ಲಿ, ಅಕ್ಕಮಹಾದೇವಿ ಮಠ ಹಾಗೂ ಸೋಮಶೇಖರ ಮಠದ ಸಹಜ ಸತ್ಸಂಗ ಬಳಗದಲ್ಲಿ ವಿಶೇಷ ಶಿವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗಿನ ಸಮಯ ಜರುಗುವ ಧಾರ್ಮಿಕ ಪಥ ಸಂಚಲನದಲ್ಲಿ ಹೆಚ್ಚಿನ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಬಸನಗೌಡ ಹುಲಿಗೊಪ್ಪ ತಿಳಿಸಿದ್ದಾರೆ.
ಲಕ್ಷ ಬಿಲ್ವಾರ್ಚನೆ : ಪಟ್ಟಣದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವರಿಗೆ ಶ್ರಾವಣ ಮಾಸದ ಅಂಗವಾಗಿ ಜು. 28 ರಂದು ಬೆಳಿಗ್ಗೆ ನಾಮೋಚ್ಛಾರಣೆಯೊಂದಿಗೆ ಭಕ್ತಾದಿಗಳಿಂದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ಜರುಗಲಿದೆ.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 