ವಾಷಿಂಗ್ಟನ್, ಫೆ. 27; ಅಮೇರಿಕಾದ ರಾಜ್ಯ ವಿಸ್ಕಾನ್ಸಿನ್ ನಲ್ಲಿರುವ ಬ್ರೂವರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಮಿಲ್ವಾಕೀ ದಿನಪತ್ರಿಕೆ ಸೆಂಟಿನೆಲ್ ವರದಿ ಮಾಡಿದೆ.ಮಿಲ್ವಾಕೀ ನಗರದ ಮೊಲ್ಸನ್ ಕೂರ್ಸ್ ಬಿಯರ್ ಬ್ರೂವರಿಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯು ಅನೇಕ ಮೂಲಗಳನ್ನು ಉಲ್ಲೇಖಿಸಿದೆ. ಗುಂಡಿನ ದಾಳಿ ಇನ್ನೂ ಸಕ್ರಿಯವಾಗಿದೆ ಎಂದು ಮಿಲ್ವಾಕೀ ಪೊಲೀಸ್ ಇಲಾಖೆ ಟ್ವಿಟರ್ ಮೂಲಕ ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದಿನ ಹೇಳಿಕೆಯಲ್ಲಿ, ಮಿಲ್ವಾಕೀ ಪೊಲೀಸ್ ಇಲಾಖೆ ವೆಸ್ಟ್ ಸ್ಟೇಟ್ ಸ್ಟ್ರೀಟ್ನ 4000 ಬ್ಲಾಕ್ನಲ್ಲಿ ನಡೆದ "ನಿರ್ಣಾಯಕ ಘಟನೆಯೊಂದಕ್ಕೆ" ಪ್ರತಿಕ್ರಿಯಿಸುತ್ತಿದೆ ಎಂದೂ ಅದು ತಿಳಿಸಿದೆ.ಎಫ್ಬಿಐ ಮತ್ತು ಬ್ಯೂರೋ ಆಫ್ ಆಲ್ಕೋಹಾಲ್, ತಂಬಾಕು, ಬಂದೂಕುಗಳು ಮತ್ತು ಸ್ಫೋಟಕ ವಸ್ತುಗಳ ಘಟಕಗಳು (ಬಿಎಟಿಎಫ್) ಗುಂಡಿನ ದಾಳಿ ವೇಳೆ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳಿಗೆ ಸಹಾಯ ಮಾಡುವುದಾಗಿ ಪ್ರತಿಕ್ರಿಯಿಸಿವೆ.