ಟ್ರಯಲ್ಸ್ ನಡೆಸದಿರಲು ಶೂಟಿಂಗ್ ಸಂಸ್ಥೆ ನಿರ್ಧಾರ

ಪುಣೆ, ಏ 18,ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷಕ್ಕೆ ಮುಂದೂಡಿಕೆಯಾಗಿದೆ. ಆದರೆ ಒಲಿಂಪಿಕ್ಸ್ ಗೆ ದೇಶದ ಶೂಟರ್ ಗಳನ್ನು ಪ್ರಕಟಿಸಲು ಮತ್ತಷ್ಟು ಸಮಯ ಕಾಯದಿರಲು ಭಾರತೀಯ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್ಆರ್ ಎಐ) ತೀರ್ಮಾನಿಸಿದೆ.ಕಳೆದ ಫೆಬ್ರವರಿವರೆಗೆ ನಡೆದ ಆಯ್ಕೆ ಟ್ರಯಲ್ಸ್ ಗಳ ಆಧಾರದ ಮೇರೆಗೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಎನ್ ಆರ್ ಎಐ ಅಧ್ಯಕ್ಷ ರಣಿಂದರ್ ಸಿಂಗ್ ಹೇಳಿದ್ದಾರೆ. ಜತೆಗೆ ಇಡೀ ಒಂದು ವರ್ಷ ಕಾಲವಕಾಶವಿದ್ದರೂ ಯಾವುದೇ ಆಯ್ಕೆ ಟ್ರಯಲ್ಸ್ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಮತ್ತಷ್ಟು ಆಯ್ಕೆ ಟ್ರಯಲ್ಸ್ ನಡೆಸುವುದರಿಂದ ಈಗಿರುವುದಕ್ಕಿಂತ  ಉತ್ತಮವಾದ ಏನನ್ನೂ ಪಡೆಯಲಾಗದು ಎಂದು  ನಾನು ಭಾವಿಸಿದ್ದೇನೆ. ನಾವು ಜಾರಿಗೆ ತಂದ ನಿಯಮಗಳನ್ನು ಗೌರವಿಸುತ್ತೇವೆ ಮತ್ತು ಬದ್ಧರಾಗಿರುತ್ತೇವೆ, ಎಂದು ರಣಿಂದರ್ ಸಿಂಗ್ ಹೇಳಿದ್ದಾರೆ.ಪ್ರತಿ ವಿಭಾಗದಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿರುವವರು ತಂಡದಲ್ಲಿ ಸ್ಥಾನ ಪಡೆಯಲು ಲೆಕ್ಕ ಹಾಕುತ್ತಾರೆ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಕೆಲವು ಅವಕಾಶಗಳಿರುತ್ತವೆ ಎಂದು ಅವರು ಹೇಳಿದ್ದಾರೆ.