ಬೆಂಗಳೂರು, ಸೆ 10 ಕನ್ನಡ ಚಲನಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ ಎಲ್ಲರನ್ನೂ ಪ್ರೋತ್ಸಾಹಿಸುತ್ತಾ ಮುಂದುವರಿಯಬೇಕು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೂವತ್ಮೂರು ವರ್ಷಗಳಿಂದ ಚಿತ್ರರಂಗವನ್ನು ನೋಡುತ್ತಿದ್ದೇನೆ ಪತ್ರಿಕೋದ್ಯಮ ಹಾಗೂ ಚಿತ್ರೋದ್ಯಮದ ನಡುವೆ ನಂಟಿದೆ ಸ್ಯಾಂಡಲ್ ವುಡ್ ನಲ್ಲಿ ಸುದೀಪ್, ಅಪ್ಪು, ದರ್ಶನ್, ಶಿವರಾಜ್ ಕುಮಾರ್ ಮತ್ತಿತರರು ಮಾತ್ರ ಹೀರೋಗಳಲ್ಲ ಸಾಕಷ್ಟು ಜನ ಹೀರೋಗಳಿದ್ದಾರೆ ಭೇದ, ಭಾವ ತೋರದೆ ಎಲ್ಲರೊಡನೆ ಮುನ್ನಡೆಯಬೇಕು ಒಂದು ವೇಳೆ ನಾನೊಬ್ಬನೇ ಎಂದು ಯಾರಾದರೂ ಅಂದುಕೊಂಡಲ್ಲಿ ಅಂತಹವರು ನೆಲ ಕಚ್ಚುವುದು ಖಚಿತ ಎಂದರು
ಉತ್ತಮ ಚಿತ್ರಗಳಿಗೆ ಅನೇಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಇನ್ನು ಮುಂದೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿಯೂ ಲಭ್ಯವಾಗುತ್ತದೆ ಎಂಬ ವಿಷಯ ಸ್ವಾಗತಾರ್ಹ ಪ್ರಶಸ್ತಿಗಳಲ್ಲಿಯೂ ಚಿಕ್ಕದು, ದೊಡ್ಡದು ಎಂಬ ತಾರತಮ್ಯ ಮಾಡುವ ಅಗತ್ಯವಿಲ್ಲ ಪ್ರತಿಯೊಂದೂ ಪ್ರೋತ್ಸಾಹ ನೀಡುವಂತಹುದು ಎಂದು ಹೇಳಿದರು
ಚಲನಚಿತ್ರಗಳ ಬಗ್ಗೆ ವಿಮರ್ಶಿ ಅತ್ಯಗತ್ಯ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಅಭ್ಯುದಯಕ್ಕೆ ನನ್ನಿಂದಾದ ಎಲ್ಲ ಸಹಾಯ ನೀಡಲು ಸಿದ್ಧ ಎಂದ ಶಿವರಾಜ್ ಕುಮಾರ್, ರವಿಚಂದ್ರನ್, ಶ್ರೀನಾಥ್, ಅನಂತನಾಗ್ ಅವರಂತಹ ನನಗಿಂತಲೂ ಹಿರಿಯ ನಟರಿದ್ದು, ಈಗಲೂ ಸಕ್ರಿಯರಾಗಿದ್ದಾರೆ ಅವರೆಲ್ಲರೂ ಚಿತ್ರರಂಗದ ಆಧಾರ ಸ್ತಂಭಗಳಾಗಿದ್ದು, ನಾನು ಕೇವಲ ಇಟ್ಟಿಗೆಯಂತಿರಲು ಇಷ್ಟಪಡುತ್ತೇನೆ ಎಂದರು
ರಂಗಭೂಮಿ ಸೇರಿದಂತೆ ಚಿತ್ರರಂಗದ ಎಲ್ಲರೂ ಒಂದು ಕುಟುಂಬದಂತೆ ಎಂದು ಅಪ್ಪಾಜಿ ಡಾ ರಾಜ್ ಕುಮಾರ್ ಹೇಳುತ್ತಿದ್ದರು ಆದಾಗ್ಯೂ ಮಾಡುವ ಕೆಲಸಗಳನ್ನು ತಿದ್ದುವ, ವಿಮರ್ಶಿ ಮಾಡುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತಿದೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಗೆ ಚಿತ್ರಗಳನ್ನು ಆಯ್ಕೆ ಮಾಡುವಾಗ ಎಲ್ಲ ಪತ್ರಕರ್ತರ ವಿಮರ್ಶಿ ಒಂದೇ ರೀತಿಯಾಗಿರಲಿ ಎಂದು ಹೇಳುವ ಮೂಲಕ ಅಕಾಡೆಮಿಗೆ ಶುಭ ಹಾರೈಸಿದರು.