ಶಿವಪ್ರತಾಪ ದಿನಾಚರಣೆ ಆಚರಣೆ

ಶಿವಪ್ರತಾಪ ದಿನಾಚರಣೆ ಆಚರಣೆ Shivapratap Day Celebration

ವಿಜಯಪುರ 11:  ಸ್ವರಾಜ್ಯ ಸೇನಾ ವಿಜಯಪುರ ವತಿಯಿಂದ ಇಂದು ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಪ್ರತಾಪ ದಿನ (ಅಫ್ಜಲ್ ಖಾನ ಸಂಹಾರ ದಿನ) ಆಚರಿಸಲಾಯಿತು. ಇದೇ ಸಂರ್ದಭದಲ್ಲಿ ದಿಲ್ಲಿಯಲ್ಲಿ ಬಾಂಬ್ ಸ್ಟೋಟ್‌ದಲ್ಲಿ ಹುತಾತ್ಮರಾದವರಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ಕಿರಣ ಕಾಳೆ ಮಾತನಾಡಿ, ದಿ. 10-11-1659 ರಂದು ಪ್ರತಾಪ ಗಡದಲ್ಲಿ ನಡೆದಂತ ಯುದ್ಧ ಇದು ದೇಶದ ಇತಿಹಾಸವನ್ನೆ ಬದಲಾವಣೆ ಮಾಡಿದ ಘಟನೆಯಾಗಿದೆ. ಶಿವಾಜಿ ಮಹಾರಾಜ ಮತ್ತು ಅಫ್ಜಲ್ ಖಾನ್ ಭೇಟಿ ಪ್ರಸಂಗ ಏನಾಗಬಹುದು ಎನ್ನುವುದನ್ನು ದಿಲ್ಲಿಯ ಸುಲ್ತಾನ ಓರಂಗಜೇಬ್, ಇರಾನ ದೇಶದ ಸುಲ್ತಾನ್ ಶಹಾ ಅಬ್ಬಾಸ್ , ಇಂಗ್ಲೇಡಿನ್ ಬ್ರಿಟಿಷರು, ಪೋರ್ಚುಗೀಸರು ಹಾಗೂ ಅನೇಕರು ಕುತೂಹಲದಿಂದ ಕಾಯುತ್ತ್ತಿದ್ದರು. ಬಹುಶಃ ಶಿವಾಜಿ ಮಹಾರಾಜರ ಅಂತ್ಯವಾಗಬಹುದು ಎಂದು ಅಂದುಕೊಂಡಿದ್ದರು. ಆದರೆ ಭವಾನಿ ದೇವಿಯ ಆಶೀರ್ವಾದದಿಂದ ತನ್ನ ಶೌರ್ಯ ಪರಾಕ್ರಮ ಹಾಗೂ ಚಾಣಾಕ್ಷ ನೀತಿಯನ್ನು ಉಪಯೋಗಿಸಿ ಶಿವಾಜಿ ಮಹಾರಾಜರು ಮತ್ತು ಅವರ ಸೈನಿಕರು ದೇಶದ ಇತಿಹಾಸ ಬದಲಾವಣೆ ಮಾಡಲು ಕಾರಣೀಕರ್ತರಾದರು. ಸನಾತನ ಹಿಂದೂ ಸಂಸ್ಕೃತಿ ಉಳಿವಿನ ಅತ್ಯಂತ ಮಹತ್ವದ ಘಟನೆ ಪ್ರತಾಪ ಗಡದಲ್ಲಿ ನಡೆದ ರಣ ಸಂಗ್ರಾಮ ಇದಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮುಖಂಡರಾದ ಮಾರುತಿ ತರಸೆ , ಸೋಮು ರಣದೇವಿ, ಗಣೇಶ ಗರುಡಕರ, ಸ್ವರೂಪ ಸಪ್ತಾಳೆ, ಜ್ಞಾನೇಶ್ವರ ಸಿಂಧೆ, ಶಂಕರ ತಾಲಬಾವಡಿ, ವಿಠ್ಠಲ ಭೋಸಲೆ, ಅನೀಲ ನನ್ನವರೆ, ರಾಮಚಂದ್ರ ಚವ್ಹಾಣ, ಆನಂದ ಗರುಡಕರ, ಆದಿತ್ಯ ಗರಡ, ನಿಲೇಶ ಗರುಡಕರ, ಪವನ ಅಲಗೆ, ಬಸವರಾಜ ನಾಶಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.