ಅದ್ದೂರಿಯಾಗಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ: ಬೃಹತ್ ಶೋಭಾಯಾತ್ರೆ

ಅದ್ದೂರಿಯಾಗಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ: ಬೃಹತ್ ಶೋಭಾಯಾತ್ರೆ  Shivaji Maharaj's birth anniversary celebrated with grandeur: Huge procession


ತಾಳಿಕೋಟಿ 20: ಕ್ಷತ್ರೀಯ ಮರಾಠಾ ಸಮಾಜ, ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ದಿ ಸಂಘ, ಜೀಜಾಮಾತಾ ಮಹಿಳಾ ಮಂಡಳದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 396 ನೇ ಜಯಂತ್ಯೋತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಉತ್ಸವ ಮೂರ್ತಿ ಭವ್ಯ ಶೋಭಾ ಯಾತ್ರೆಯು ಗುರುವಾರರಂದು ವಿಜೃಂಭಣೆಯಿಂದ ಜರುಗಿತು. 

ಮದ್ಯಾಹ್ನ 4 ಗಂಟೆಗೆ ಮಹಾರಾಣಾ ಪ್ರತಾಪಸಿಂಹ್ ವೃತ್ತದಲ್ಲಿ ಶಿವಾಜಿ ಮಹಾರಾಜರ ಮಹಾ ಮೂರ್ತಿಗೆ ಪ್ರತೀಕ ಕುಲಕರ್ಣಿ ಅವರು ವಿಶೇಷ ಪೂಜೆ ಸಲ್ಲಿಸಿದರಲ್ಲದೇ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶಿವಾಜಿ ಮಹಾರಾಜರ ಉತ್ಸವ ಮಹಾ ಮೂರ್ತಿಯ ಮೆರವಣಿಗೆಯು ವಿಠ್ಠಲ ಮಂದಿರ ರಸ್ತೆ, ಬಾಲಾಜಿ ಮಂದಿರ ರಸ್ತೆ, ಕತ್ರಿ ಭಜಾರ ಮಾರ್ಗವಾಗಿ ರಾಜವಾಡೆಯಲ್ಲಿರುವ ಶಿವ ಭವಾನಿ ಮಂದಿರಕ್ಕೆ ತಲುಪಿತು.  

ಮೆರವಣಿಗೆಯಲ್ಲಿ ವಿವಿಧ ವಾದ್ಯವೈಭವಗಳು ಮತ್ತು ಶಿವಾಜಿ ಮಹಾರಾಜ ಗೀತೆಗಳಿಗೆ ತಕ್ಕಂತೆ ಸಾವಿರಾರು ಜನ ಯುವ ಸಮೂಹ ನೃತ್ಯಗೈದರಲ್ಲದೇ ಮೇರವಣಿಗೆಯ ಯುದ್ದಕ್ಕೂ ಜೈ ಶಿವಾಜಿ, ಜೈಭವಾನಿ ಘೋಷವ್ಯಾಕ್ಯಗಳು ಮೊಳಗಿದವು. ಮೆರವಣಿಗೆಯು ಮಂದಿರಕ್ಕೆ ತಲುಪಿದ ನಂತರ ಶಿವಾಜಿ ಮಹಾರಾಜರ ತೋಟ್ಟಿಲು ಕಾರ್ಯಕ್ರಮ ಮತ್ತು ಶಿವಭವಾನಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಜಯಂತ್ಯೋತ್ಸವ ಅಂಗವಾಗಿ ಪಟ್ಟಣದ ಶಿವಾಜಿ ಮಹರಾಜರ ವೃತ್ತ ಒಳಗೊಂಡಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಪರಪರಿ ಮತ್ತು ಕೇಸರಿ ದ್ವಜಗಳಿಂದ ಅಲಂಕೃತಗೊಳಿಸಿದ್ದು ಹಬ್ಬದ ಸಂಭ್ರಮದಂತೆ ರೂಪಗೊಂಡಿತ್ತು. ಮೆ 

ರವಣಿಗೆಯ ನೇತೃತ್ವವನ್ನು ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ, ಕಾರ್ಯದರ್ಶಿ ಕಾಶಿರಾಯ ಮೋಹಿತೆ, ಬಸವಂತ್ರಾಯ ಸುಭೇದಾರ, ಜಿ.ಟಿ.ಘೋರೆ​‍್ಡ, ಸಂಬಾಜಿ ಡಿಸಲೆ, ಗುಂಡುರಾವ್ ಜಗತಾಪ, ಶಶಿಧರ ಡಿಸಲೆ, ಪುಂಡಲಿಕ ಮೋಹಿತೆ, ಸಂಜೀವ ಕದಂ, ಸುಭಾಸ ಘಾವಡೆ, ನಾರಾಯಣ ಸುಭೇದಾರ, ಪಾಂಡು ಕದಂ, ವಿಠ್ಠಲ ಘಾಯಕವಾಡ, ಶ್ರೀನಿವಾಸ ಶೇವಳಕರ, ವಿಠ್ಠಲ ಮೋಹಿತೆ, ಪ್ರವೀಣ್ ಘೋರೆ​‍್ಡ, ರಾಘವೇಂದ್ರ ಮಾನೆ, ಲಕ್ಷ್ಮಣ ಶೇವಳಕರ, ಪರಶುರಾಮ ಶೇವಳಕರ, ರಾಮು ಜಗತಾಪ, ಶಿವಾಜಿ ಶೇವಳಕರ, ಅನೀಲ ಮಾನೆ, ಸುಭಾಸ ಕಾಮಟೆ, ಅಂಬಾಜಿ ಜಾಧವ, ಶಿವಾಜಿ ನವಲೆ, ತಾನಾಜಿ ಭೋಸಲೆ,

ಸಂತೋಷ ಪಂದೆ, ಸಂತೋಷ ಡಿಸಲೆ, ಮಾರುತಿ ಕಾಸೇದ, ಅಂಬಾಜಿ ಘೋರೆ​‍್ಡ, ನವೀನ್ ಡಿಸಲೆ, ಪ್ರಕಾಶ ಹಜೇರಿ, ಅಮೀತ ಮನಗೂಳಿ, ಅರುಣ ದಡೇದ, ಮಾನಸಿಂಗ್ ಕೊಕಟನೂರ, ಶಿರಸಕುಮಾರ ಹಜೇರಿ, ಹರಿಸಿಂಗ್ ಮೂಲಿಮನಿ, ರತನಸಿಂಗ್ ಕೊಕಟನೂರ, ಜೈಸಿಂಗ್ ಮೂಲಿಮನಿ, ಜನಾರ್ದನ ಶಿಂಧೆ, ರಾಘು ಹಜೇರಿ, ಮೋಹನ ಶೇವಳಕರ, ಭರತಸಿಂಗ್ ಹಜೇರಿ, ಸುರೇಶ ಹಜೇರಿ, ಅಲ್ಲದೇ ರಜಪೂತ ಸಮಾಜ ಬಾಂದವರು, ಸೋಮವಂಶ ಆರ್ಯಕ್ಷತ್ರೀಯ ಸಮಾಜ, ಭಾವಸಾರ ಕ್ಷತ್ರೀಯ ಸಮಾಜ, ಒಳಗೊಂಡು ವಿವಿಧ ಹಿಂದೂಪರ ಸಂಘಟನೆಗಳ, ಹಾಗೂ ವಿವಿಧ ಸಮಾಜದ ಮುಖಂಡರುಗಳು ವಹಿಸಿದ್ದರು.