ಮಾ.23ರಂದು ಶಿವದಾಸಿಮಯ್ಯನವರ ಜಯಂತ್ಯೋತ್ಸವ

Shivadasimayya's Jayanti celebration on March 23rd

ಮುಧೋಳ 18: ತಾಲೂಕಿನ ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಆಶ್ರಯದಲ್ಲಿ ಕುಲಗುರು ಜಗದಾಚಾರ್ಯ ಶ್ರೀ ಶಿವದಾಸಿಮಯ್ಯನವರ ಜಯಂತ್ಯೋತ್ಸವ ಹಾಗೂ ಶಿವದಾಸಿಮಯ್ಯ ಪತ್ತಿನ ಸೌಹಾರ್ಧ ಸಹಕಾರಿ ನಿ., ಇದರ ವಾರ್ಷಿಕೋತ್ಸವ ಸಮಾರಂಭ ಮಾ.23 ರಂದು ಸಂಜೆ 5 ಗಂಟೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಮುನವಳ್ಳಿ ತಿಳಿಸಿದ್ದಾರೆ. 

ಕುಂದರಗಿ ಶ್ರೀ ಕ್ಷೇತ್ರ ಸುರಗಿರಿ ಬೆಟ್ಟದ ಸುರಗಿರಿ ಶಕ್ತಿ ಪೀಠದ ಧರ್ಮಾಧಿಕಾರಿ ಪ.ಪೂ.ಲಕ್ಷ-್ಮಣ ಶರಣರು ದಿವ್ಯ ಸಾನಿಧ್ಯ ವಹಿಸುವರು, ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪ್ರಕಾಶ ಈ. ಗಂಗಣ್ಣವರ ಅಧ್ಯಕ್ಷತೆವಹಿಸುವರು, ಶಸ್ತ್ರ ಚಿಕಿತ್ಸಕ ಹಾಗೂ ಸಾಹಿತಿ ಡಾ.ಶಿವಾನಂದ ಮ. ಕುಬಸದ ಕಾರ್ಯಕ್ರಮ ಉದ್ಘಾಟಿಸುವರು, ಹುನ್ನೂರ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಶಂಕರ ಲ. ಅರಬಳ್ಳಿ ಮುಖ್ಯ ಅತಿಥಿ ಸ್ಥಾನವಹಿಸುವರು, ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷೆ ಕಮಲಾ ಶಿ. ಕುಬಸದ, ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಆರ್‌. ಬದಾಮಿ ಹಾಗೂ ಉಪಸ್ಥಿತರಿರುವರು.