ಶಿವಶರಣ ಮೇದಾರ ಕೆತ್ತಯ್ಯ ಜಯಂತಿ ಆಚರಣೆ

ಶಿವಶರಣ ಮೇದಾರ ಕೆತ್ತಯ್ಯ ಜಯಂತಿ ಆಚರಣೆ Shiva Sharan Medara Kettaiah Jayanti Celebration

ಯಮಕನಮರಡಿ, 05 : 12 ನೇ ಶತಮಾನದಲ್ಲಿ ಆಗಿ ಹೋದ ಶರಣರಲ್ಲಿ ಶ್ರೇಷ್ಠ ಶರಣರಾದ ಮೇದಾರ ಕೆತ್ತಯ್ಯ ಶರಣರ ಜಯಂತಿಯನ್ನು ದಿ.5 ರಂದು ಸ್ಥಳೀಯ ಮೇದಾರ ಸಮುದಾಯದವರು ಆಚರಿಸಿದರು. ಕಾರ್ಯಕ್ರಮದ ಧಿವ್‌ಯ ಸಾನಿಧ್ಯವನ್ನು ಸ್ಥಳೀಯ ಶೂನ್ಯ ಸಂಪಾದನಾ ಮಠದ ಪೂಜ್ಯರಾದ ಸಿದ್ದಬಸವ ದೇವರು ವಹಿಸಿ ಮಾತನಾಡುತ್ತಾ 12 ನೇ ಶತಮಾನದಲ್ಲಿ ಆಗಿಹೋದ ಶಿವಶರಣ ಮೇದಾರ ಕೆತ್ತಯ್ಯನು ತನ್ನ ಬೀದಿರಿನ ಕಾಯಕದಲ್ಲಿ ತೋಡಗಿ ಅವುಗಳನ್ನು ಪೇಟೆಗೆ ಹೋಗಿ ಬುಟ್ಟಿ ಮರ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಪ್ರತಿನಿತ್ಯವು ಶರಣರಿಗೆ ದಾಸೋಹ ಮಾಡುವ ಸಂಪ್ರದಾಯ ರೂಡಿಸಿಕೊಂಡವರಾಗಿದ್ದರು ಅಂತಹವರ ಸ್ಮರಣೆಯನ್ನು ಮಾಡುತ್ತಿರುವ ಯಮಕನಮರಡಿ ಗ್ರಾಮದ ಮೇದಾರ ಸಮುದಾಯದ ಕುಲಬಾಂದವರು ಬಕ್ತಿ ಪೂರ್ವಕವಾಗಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. 

ಇಂದಿನ ದಿನಮಾನಗಳಲ್ಲಿ ಜನರಲ್ಲಿ ಆಚಾರ ವಿಚಾರ ಸಂಸ್ಕೃತಿ ಇತ್ಯಾದಿಗಳು ಮರೆಯಾಗುತ್ತಿವೆ ಕಾರಣ ಶರಣರ ಚಿಂತನ ಮಂಥನ ಮಾಡುವುದು ಅತೀ ಮುಖ್ಯವಾದದ್ದಾಗಿದೆ ಮುಂದಿನ ಪಿಳಿಗೆಗೆ ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗೆ ಶಿವಶರಣ ಸಂಪ್ರದಾಯವನ್ನು ರೂಡಿಸುವಲ್ಲಿ ಮುಂದಾಗಬೇಕು ಕೊರಳಲ್ಲಿ ರುದ್ರಾಕ್ಷಿ ಧರಿಸಿದವರಾಗಿರಬೇಕು ನಿಜಕಗಕೂ ತಾವುಗಳು ಬಸವಣ್ಣನವರ ಸಮಕಾಲಿನಲ್ಲಿ ಶರಣರಾಗಿ ಅಪಾರ ಪವಾಡಗಳನ್ನು ಮಾಡಿದ ಮೇದಾರ ಕೆತ್ತಯ್ಯ ಅವರ ಆಚಾರ ವಿಚಾರಗಳನ್ನು ತಾವುಗಳು ಅಳವಡಿಸಿಕೊಂಡು ತಮ್ಮ ಸಮುದಾಯವನ್ನು ಉಜ್ವಲಗೋಳಿಸಬೇಕು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಂಘದ ಮೂಲಕ ತಮ್ಮ ಕಸಬುಗಳ ಮೂಲಕ ವಿವಿಧ ವಸ್ತುಗಳನ್ನು ತಯ್ಯಾರಿಸಿ ಮಾರಾಟ ಮಾಡುವ ಕೆಂದ್ರಗಳನ್ನು ಸ್ಥಾಪಿಸಬೇಕು ಅಲ್ಲದೆ ಈ ಗ್ರಾಮದಲ್ಲಿ ಮೇದಾರ ಕೆತ್ತಯ್ಯಾ ಸ್ಮಾರಕ ಕಟ್ಟುವಲ್ಲಿ ಯುವಕರು ಮುಂದಾಗಬೆಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾ ಪಂ ಅದ್ಯಕ್ಷ ಆಸ್ಮಾ ಪಣಿಬಂದ ಮತ್ತು ಮೇದಾರ ಸಮುದಾಯದ ಮುಖಂಡರು ಊರಿನ ಪ್ರಮುಖರು ಸಮಾಜದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.