ಶಿವ ಶರಣ ಕುಂಬಾರ ಗುಂಡಯ್ಯ ಜಯಂತಿ ಆಚರಣೆ

ಶಿವ ಶರಣ ಕುಂಬಾರ ಗುಂಡಯ್ಯ ಜಯಂತಿ ಆಚರಣೆ  Shiva Sharan Kumbar Gundaya Jayanti Celebration

ಯಮಕನಮರಡಿ, 26 : ಸಮೀಪದ ಹೆಬ್ಬಾಳ ಗ್ರಾಮದ ಬಸವ ಭವನದಲ್ಲಿ ಶಿವ ಶರಣ ಕುಂಬಾರ ಗುಂಡಯ್ಯ ಜಯಂತಿ ಹಾಗೂ ಮಾಸಿಕ ಶಿವಾನುಭವ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮದ  ದಿವ್ಯ ಸಾನಿಧ್ಯವನ್ನು  ಜಗದ್ಗುರು ಸಿದ್ದ ಬಸವೇಶ್ವರ ಶೂನ್ಯ ಸಂಪಾದನ ಹುಣಸಿಕೊಳ್ಳಮಠದ ಪೂಜ್ಯರಾದ ಶ್ರೀ ಸಿದ್ದ ಬಸವ ದೇವರು ವಹಿಸಿ  ಶರಣರ ವಚನಗಳು ಬದುಕಿನ ದಾರೀದೀಪಗಳಾಗಿವೆ. 12ನೇ ಶತಮಾನದ ಶಿವ ಶರಣರು ಕಾಯಕಕ್ಕೆ ಅತಿ ಹೆಚ್ಚು ಮಹತ್ವ ಕೊಟ್ಟವರು, ಕುಂಬಾರ ಗುಂಡಯ್ಯ ಶರಣರು ಕೂಡ ಬೇಡೆನಗೆ ಕೈಲಾಸ ಮಾಡುವುದು ಕಾಯಕವೆಂದು ಕಾಯಕದಲ್ಲಿ ಕೈಲಾಸ ಕಂಡವರು ಎಂದು ಅನುಭಾವ ನೀಡಿದರು. ಕಾರ್ಯಕ್ರಮದ  ನೇತೃತ್ವವನ್ನು ಯೋಗೀನಾಥ್ ಶರಣರು ವಹಿಸಿದ್ದರು, ಅಕ್ಕನ ಬಳಗದ ಶರಣೆ ಸವಿತಾ ಚಿಲಮಿ,ಕೆಂಪವ್ವಾ ಮುನ್ನೊಳಿಯವರು  ಪ್ರಾರ್ಥನೆ ನೆರವೇರಿಸಿದರು, ಶರಣ್ ಮಹೇಶ್ ಕಾಡಗಿ ್ಘ ಶರಣೆ ಸಂಗೀತಾ ಕುಂಬಾರ ವಚನ ಗಾಯನ ಮಾಡಿದರು. ಕುಂಬಾರ ಗುಂಡಯ್ಯ ಮಹಿಳಾ ಸಂಘದವರು ದಾಸೋಹ ಸೇವೆ ಸಲ್ಲಿಸಿದರು.   

ಈ ಸಂಧರ್ಭದಲ್ಲಿ   ಅಕ್ಕನ ಬಳಗದ ವಿದ್ಯಾ ಮಾಳಗಿ, ಅಶ್ವಿನಿ ಚಿಲಮಿ, ಶೋಭಾ ಜರಳಿ, ಶೈಲಾ ಖೋತ್ ಸುರೇಶ ಕಂಕಣವಾಡಿ, ಶಂಕರ್ ಶೆಟ್ಟೆನ್ನವರ್, ಪರ​‍್ಪ ಗುಂಡಿ, ಸಂತೋಷ್ ನಾವಲಗೇರ, ಮಹೇಶ್ ಕುಂಬಾರ್, ಬಸವರಾಜ್ ಮಾಳಗಿ, ಅಶೋಕ ನಾರಾಯಣಕರ, ದಾಸೋಹ ಬಳಗದ ಶರಣರು ಹಾಗೂ ಸಂಕೇಶ್ವರ್ ರಾಷ್ಟ್ರಿಯ ಬಸವದಳದ  ಹಿರಿಯರಾದ ಶಂಕರಗೌಡ ದೇಸಾಯಿ, ಮಹದೇವ್ ಕುಂಬಾರ,ಸೇರಿದಂತೆ ಗ್ರಾಮದ ನೂರಾರು ಜನ ಶರಣ ಶರಣೆಯರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು  ಶ್ರೀನಿಧಿ ತೋಳಿ ನಿರೂಪಿಸಿ ವಂದಿಸಿದರು.