ಬಿಜೆಪಿ ನಾಯಕತ್ವದ ನಿರ್ಧಾರವನ್ನು ಶಿವಸೇನಾ ಬೆಂಬಲಿಸುತ್ತದೆ: ಏಕನಾಥ ಶಿಂದೆ

ಏಕನಾಥ ಶಿಂದೆ

ಮುಂಬೈ 27: ಮುಂದಿನ ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಜೆಪಿ ನಾಯಕತ್ವದ ನಿರ್ಧಾರವನ್ನು ಶಿವಸೇನಾ ಸಂಪೂರ್ಣವಾಗಿ  ಬೆಂಬಲಿಸುತ್ತದೆ. ಅಲ್ಲದೆ ಸಿಎಂ ಆಯ್ಕೆ ವಿಚಾರದಲ್ಲಿ ಅಡ್ಡಿಯಾಗುವುದಿಲ್ಲ ಎಂದು ಏಕನಾಥ ಶಿಂದೆ ಬುಧವಾರ  ಸ್ಪಷ್ಟಪಡಿಸಿದ್ದಾರೆ.

ಠಾಣೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ ಶಿಂದೆ, 'ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅಲ್ಲದೆ ಮೋದಿ, ಶಾ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂಬ ಭರವಸೆ ಕೊಟ್ಟಿದ್ದೇನೆ' ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 'ಮಹಾಯುತಿ' ಮೈತ್ರಿ ಭರ್ಜರಿ ಜಯ ಗಳಿಸಿದರೂ ಎರಡನೇ ಅವಧಿಗೆ ಎಂದು ವರದಿಯಾಗಿತ್ತು.

ಸಿಎಂ ಸ್ಥಾನ ಸಿಗದಿರುವುದಕ್ಕೆ ಏಕನಾಥ ಶಿಂದೆ ನಿರಾಶೆಗೊಂಡಿದ್ದಾರೆ ಎಂಬ ವದಂತಿಗಳನ್ನು ತಳ್ಳಿ ಹಾಕಿರುವ ಶಿಂದೆ, 'ಯಾರೂ ಅಸಮಾಧಾನಗೊಂಡಿಲ್ಲ. ನಾವೆಲ್ಲರೂ ಮಹಾಯುತಿ ಮೈತ್ರಿಕೂಟದ ಭಾಗವಾಗಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ' ಎಂದು ತಿಳಿಸಿದ್ದಾರೆ.