ಮುಂಬೈ, 25 ದಿನದಿಂದ ದಿನಕ್ಕೆ ಬದಲಾಗುತ್ತಿರುವ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಇಂದು ಮತ್ತೊಂದು ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿದೆ. ಎನ್ ಸಿ ಪಿ ಗೆ ಎರಡೂವರೆ ವರ್ಷ ಗಳ ಕಾಲ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಾನು ಸಿದ್ಧ ಎಂದು ಹೊಸ ಮಿತ್ರ ಪಕ್ಷ ಶಿವಸೇನಾ ಸಿದ್ದವಾಗಿದೆ ಎಂದು ವರದಿಯಾಗಿದೆ. ಯಾರು ಊಹೆಮಾಡದ ರೀತಿ ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಸರಿ ದಾರಿಗೆ ತರಲು, ಬಿಜೆಪಿ ಹಿಡಿತದಿಂದ ಅವರನ್ನು ಹೊರತರಲು ಶಿವಸೇನೆ ಈ ಪ್ರಸ್ತಾಪ ಮುಂದಿಟ್ಟಿದೆ ಎನ್ನಲಾಗಿದೆ. ಅಜಿತ್ ಪವಾರ್ ಅವರಿಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆಯನ್ನು ನೀಡುವ ಮೂಲಕ ಅವರನ್ನು ಸಂತೃಪ್ತಿ ಪಡಿಸಲು ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಕೈಗೊಂಡಿರುವ ನಿರ್ಣಯವನ್ನು ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್ ಮತ್ತು ಎನ್ಸಿಪಿ ಸುಪ್ರೀಂ ಕೋಟರ್್ ಮೊರೆ ಹೋಗಿರುವ ನಡುವೆಯೇ ಮಿತ್ರ ಪಕ್ಷ ಶಿವಸೇನೆ ಈ ನಿರ್ಣಯಕ್ಕೆ ಬಂದಿರುವುದು ಗಮನಾರ್ಹ.