ಪಿಎಸ್‌ಐ ಈರಣ್ಣ ರಿತ್ತಿ ಅಮಾನತಿಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಕರೆಯಲಾದ ಶಿರಹಟ್ಟಿ ಬಂದ್ ಯಶಸ್ವಿ

ಪಿಎಸ್‌ಐ ಈರಣ್ಣ ರಿತ್ತಿ ಅಮಾನತಿಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಕರೆಯಲಾದ ಶಿರಹಟ್ಟಿ ಬಂದ್ ಯಶಸ್ವಿ Shirahatti bandh called by various organizations demanding suspension of PSI Iranna Rithi is a succe

  ಶಿರಹಟ್ಟಿ 12: ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳೇ ಶಿರಹಟ್ಟಿ ತಾಲೂಕಿನಲ್ಲಿ ಮುಗ್ಧ ರೈತರು ಮತ್ತು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಹಣ ವಸೂಲಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಭ್ರಷ್ಟ ಮತ್ತು ರೈತ ವಿರೋಧಿ ಅಧಿಕಾರಿಗಳನ್ನು ಸರ್ಕಾರ ತಕ್ಷಣ ಅಮಾನತುಗೊಳಿಸಬೇಕು," ಎಂದು ವಿವಿಧ ಹಿಂದೂ ಸಂಘಟನೆಗಳ ಒಕ್ಕೂಟ ರಾಜ್ಯ ಸಂಚಾಲಕರ ರಾಜು ಖಾನಪ್ಪನವರ ಹೇಳಿದರು. 

ಶುಕ್ರವಾರ ಪಟ್ಟಣದ ಪೇಟೆ ಹನಮಂತ ದೇವಾಲಯ ದಿಂದ ಪ್ರಮುಖ ರಸ್ತೆಗಳಲ್ಲಿ ಜಾಥದ ಮೂಲಕ ಪೊಲೀಸ್ ಉಪನೀರೀಕ್ಷಕ (ಪಿಎಸ್‌ಐ) ಈರಣ್ಣ ರಿತ್ತಿ ಅವರು ರೈತರ ಮೇಲೆ ನಡೆಸಿದ ದೌರ್ಜನ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ವಿವಿಧ ಹಿಂದೂ ಮತ್ತು ರೈತ ಸಂಘಟನೆಗಳು ತೀವ್ರ ಸರಣಿ ಹೋರಾಟ ಆರಂಭಿಸಿದ್ದು, ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಶಿರಹಟ್ಟಿ ಬಂದ್‌ಗೆ ಕರೆ ನೀಡಿ ತಹಸೀಲ್ದಾರ ಎನ್ ಎಚ್ ಪೂಜಾರಿ  ಅವರಿಗೆ  ಮನವಿ ನೀಡಿ ಮಾತನಾಡಿದ ಅವರು. ಶಿರಹಟ್ಟಿ ಬಂದ್ ಕಳೆದ 15 ದಿನಗಳಿಂದ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಯುತ್ತಿದ್ದರೂ, ಸರ್ಕಾರ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಬಂದ್ ಆಚರಿಸಲಾಯಿತು ಎಂದು ಹೇಳಿದರು. 

ಪಿಎಸ್‌ಐ ಈರಣ್ಣ ರಿತ್ತಿ ವಿರುದ್ಧದ ಪ್ರತಿಭಟನೆಗೆ ದೇವಿಹಾಳ ಗ್ರಾಮದ ಮುಗ್ಧ ಲಂಬಾಣಿ ರೈತ ಸೋಮಪ್ಪ ಲಮಾಣಿ ಅವರ ಮೇಲಿನ ದೌರ್ಜನ್ಯವೇ ಮುಖ್ಯ ಕಾರಣವಾಗಿದೆ. ಜಮೀನಿನ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ರೈತನ ಮೇಲೆ 'ಇಸ್ಪೀಟಾಟ'ದ ಸುಳ್ಳು ಪ್ರಕರಣ ದಾಖಲಿಸಿ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಹಣ ವಸೂಲಿ ಮಾಡಿದ ನಂತರವೂ ಜಾತಿ ನಿಂದನೆ ಮಾಡಿ, ಲಾಠಿಯಿಂದ ಮನಸೋಇಚ್ಛೆ ಥಳಿಸಿದ್ದರಿಂದ ರೈತನ ಮೂತ್ರಪಿಂಡಕ್ಕೆ ಬಾವು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದರು. 

ಮನವಿ ಸಲ್ಲಿಸಿದ ನಂತರ ಮಾತನಾಡಿದ ರಾಜು ಖಾನಾಪುರ ಅವರು, "ಭ್ರಷ್ಟ, ಹಿಂದೂ ವಿರೋಧಿ, ದಲಿತ ವಿರೋಧಿ ಪಿಎಸ್‌ಐ ಈರಣ್ಣ ರಿತ್ತಿ ಅವರ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ ಪ್ರಕರಣ ದಾಖಲಾಗಿದ್ದರೂ, ಅದೇ ಅಧಿಕಾರಿಯನ್ನು ಅದೇ ಠಾಣೆಯಲ್ಲಿ ಮುಂದುವರೆಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಅಧಿಕಾರಿಯ ಅಮಾನತಿಗೆ ಆಗ್ರಹಿಸಿ ಈಗಾಗಲೇ ಬಂದ್ ಯಶಸ್ವಿಯಾಗಿದೆ," ಎಂದು ಹೇಳಿದರು. 

ವಿವಿಧ ಹಿಂದೂ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಂಚಾಲಕರ ಸಂತೋಷ್ ಕುರಿ ಅವರು ಮಾತನಾಡಿ "ಕಳೆದ 15 ದಿನಗಳಿಂದ ರೈತ ಸಂಘಟನೆಗಳು ಮತ್ತು ಹಿಂದೂ ಸಂಘಟನೆಗಳು ಧರಣಿ ನಡೆಸುತ್ತಿದ್ದರೂ ಸರ್ಕಾರ ಈ ಅಧಿಕಾರಿಯ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಳ್ಳದೆ ಭ್ರಷ್ಟ ಅಧಿಕಾರಿಯನ್ನು ರಕ್ಷಿಸುತ್ತಿದೆ. ಈ ಅಧಿಕಾರಿ ಬಹುತೇಕ ಅವಧಿಯನ್ನು ಶಿರಹಟ್ಟಿ, ಲಕ್ಷೇಶ್ವರದಲ್ಲಿಯೇ ಕಳೆಯುತ್ತಿದ್ದಾರೆ, ಏಕೆಂದರೆ ಸಮಾಜ ವಿರೋಧಿ ಕೃತ್ಯಗಳಿಗೆ ಇವರಿಗೆ ಇಲ್ಲಿ ಸಾಕಷ್ಟು 'ಆಮದನಿ' ದೊರೆಯುತ್ತಿದೆ. ಶಿರಹಟ್ಟಿ ತಾಲೂಕನ್ನು ಹೊರತುಪಡಿಸಿ ಬೇರೆ ಕಡೆಗೆ ಇವರಿಗೆ ನೌಕರಿ ನಡೆಯುವುದಿಲ್ಲ," ಎಂದು ಗಂಭೀರ ಆರೋಪ ಮಾಡಿದರು. 

 "ಒಂದು ವೇಳೆ ಸರ್ಕಾರ ಈಗಲೂ ಈ ಅಧಿಕಾರಿಯ ಮೇಲೆ ಕ್ರಮ ಜರುಗಿಸಲು ಹಿಂದೇಟು ಹಾಕಿದಲ್ಲಿ, ಗದಗ ಜಿಲ್ಲಾಧಿಕಾರಿಗಳ ಕಚೇರಿ, ಬೆಳಗಾವಿ ಐಜಿಪಿ ಕಚೇರಿ ಮಾತ್ರವಲ್ಲದೆ, ಬೆಂಗಳೂರಿನ ವಿಧಾನಸೌಧದ ಮುಂದೆ ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು," ಎಂದು ಅವರು ಎಚ್ಚರಿಕೆ ನೀಡಿದರು. ಈ ವೇಳೆ ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ರಾಮಣ್ಣ ಕಂಬಳಿ, ಶಂಕರ ಮರಾಠಿ, ಬಿ.ಡಿ ಪಲ್ಲೇದ್,ಶಿವಣ್ಣ ಲಮಾಣಿ, ಸಂತೋಷ ತೋಡರಕರ್, ಪರಶುರಾಮ ಡೋಂಕಬಳ್ಳಿ ಉಪಸ್ಥಿತಿದ್ದರು.