ಲೋಕದರ್ಶನ ವರದಿ
ಶಿರಹಟ್ಟಿ 15: ನಗರದ ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 128ನೇ ಜಯಂತೋತ್ಸವವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೇಳಗುವದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಮ್.ಕೆ.ಮುಗಳಿ ಡಾ. ಅಂಬೇಡ್ಕರ್ ಅವರು ಸಮಾನತೆಯ ಸಮಾಜಕ್ಕಾಗಿ ತಮ್ಮ ಬದುಕನ್ನೆ ಸಮರ್ಪಿಸಿಕೊಂಡ ದೇಶ ಕಂಡ ಅಪ್ರತಿಮ ನಾಯಕ ಹಾಗೂ ಚಿಂತಕರಾಗಿದ್ದರು. ಸ್ವಸಾಮಥ್ರ್ಯದಿಂದ ವಿಶ್ವಮಾನ್ಯರಾದ ಹಾಗೂ ಸರ್ವರಿಗೂ ಸಮಬಾಳು ಸಮಪಾಲು ತತ್ವದಲ್ಲಿ ಪ್ರಜಾಪ್ರಭುತ್ವದ ವಿಶೇಷ ಮಾನದಂಡವಾದ ಸಂವಿಧಾನ ನಮಗೊದಗಿಸಿದ ಡಾ. ಅಂಬೇಡ್ಕರ ರವರ ತತ್ವಾದರ್ಶ ಸರ್ವಕಾಲಕ್ಕು ಸರ್ವರಿಗೂ ಅನುಕರಣಿಯ. ಅವರ ತತ್ವಾದರ್ಶವನ್ನು ನಾವೆಲ್ಲ ನಮ್ಮ ಜೀವನದೂದ್ದಕ್ಕೂ ಅಳವಡಿಸಿಕೊಂಡು ನಡೆಯುವದು ನಾವು ಅವರಿಗೆ ಸಲ್ಲಿಸುವ ನೀಜವಾದ ಗೌರವವಾಗಿದೆ ಎಂದು ಹೇಳಿದರು.
ಅಶ್ವತ ಪೂಜಾರ, ಗುರುಪ್ರಸಾದ ಸಜ್ಜನ, ಮಂಜುನಾಥ ಹರಿಜನ, ಜೆ.ಐ.ಜಾಲಿಕಟ್ಟಿ, ದೇವಪ್ಪ ಸ್ವಾಮಿ, ಗುರುನಾಥ ಪಾತಾಳಿ, ಬಸವರಾಜ ಹೋಸುರ, ಅರುಣ ಪರಬತ, ಜಯಮ್ಮ ಸುಣಗಾರ, ಮಂಜುನಾಥ ಕಪ್ಪತ್ತನವರ, ಶರಣಪ್ಪ ಗೌಳಿ, ಉಡಚಪ್ಪ ನೀಲಣ್ಣವರ, ಮಲಿಯಪ್ಪ ಕಂಟೆಪ್ಪನವರ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.